ಬೆಂಗಳೂರು: ಟೌನ್ ಹಾಲ್ ರೇಟ್ ಅಬ್ಬಬ್ಬಾ! ಅಷ್ಟೊಂದಾ!

Posted By:
Subscribe to Oneindia Kannada

ಬೆಂಗಳೂರು, ಸೆ. 24: ಸರ್‌ ಪುಟ್ಟಣ್ಣ ಚೆಟ್ಟಿ ಪುರಭವನದ ಬಾಡಿಗೆಯನ್ನು ಮತ್ತೊಮ್ಮೆ ಪರಿಷ್ಕರಿಸಲಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಹೊರಡಿಸಿರುವ ಆದೇಶದಂತೆ ಟೌನ್ ಹಾಲ್ ಬಾಡಿಗೆ ದಿನವೊಂದಕ್ಕೆ 35 ಸಾವಿರ ರು ನಿಂದ 75 ಸಾವಿರ ರು ತನಕ ಇದೆ.

ಬಿಬಿಎಂಪಿ ಲೆಕ್ಕದ ಪ್ರಕಾರ ಬಾಡಿಗೆ ದರ 1.25 ಲಕ್ಷ ರು ನಿಂಡದ 75 ಸಾವಿರ ರು ಗೆ ಇಳಿಸಲಾಗಿದೆಯಂತೆ. ಸರ್ಕಾರದಿಂದ ಅನುದಾನ ಪಡೆದ ಅಂಧರ ಹಾಗೂ ಅಂಗವಿಕಲರ ಸಂಸ್ಥೆಗಳು ಕಾರ್ಯಕ್ರಮ, ಕನ್ನಡ ಪರ ಕಾರ್ಯಕ್ರಮಗಳಿಗೆ ಮಾತ್ರ ಬಾಡಿಗೆಯಲ್ಲಿ ರಿಯಾಯಿತಿ ಸಿಗಲಿದೆ. ರಿಯಾಯಿತಿ ಪಟ್ಟಿಯಲ್ಲಿ ರಾಜ್ಯ ಸರ್ಕಾರ, ಪಾಲಿಕೆ ಹಾಗೂ ಎಸ್‌ಸಿ/ಎಸ್‌ಟಿ ಸೇವಾ ಸಂಸ್ಥೆಗಳ ಕಾರ್ಯಕ್ರಮಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಿಂದ ನಡೆಯುವ ಸಮಾರಂಭಗಳು ಸೇರಿವೆ.

BBMP increases Town Hall Rent Tariff

ಆದರೆ, ವರ್ಷದಲ್ಲಿ ಒಂದು ಬಾರಿ ಒಂದು ಆಯೋಜನಾ ಸಂಸ್ಥೆಗೆ ಮಾತ್ರ ರಿಯಾಯಿತಿ ದರದಲ್ಲಿ ಬಾಡಿಗೆ ಪಡೆಯಲು ಅವಕಾಶವಿದೆ. ಸಭಾಂಗಣದಲ್ಲಿ ಇರುವ ದೀಪದ ವ್ಯವಸ್ಥೆ ಹೊರತುಪಡಿಸಿ, ಪ್ರತ್ಯೇಕ ದೀಪಾಲಂಕಾರದ ವ್ಯವಸ್ಥೆ ಮಾಡುವಂತಿಲ್ಲ. ಪ್ಲಾಸ್ಟಿಕ್‌ ಬ್ಯಾಗ್‌ಗಳು ಹಾಗೂ ನೀರಿನ ಬಾಟಲಿಗಳನ್ನು ಸಭಾಂಗಣದಲ್ಲಿ ನಿಷೇಧಿಸಲಾಗಿದೆ.

ಪುರಭವನದ ಉತ್ತರ ಭಾಗದ ಉದ್ಯಾನಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಚಹಾ-ತಿಂಡಿ ವ್ಯವಸ್ಥೆ ಮಾಡಬಹುದು. ಆದರೆ, ಒಣ ಹಾಗೂ ಹಸಿ ತ್ಯಾಜ್ಯ ಪ್ರತ್ಯೇಕಿಸಿ, ವಿಲೇವಾರಿ ಮಾಡುವುದು ಸಂಘಟಕರ ಜವಾಬ್ದಾರಿ. ತಪ್ಪಿದರೆ ತ್ಯಾಜ್ಯ ವಿಲೇವಾರಿಗೆ ವ್ಯಯವಾಗುವ ಮೊತ್ತದ ಎರಡಷ್ಟು ದಂಡ ವಸೂಲಿ ಮಾಡಲಾಗುತ್ತದೆ.

ಕಾರ್ಯಕ್ರಮಕ್ಕೂ 45 ದಿನಗಳಿಗೆ ಮುಂಚಿತವಾಗಿ ಸಭಾಂಗಣ ಕಾಯ್ದಿರಿಸಬಹುದು. ಒಂದು ಬಾರಿ ಗರಿಷ್ಠ ಏಳು ದಿನಗಳ ಅವಧಿಗೆ ಬಾಡಿಗೆ ನೀಡಲಾಗುತ್ತದೆ. 30 ದಿನಗಳಿಗಿಂತ ಮುಂಚೆ ಕಾರ್ಯಕ್ರಮ ರದ್ದುಗೊಳಿಸಿದರೆ ಶೇ 50ರಷ್ಟು, 11ರಿಂದ 30 ದಿನಗಳೊಳಗೆ ಕಾರ್ಯಕ್ರಮ ರದ್ದುಗೊಳಿಸಿದರೆ ಶೇ 25ರಷ್ಟು ಬಾಡಿಗೆ ಮೊತ್ತವನ್ನು ಮಾತ್ರ ವಾಪಸ್‌ ಮಾಡಲಾಗುತ್ತದೆ.

ಕಾರ್ಯಕ್ರಮದ ದಿನಾಂಕದಿಂದ ಹತ್ತು ದಿನಗಳೊಳಗೆ ರದ್ದುಪಡಿಸಿದಲ್ಲಿ ಪೂರ್ಣ ಮೊತ್ತವನ್ನು ಮುಟ್ಟಗೋಲು ಹಾಕಿಕೊಳ್ಳಲಾಗುತ್ತದೆ. ಚುನಾವಣೆ, ಮದುವೆ, ಮುಂಜಿವೆ, ನಾಮಕರಣ, ಆರತಕ್ಷತೆ, ಪ್ರಾಣಿ, ಪಕ್ಷಿಗಳ ಪ್ರದರ್ಶನ ಹಾಗೂ ಸರ್ಕಾರ ನಿಷೇಧಿಸಿದ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bruhat Bengaluru Mahanagara Palike has enhanced the rent of Sir Puttanna Chetty Town Hall ranging from Rs 35,000 to Rs 75,000 a day.
Please Wait while comments are loading...