ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 8 ಕಡೆ ಹೆಲಿಪ್ಯಾಡ್‌, ಐದು ಕಡೆ ಜಾಗ ಸಿಕ್ತು, ಎಲ್ಲೆಲ್ಲಿ ನೋಡಿ

By Nayana
|
Google Oneindia Kannada News

ಬೆಂಗಳೂರು, ಜು.17: ಬಿಬಿಎಂಪಿ ಕನಸಿನ ಕೂಸಾಗಿರುವ ಹೆಲಿಪ್ಯಾಡ್‌ ನಿರ್ಮಾನ ಯೋಜನೆ ನನಸಾಗುವ ಹಂತದಲ್ಲಿದೆ. ನಗರದಲ್ಲಿ ಎಂಟು ದಿಕ್ಕುಗಳಲ್ಲೂ ಹೆಲಿಪ್ಯಾಡ್‌ ನಿರ್ಮಿಸಲು ಜಾಗ ದೊರೆತಿದೆ.

ಇದಕ್ಕಾಗಿ ಐದು ಕಡೆ ಈಗಾಗಲೇ ಜಾಗಗಳನ್ನು ಗುರುತಿಸಿದೆ. ಉಳಿದೆಡೆ ಹೆಲಿಪ್ಯಾಡ್‌ ನಿರ್ಮಾಣಕ್ಕೆ ಸೂಕ್ತ ಭೂಮಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಮಿತಿಮೀರುತ್ತಿದೆ. ಇದರಲ್ಲಿ ರೋಗಿಗಳಿಗೆ ತುರ್ತು ಆರೋಗ್ಯ ಸೇವೆ ಕಲ್ಪಿಸಲು ಹರಸಾಹಸ ಪಡುವಂತಾಗಿದೆ. ಹಾಗೆಯೇ ನಗರಕ್ಕೆ ಆಗಮಿಸುವ ಗಣ್ಯರ ಸುಗಮ ಸಂಚಾರವನ್ನು ಕಲ್ಪಿಸುವ ಸಲುವಾಗಿ ಕೆಲವೆಡೆ ಟ್ರಾಫಿಕ್‌ ಜಾಮ್‌ ಆಗುತ್ತದೆ.

3 ಸಾವಿರ ಹೊಸ ಕಟ್ಟಡಗಳ ತೆರಿಗೆ ಬಾಕಿ: ಬಿಬಿಎಂಪಿ ಅಧಿಕಾರಿಗಳ ಜಾಣ ಕುರುಡು3 ಸಾವಿರ ಹೊಸ ಕಟ್ಟಡಗಳ ತೆರಿಗೆ ಬಾಕಿ: ಬಿಬಿಎಂಪಿ ಅಧಿಕಾರಿಗಳ ಜಾಣ ಕುರುಡು

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಲಿಪ್ಯಾಡ್‌ ನಿರ್ಮಿಸಲು ಪಾಲಿಕೆ ಕ್ರಮ ಕೈಗೊಂಡಿದೆ. ಹೆಲಿಪ್ಯಾಡ್‌ ನಿರ್ಮಿಸುವ ಖಾಸಗಿ ಏಜೆನ್ಸಿಯೊಂದು ವಿಸ್ತೃತ ವರದಿಯೊಂದನ್ನು ತಯಾರಿಸುತ್ತಿದೆ. ನಿರ್ಮಾಣ ಕಾಮಗಾರಿಗೆ ಟೆಂಡರ್‌ ಕರೆಯಲು ಸಿದ್ಧತೆ ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂಟು ವಲಯಗಳಿದ್ದು ಎಲ್ಲೆಡೆ ಹೆಲಿಪ್ಯಾಡ್‌ ನಿರ್ಮಿಸಲು 2018-19 ನೇ ಸಾಲಿನ ಬಜೆಟ್‌ನಲ್ಲಿ 5 ಕೋಟಿ ರೂ. ಮೀಸಲಿಡಲಾಗಿದೆ.

BBMP identifies land for helipad at five places

ಬಿಬಿಎಂಪಿಯು ಹಲವು ಕಲ್ಲು ಕ್ವಾರಿಗಳಲ್ಲಿ ಕಸವನ್ನು ಸುರಿದು ಭರ್ತಿ ಮಾಡಿದೆ, ಇದೇ ಸ್ಥಳಗಳಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗುತ್ತದೆ. ಹೆಲಿಪ್ಯಾಡ್‌ ಘಟಕಗಳ ಬಳಿ ಹತ್ತಾರು ಎಕರೆ ಜಮೀನು ಖಾಲಿ ಬಿದ್ದಿದ್ದು ಇದನ್ನು ಹೆಲಿಪ್ಯಾಡ್‌ಗಳಿಗೆ ಬಳಸಿಕೊಳ್ಳಲಾಗುತ್ತದೆ.ಬೊಮ್ಮನಹಳ್ಳಿ ವಲಯದ ಬಿಂಗೀಪುರ, ದಕ್ಷಿಣ ವಲಯದ ಅಂಜನಾಪುರ, ಯಲಹಂಕ ವಲಯದ ಬಾಗಲೂರುಮ ಬೆಳ್ಳಹಳ್ಳಿ, ದಾಸರಹಳ್ಳಿ ವಲಯದ ಮಲ್ಲಸಂದ್ರದಲ್ಲಿ ಹೆಲಿಪ್ಯಾಡ್‌ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ.

English summary
BBMP has identified land for construction of helipad at five different places in Bengaluru. These helipads will be utilize for heli ambulance service which was intended provide emergency health care in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X