• search

ಸಂಚಾರ ದಟ್ಟಣೆ ಕಡಿಮೆ ಮಾಡುವ ಪಾಡ್‌ ಟ್ಯಾಕ್ಸಿಗೆ ಒಪ್ಪಿಗೆ ಸಿಗುತ್ತಾ?

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಜೂನ್‌ 28: ಬೆಂಗಳೂರಿನ ವಾಹನ ದಟ್ಟಣೆ ಸಮಸ್ಯೆ ಪರಿಹರಿಸಲು ಬಿಬಿಎಂಪಿಯ ಖಾಸಗಿ ಸಹ ಭಾಗಿತ್ವದಲ್ಲಿ ಕೈಗೊಂಡಿರುವ ಪಾಡ್‌ ಟ್ಯಾಕ್ಸಿ ಯೋಜನೆ ಜಾರಿ ಪ್ರಸ್ತಾಪಕ್ಕೆ ಕೌನ್ಸಿಲ್‌ ಸಭೆ ಅನುಮೋದನೆ ನೀಡುವ ಸಾಧ್ಯತೆ ಇದೆ.

  ಟ್ರಿನಿಟಿ ವೃತ್ತದಿಂದ ವೈಟ್‌ಫೀಲ್ಡ್‌ವರೆಗೆ ಮತ್ತು ಹೊರವರ್ತುಲ ರಸ್ತೆಯ ಹೋಮ್‌ಫಾರಂವರೆಗೆ 30 ಕಿ.ಮೀ ಮಾರ್ಗದಲ್ಲಿ ಪಾಡ್‌ ಟ್ಯಾಕ್ಸಿಗಳು ಸಂಚರಿಸಲಿದೆ. ಪಾಡ್‌ ಟ್ಯಾಕ್ಸಿ ಯೋಜನೆಯ ಟೆಂಡರ್‌ ಅನ್ನು ಎಸ್‌ಪಿಆರ್‌ಟಿಎಸ್‌, ಅಲ್ಟ್ರಾ ಪಿಆರ್‌ಟಿ ಲಿಮಿಟೆಡ್‌ ಮತ್ತು ಎಂಬೆಸ್ಸಿ ಪ್ರಾಪರ್ಟಿ ಡೆವಲಪ್‌ಮೆಂಟ್ಸ್ ಪ್ರೈವೇಟ್‌ ಲಿಮಿಟೆಡ್ ಕಂಪನಿಗಳು ಪಡೆದುಕೊಂಡಿವೆ. ಈ ಟೆಂಡರ್‌ ಗೆ ಅನುಮೋದನೆ ಕೋರಿ ಪಾಲಿಕೆ ಆಯುಕ್ತರು ಕೌನ್ಸಿಲ್‌ ಸಭೆಯ ಮುಂದೆ ಪ್ರಸ್ತಾಪ ಮಂಡಲಿಸಲಿದ್ದಾರೆ.

  'ಪಾಡ್ ಕಾರ್ ಟ್ಯಾಕ್ಸಿ' ಯೋಜನೆಗೆ ಬಿಬಿಎಂಪಿಯಿಂದ ಜಾಗತಿಕ ಟೆಂಡರ್

  ಸುಗಮ ಸಂಚಾರ ವ್ಯವಸ್ಥೆಗೆ ಮತ್ತು ಸಾರ್ವಜನಿಕರಿಗೆ ಅಂತಿಮ ಹಂತದವರೆಗೆ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಮೆಟ್ರೋ ರೈಲು ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಬಸ್‌ ನಿಲ್ದಾಣಗಳನ್ನು ಸಂಪರ್ಕಿಸುವ 5 ಮಾರ್ಗಗಳಲ್ಲಿ ಪಾಡ್‌ ಟ್ಯಾಕ್ಸಿಗಳು ಸಂಚರಿಸಲಿದೆ.

  BBMP likely to give nod to POD taxi

  ಟ್ಯಾಕ್ಸಿ- ಕ್ಯಾಬ್ ಆಪರೇಟರ್ ಗಳಿಂದ ಶೋಷಣೆ ತಪ್ಪಿಸಲು ಸಿಎಂಗೆ ಮನವಿ

  ಈ ಟ್ಯಾಕ್ಸಿಗಳು ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ಮೆಟ್ರೋ ರೈಲು ನಿಲ್ದಾಣಗಳಿಗೆ ಪೂರಕ ಸೇವೆ ಒದಗಿಸಲಿವೆ. ಪ್ರತಿ ಪಾಡ್‌ ಟ್ಯಾಕ್ಸಿಯು 3 ಮೀಟರ್‌ ಉದ್ದ, 2.2 ಮೀಟರ್‌ ಅಗಲವಿದ್ದು ಒಮ್ಮೆಗೆ ಕನಿಷ್ಠ 6 ಮಂದಿ ಪ್ರಯಾಣಿಸಬಹುದಾಗಿದೆ. ಒಂದು ಕಿ.ಮೀ ಮಾರ್ಗ ನಿರ್ಮಾಣಕ್ಕೆ 50 ಕೋಟಿ ರೂ. ವೆಚ್ಚವಾಗಲಿದ್ದು, ಟೆಂಡರ್‌ ಪಡೆದಿರುವ ಕಂಪನಿಗಳು ಸಂಪೂರ್ಣ ಬಂಡವಾಳ ಹೂಡಲಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Most awaiting POD taxi service will resume soon as BBMP council expected to give green signal to the same. It will be helpful for the commuters who travel in metro to reach their end to end destination.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more