ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

242 ಆಸ್ತಿಗಳಿಂದ ರಾಜನಾಲಾ ಒತ್ತುವರಿ: ಬಿಬಿಎಂಪಿಯಿಂದ ತೆರವು ಶೀಘ್ರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 10: ರಾಜಕಾಲುವೆಯನ್ನು ಒತ್ತುವರಿ ಮಾಡಿರುವ ಜಾಗವನ್ನು ಬಿಬಿಎಂಪಿ ಗುರುತಿಸಿದೆ ಒಟ್ಟು 242 ಸರ್ವೇ ನಂಬರ್‌ಗಳು ಒತ್ತುವರಿಯಾಗಿವೆ ಎಂದು ತಿಳಿದುಬಂದಿದೆ, ಶೀಘ್ರವೇ ಇದೆಲ್ಲವನ್ನೂ ಬಿಬಿಎಂಪಿ ತೆರವುಗೊಳಿಸಲಿದೆ.

ಭೂಮಾಪಕರು ಗುರುತಿಸಿರುವ ಜಾಗಗಳಲ್ಲಿ ನಿಖರ ಒತ್ತುವರಿ ಗುರುತು ಮಾಡಿದ ನಂತರ ಕಾರ್ಯಾಚರಣೆ ಆರಂಭಿಸಲಾಗುತ್ತದೆ. ಎರಡು ವರ್ಷಗಳ ಹಿಂದೆ ಕಾರ್ಯಚರಣೆ ಆರಂಭಿಸಿದ್ದರೂ ಕೂಡ ಕ್ರಮೇಣ ಸ್ಥಗಿತಗೊಳಿಸಲಾಗಿತ್ತು. ಒತ್ತುವರಿ ಗುರುತಿಗೆ ನೇಮಿಸಲಾಗಿದ್ದ ಭೂಮಾಪಕರು ನೀಡಿದ ವರದಿಯನ್ನು ಪರಿಶೀಲಿಸಲಾಗುತ್ತಿದೆ.

ಬಿಬಿಎಂಪಿಯಿಂದ ಮತ್ತೆ ರಾಜಾಕಾಲುವೆ ಒತ್ತುವರಿ ತೆರವು ಬಿಬಿಎಂಪಿಯಿಂದ ಮತ್ತೆ ರಾಜಾಕಾಲುವೆ ಒತ್ತುವರಿ ತೆರವು

ಡಿಸಿಎಂ ಜಿ ಪರಮೇಶ್ವರ್ ಸೂಚನೆಯಂತೆ ನೇಮಕವಾಗಿದ್ದ 10 ಭೂಮಾಪಕರು ಕಳೆದೆರೆಡು ತಿಂಗಳಿಂದ ರಾಜಕಾಲುವೆ ಒತ್ತುವರಿ ಆಗಿರುವ ಪ್ರದೇಶಗಳ ಸರ್ವೇ ನಡೆಸಿದ್ದಾರೆ. 21 ಪ್ರದೇಶಗಳಲ್ಲಿನ 242 ಸರ್ವೇ ಸಂಖ್ಯೆಗಳ ಆಸ್ತಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದನ್ನು ಪತ್ತೆ ಮಾಡಲಾಗಿದೆ.

BBMP identifies encroachment in 242 survey numbers

ರಾಜಕಾಲುವೆಗೆ ತ್ಯಾಜ್ಯ, ಜಲಮಂಡಳಿ ವಿರುದ್ಧ ದೂರು ರಾಜಕಾಲುವೆಗೆ ತ್ಯಾಜ್ಯ, ಜಲಮಂಡಳಿ ವಿರುದ್ಧ ದೂರು

ನಿಖರ ಒತ್ತುವರಿ ಗುರುತು ಮಾಡಲು ಭೂಮಾಪಕರಿಗೆ ಇನ್ನೊಂದು ತಿಂಗಳ ಬೇಕಾಗಿದ್ದು, ಬಳಿಕ ತೆರವು ಕಾರ್ಯಾಚರಣೆ ಆರಂಭವಾಗಲಿದೆ. ಈ ಬಾರಿ ಒತ್ತಡಕ್ಕೆ ಮಣಿಯದೆ ಮುಂದಿನ ಮಳೆಗಾಲದೊಳಗೆ ಕಾರ್ಯಾಚರಣೆ ಬಿಬಿಎಂಪಿ ನಿರ್ಧರಿಸಿದೆ. ಈ ಹಿಂದೆ ಬಿಬಿಎಂಪಿ ಅಧಿಕಾರಿಗಳು ಗುರುತಿಸಿರುವಂತೆ 1953 ಆಸ್ತಿಗಳಿಂದ ಒತ್ತುವರಿಯಾಗಿದೆ ಎಂದು ವರದಿ ಸಿದ್ಧಪಡಿಸಲಾಗಿತ್ತು. ಆ ಪೈಕಿ 1225 ಆಸ್ತಿಗಳಿಂದಾದ ಒತ್ತುವರಿ ತೆರವು ಮಾಡಲಾಗಿದೆ.

English summary
BBMP has identified 242 properties which encroached main channel and operation will be taken out to remove the same soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X