ವಸತಿ ನಿವಾಸದಲ್ಲಿನ ಮಾಂಟೆಸರಿಗಳ ಎತ್ತಂಗಡಿಗೆ ಬಿಬಿಎಂಪಿ ನೋಟಿಸ್

Posted By:
Subscribe to Oneindia Kannada

ಬೆಂಗಳೂರು, ಜನವರಿ 19: ವಸತಿ ಪ್ರದೇಶದಲ್ಲಿರುವ ಎಲ್ಲಾ ಮಾಂಟೆಸರಿ ಶಾಲೆಗಳು ತಮ್ಮ ವಾಸ್ತವ್ಯವನ್ನು ವಾಣಿಜ್ಯ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಬೆಂಗಳೂರು ಮಹಾ ನಗರ ಪಾಲಿಕೆಯು (ಬಿಬಿಎಂಪಿ) ಆದೇಶ ಹೊರಡಿಸಿದೆ. ಅಲ್ಲದೆ ಮುಂದಿನ ಮೂರು ದಿನಗಳಲ್ಲೇ ಈ ಸ್ಥಳಾಂತರ ನಡೆಯಬೇಕು ಎಂದು ಹುಕುಂ ರವಾನಿಸಿದೆ. ಇದಕ್ಕೆ ತಪ್ಪಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದೆಂದೂ ಎಚ್ಚರಿಸಿದೆ.

ಮಂಗಳವಾರವೇ ಈ ನೋಟೀಸ್ ಜಾರಿಗೊಂಡಿದ್ದು, ಶಾಲೆಗಳನ್ನು ಸ್ಥಳಾಂತರಗೊಳಿಸಲು ಗುರುವಾರ (ಜನವರಿ 19) ಕೊನೆಯ ದಿನವಾಗಿದೆ.

BBMP issue the notice to all pre-schools of bangalore to vacate residencial areas

ವಸತಿ ಪ್ರದೇಶದಲ್ಲಿ ಶಾಲೆಗಳು ನಡೆಯುತ್ತಿರುವುದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆಗಳಾಗಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಅಲ್ಲದೆ, ನಿವಾಸಕ್ಕಾಗಿ ಇರುವ ಮನೆಗಳಲ್ಲಿ ಶಾಲೆಗಳನ್ನು ನಡೆಸುವುದೂ ಅಪರಾಧವೆಂದು ಅದು ತನ್ನ ನೋಟೀಸ್ ನಲ್ಲಿ ಉಲ್ಲೇಖಿಸಿದೆ.

ಈ ಬಗ್ಗೆ ಹೆಚ್ಚಿನ ವಿವರ ನೀಡಿದ ಬಿಬಿಎಂಪಿಯ ಹೆಸರನ್ನೇಳಲು ಇಚ್ಛಿಸದ ಅಧಿಕಾರಿಯೊಬ್ಬರು, "ವಸತಿ ಪ್ರದೇಶಗಳಲ್ಲಿ ಶಾಲೆಗಳನ್ನು ನಡೆಸುವುದರಿಂದ ಅನೇಕರಿಗೆ ತೊಂದರೆಯಗುತ್ತಿರುವುದಾಗಿ ಅನೇಕ ನಿವಾಸಿಗಳು ದೂರನ್ನಿತ್ತಿದ್ದಾರೆ. ಹಾಗಾಗಿ ನಗರದ ಸುಮಾರು 4 ಸಾವಿರ ಮಾಂಟೆಸರಿ ಶಾಲೆಗಳು ಕೂಡಲೇ ಸ್ಥಳವನ್ನು ಬದಲಾಯಿಸುವಂತೆ ಆದೇಶಿಸಲಾಗಿದೆ'' ಎಂದರು.

ನ್ಯಾಯಾಲಯಕ್ಕೆ ಪ್ರಕರಣ?
ವಸತಿ ಶಾಲೆಯನ್ನು ಮೂರೇ ದಿನಗಳಲ್ಲಿ ಸ್ಥಳಾಂತರಿಸಬೇಕೆಂಬ ಬಿಬಿಎಂಪಿ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಕರ್ನಾಟಕ ಕೌನ್ಸಿಲ್ ಆಫ್ ಪ್ರೀ ಸ್ಕೂಲ್ಸ್ ರೆಟಾರ್ಟ್ಸ್ ನ ಕಾರ್ಯದರ್ಶಿ ಪೃಥ್ವಿ ಬನವಾಸಿ ತಿಳಿಸಿದ್ದಾರೆ.

"ಪ್ರೀ ಸ್ಕೂಲ್ ಗಳು ಸ್ವಾಯತ್ತ ಸಂಸ್ಥೆಗಳಾಗಿವೆ. ಬಿಬಿಎಂಪಿಯು ಈ ಶಾಲೆಗಳ ಮೇಲೆ ಪ್ರಹಾರ ನಡೆಸಲು ಮುಂದಾಗಿರುವುದರ ವಿರುದ್ಧ ನಾವು ಶಿಕ್ಷಣ ಇಲಾಖೆಯ ಮೊರೆ ಹೋಗಲಿದ್ದೇವೆ. ಈ ವಿಚಾರವನ್ನು ನಾವು ಶಿಕ್ಷಣ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇತರ ಇಲಾಖೆಗಳ ಗಮನಕ್ಕೆ ತರುತ್ತೇವೆ" ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BBMP -Bengaluru’s civic body- has issued notices to several pre-schools in ‘residential areas’ of the city, asking them to relocate to commercial areas.
Please Wait while comments are loading...