ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರಿಗೆ ಸೆಸ್ ಹೇರುವ ನಿರ್ಧಾರದಿಂದ ಸದ್ಯಕ್ಕೆ ಹಿಂದೆ ಸರಿದ ಬಿಬಿಎಂಪಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 28: ಬೆಂಗಳೂರು ನಾಗರಿಕರ ಆಸ್ತಿಗಳ ಮೇಲೆ ಶೇ.2ರಷ್ಟು ಸಾರಿಗೆ ಉಪಕರವನ್ನು ಹೇರಲು ಮುಂದಾಗಿದ್ದ ಬಿಬಿಎಂಪಿ ಸಾರ್ವಜನಿಕರಿಂದ ವ್ಯಕ್ತವಾದ ವಿರೋಧದಿಂದಾಗಿ ನಿರ್ಧಾರ ಕೈಬಿಟ್ಟಿದೆ.

ಮಂಗಳವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಶೇ.2ರಷ್ಟು ಸಾರಿಗೆ ಉಪಕರವನ್ನು ಹೇರುವ ಪ್ರಸ್ತಾವವನ್ನು ಇರಿಸಿತ್ತು. ಬದಲಾಗಿ ಕೌನ್ಸಿಲ್ ಸಭೆಯಲ್ಲಿ ಇನ್ನಷ್ಟು ವಿಸ್ತೃತವಾಗಿ ಚರ್ಚಿಸಿ ತೆರಿಗೆ ಹೇರದಿರಲು ನಿರ್ಧರಿಸಲಾಯಿತು. ಬೆಂಗಳೂರಿನ ಸಾರ್ವಜನಿಕ ಸ್ವಾಮ್ಯದ ಸಾರಿಗೆ ಸಂಸ್ಥೆಯಾದ ಬಿಎಂಟಿಸಿ ರಸ್ತೆ ಸಮರ್ಪಕವಾಗಿಲ್ಲದಿರುವುದರಿಂದ ನಿಗಮಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ.

 ಬೆಂಗಳೂರಿಗರ ಮೇಲೆ ಸಾರಿಗೆ ಉಪಕರ:ಅನಂತ ಕುಮಾರ್ ವಿರೋಧ ಬೆಂಗಳೂರಿಗರ ಮೇಲೆ ಸಾರಿಗೆ ಉಪಕರ:ಅನಂತ ಕುಮಾರ್ ವಿರೋಧ

ಹದಗೆಟ್ಟ ರಸ್ತೆಗಳಲ್ಲಿ ಬಸ್‌ಗಳು ನಿಗದಿತ ಅವಧಿಯಲ್ಲೇ ಹುಜರಿಗೆ ಹಾಕುವ ಪರಿಸ್ಥಿತಿ ಬಂದೊದಗಿದೆ ಹೀಗಾಗಿ ಬೆಂಗಳೂರಿನ ರಸ್ತೆಗಳಿಂದ ತೊಂದರೆ ಉಂಟಾಗುವ ಕಾರಣದಿಂದ ಶೇ.2ರಷ್ಟನ್ನು ಬಿಎಂಟಿಸಿಗೆ ತಲುಪಿಸಬೇಕು ಎನ್ನುವ ಪ್ರಸ್ತಾವನೆ ಸಲ್ಲಿಸಿತ್ತು.

BBMP hold backs to impose 2percent transport cess!

ಬಿಎಂಟಿಸಿ ಬೇಡಿಕೆ ಆಧರಿಸಿ ಬಿಬಿಎಂಪಿ ಶೇ.2ರಷ್ಟು ಸಾರಿಗೆ ಸೆಸ್ ನ್ನು ನಾಗರಿಕರ ಮೇಲೆ ಹೇರಲು ಮುಂದಾಗಿತ್ತು. ಬಿಬಿಎಂಪಿ ನಿರ್ಧಾರಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹಲವಾರು ಕ್ಷೇಮಾಭಿವೃದ್ಧಿ ಸಂಸ್ಥೆಗಳು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.

 ಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆ ಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆ

ಕೇಂದ್ರ ಸಚಿವ ಅನಂತಕುಮಾರ್ ಕೂಡ ಬಿಬಿಎಂಪಿ ವಿಧಿಸಲು ಹೊರಟಿದ್ದ ಸಾರಿಗೆ ಪರಿಕರ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ಬೊಬಿಎಂಪಿ ಸಭೆಯಲ್ಲಿ ವಾದವಿವಾದ ಉಂಟಾಗಿತ್ತು. ಅಂತಿಮವಾಗಿ ಸೆಸ್ ಹೇರುವ ನಿರ್ಧಾರದಿಂದ ಬಿಬಿಎಂಪಿ ಹಿಂದೆ ಸರಿದಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕೈಬಿಡುತ್ತದೆಯಾ ಅಥವಾ ಒತ್ತಾಯಪೂರ್ವಕವಾಗಿ ಹೇರಲು ಯತ್ನಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

English summary
BBMP has decided to discuss more and till hold back the proposal of impose two percent transport cess on property holders. The council meeting has taken this decision on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X