ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಡ್ ಟ್ಯಾಕ್ಸಿಗೆ 30 ಕಿ.ಮೀ ಮಾರ್ಗ: ಜಾರಿಗೆ ಟೆಂಡರ್ ಆಹ್ವಾನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 27 : ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲು ಫೀಡರ್ ಸೇವೆಗಾಗಿ 'ಪಾಡ್ ಟ್ಯಾಕ್ಸಿ'ಗಳ ಸೇವೆಯನ್ನು ಜಾರಿಗೆ ತರಲು ಬಿಬಿಎಂಪಿ ನಿರ್ಧರಿಸಿದೆ. ಅದರ ಭಾಗವಾಗಿ ಬಿಬಿಎಂಪಿ ಗ್ಲೋಬಲ್ ಟೆಂಡರ್ ಆಹ್ವಾನಿಸಿದೆ.

ಒಟ್ಟು 30 ಕಿ.ಮೀ ಮಾರ್ಗಕ್ಕೆ50 ಕೋಟಿ ರೂ. ನಿಗದಿಪಡಿಸಲಾಗಿದೆ. ಸಂಚಾರ ದಟ್ಟಣೆ ಸಮಸ್ಯೆ, ರಸ್ತೆ ಗುಂಡಿಗಳಲ್ಲಿ ವಾಹನ ಸವಾರರ ಪರದಾಟ ನಿವಾರಣೆಗೆ ಪಾಡ್ ಟ್ಯಾಕ್ಸಿ (ಕೇಬಲ್ ಕಾರ್) ಯೋಜನೆ ಜಾರಿಗೆ ಬಿಬಿಎಂಪಿ ಯೋಜನೆ ರೂಪಿಸಿದೆ.

'ಪಾಡ್ ಕಾರ್ ಟ್ಯಾಕ್ಸಿ' ಯೋಜನೆಗೆ ಬಿಬಿಎಂಪಿಯಿಂದ ಜಾಗತಿಕ ಟೆಂಡರ್'ಪಾಡ್ ಕಾರ್ ಟ್ಯಾಕ್ಸಿ' ಯೋಜನೆಗೆ ಬಿಬಿಎಂಪಿಯಿಂದ ಜಾಗತಿಕ ಟೆಂಡರ್

ಐಐಎಸ್ ಸಿ ಸಲ್ಲಿಸಿರುವ ಕಾರ್ಯ ಸಾದ್ಯತಾ ವರದಿ ಆಧಾರದ ಮೇಲೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸಲಾಗಿದೆ. ಡಿಎಫ್ ಆರ್ ನಂತೆ 10 ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳಲ್ಲಿ ನಾಲ್ಕು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕಿಸುವಂತೆ ಮಾರ್ಗದ ವಿನ್ಯಾಸಗೊಳಿಸಲಾಗಿದೆ.

BBMP invites bid for Pod Taxi to connect Namma Metro

ಪ್ರತಿ. ಕಿ.ಮೀ ಗೆ 1.5 ಕೋಟಿ ರೂ. ವೆಚ್ಚ: ಪಾಡ್ ಟ್ಯಾಕ್ಸಿಯ 1 ಕಿ.ಮೀ ಮಾರ್ಗ ನಿರ್ಮಾಣಕ್ಕೆ 1.5 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಅದರಂತೆ ಒಟ್ಟು 30 ಕಿ.ಮೀ ಉದ್ದದ ಪಾಡ್ ಟ್ಯಾಕ್ಸಿ ಮಾರ್ಗ ನಿರ್ಮಿಸಲಾಗುತ್ತಿದೆ. ಒಟ್ಟು ಯೋಜನೆ ಮೊತ್ತವನ್ನು 50 ಕೋಟಿ ರೂ.ಗೆ ನಿಗದಿ ಮಾಡಲಾಗಿದೆ.

ಗುತ್ತಿಗೆ ಪಡೆಯುವ ಸಂಸ್ಥೆ ಮಾರ್ಗ ವಿನ್ಯಾಸ ಮಾಡಿ ನಿರ್ಮಾಣ ಮಾಡಬೇಕಿದೆ. ಅಲ್ಲದೆ ನಿರ್ಮಾಣ ಮಾಡುವ ಸಂಸ್ಥೆ 20 ವರ್ಷ ನಿರ್ವಹಣೆ ಮಾಡಬೇಕು.ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ ಪಾಡ್ ಟ್ಯಾಕ್ಸಿ ಮೆಟ್ರೋರೈಲಿಗೆ ಫೀಡರ್ ರೀತಿ ಸೇವೆ ಒದಗಿಸಲಿದೆ.

ಅದರಂತೆ, ಮೊದಲ ಹಂತದಲ್ಲಿ ನಿರ್ಮಾಣವಾಗಿರುವ ಟ್ರಿನಿಟಿ ವೃತ್ತ, ಬೈಯ್ಯಪ್ಪನಹಳ್ಳಿ ಹಾಗೂ ಎರಡನೇ ಹಂತದಲ್ಲಿ ನಿರ್ಮಾಣವಾಗಲಿರುವ ದೊಡ್ಡನೆಕ್ಕುಂದಿ ಬಳಿಯ ವಿಶ್ವೇಶ್ವರಯ್ಯ ಕೈಗಾರಿಕಾ ಎಸ್ಟೇಟ್ ಹಾಗೂ ವೈಟ್ ಫೀಲ್ಡ್ ಬಳಿಯ ಉಜ್ವಲ ವಿದ್ಯಾಲಯ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕಿಸುವಂತೆ ಪಾಡ್ ಟ್ಯಾಕ್ಸಿ ಮಾರ್ಗ ನಿರ್ಮಿಸಲಾಗುತ್ತದೆ.

ಎಲ್ಲೆಲ್ಲಿ ನಿಲ್ದಾಣ: ದೊಮ್ಮಲೂರು, ಬಿಇಎಂಎಲ್, ಎಚ್ ಎಎಲ್ ವಿಮಾನ ನಿಲ್ದಾಂ, ಅಗರಂ, ಫನ್ ಸಿಟಿ, ಗಾಂಧಿನಗರ, ಬ್ರೂಕ್ ಫೀಲ್ಡ್, ವರ್ಜಿನಿಯಾ ಮಾಲ್, ವೈಟ್ ಫೀಲ್ಡ್ ನಿಲ್ದಾಣಗಳನ್ನು ಮಾಡಲಾಗುತ್ತದೆ.

English summary
To connect Namma metro stations at various places in Bengaluru. BBMP has invited global tender for Pod taxi service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X