ಬೆಂಗಳೂರಿಗರೇ ಗಮನಿಸಿ: ಏಪ್ರಿಲ್ 01 ರಿಂದ ಆಸ್ತಿ ತೆರಿಗೆ ಹೆಚ್ಚಳ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್ ಪ್ರಸ್ತಾವಿಸಿರುವ ಆಸ್ತಿ ತೆರಿಗೆ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರದ ಅನುಮೋದನೆ ಸಿಕ್ಕಿದೆ. ತೆರಿಗೆಯನ್ನು ಪರಿಷ್ಕರಿಸಲು ಸೋಮವಾರ ಮಂಡನೆಯಾದ ಬಿಬಿಎಂಪಿ ಬಜೆಟ್‌ನಲ್ಲೂ ಪ್ರಸ್ತಾಪಿಸಲಾಗಿದೆ. ಹೀಗಾಗಿ ಏ. 1, 2016 ರಿಂದ ಶೇ 20 ರಿಂದ 25ರ ತನಕ ತೆರಿಗೆ ದರ ಹೆಚ್ಚಳವಾಗಲಿದೆ.

ಕೆಎಂಸಿ ಕಾಯ್ದೆಯ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆಯನ್ನು ಪರಿಷ್ಕರಿಸಬೇಕು. ಆದರೆ, ಕಳೆದ ಎಂಟು ವರ್ಷಗಳಿಂದ ಆಸ್ತಿ ತೆರಿಗೆಯನ್ನು ಹೆಚ್ಚಿಸಿರಲಿಲ್ಲ ಎಂದು ಬಜೆಟ್ ಭಾಷಣದಲ್ಲಿ ಎಂ ಶಿವರಾಜ್ ಹೇಳಿದರು.[ಬಿಬಿಎಂಪಿ ಬಜೆಟ್ 2016-17, ಮುಖ್ಯಾಂಶಗಳು]

BBMP hikes property taxes by 20 to 25 % from April 1

ಮಾಲ್, ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ, ಕೈಗಾರಿಕಾ ಕಟ್ಟಡ, ಕಚೇರಿ, ಮಾರುಕಟ್ಟೆಗಳು ವಸತಿಯೇತರ ಕಟ್ಟಡಗಳ ವ್ಯಾಪ್ತಿಗೆ ಬರಲಿದೆ. ವಸತಿ ಕಟ್ಟಡಗಳಿಗೆ ಶೇ 20 ರಿಂದ 25ರಷ್ಟು ತೆರಿಗೆ ಹೆಚ್ಚಳವಾಗಲಿದೆ.[ಬಿಬಿಎಂಪಿ: ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?]

ನಗರ ವ್ಯಾಪ್ತಿಯಲ್ಲಿರುವ ಕಟ್ಟಡಗಳು ಎ, ಬಿ ಹಾಗೂ ಸಿ ವಲಯಕ್ಕೆ ಸೇರುತ್ತದೆ. ಹೊಸದಾಗಿ ಸೇರ್ಪಡೆಯಾಗಿರುವ ಹಳ್ಳಿಗಳು ಇ ಹಾಗೂ ಎಫ್ ವಲಯಕ್ಕೆ ಸೇರಲಿವೆ. ಕೋರಮಂಗಲ ಹಾಗೂ ಹೆಬ್ಬಾಳದಂಥ ಪ್ರದೇಶದಲ್ಲಿ ಆಸ್ತಿ ತೆರಿಗೆ ಶೇ 150ರಷ್ಟು ಏರಿಕೆ ನಿರೀಕ್ಷಿಸಬಹುದು.

ಕಳೆದ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಮೂಲಕವೇ ಸುಮಾರು 200ಕೋಟಿ ರು ಗೂ ಅಧಿಕ ಮೊತ್ತವನ್ನು ಬಿಬಿಎಂಪಿ ಸಂಗ್ರಹಿಸಿತ್ತು. ನಾಗರೀಕರು ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸಬಹುದು. [ಪ್ರಾಪರ್ಟಿ ಟ್ಯಾಕ್ಸ್ ಎಂದರೇನು? ಯಾರು ಕಟ್ಟಬೇಕು?]

ಬಿಬಿಎಂಪಿ ತಾಣಕ್ಕೆ ಭೇಟಿ ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸಿ ಸುಲಭವಾಗಿ ತೆರಿಗೆ ಪಾವತಿಸಬಹುದು . ಪಾಲಿಕೆಯ ಎಲ್ಲಾ ಸಹಾಯ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಹಾಗೂ ಸಂಜೆ 7 ಗಂಟೆ ತನಕ ತೆರೆದಿರುತ್ತದೆ. ಸಹಾಯವಾಣಿ : 65683804/5, 23365007/8 Email: bbmpsas@bbmp.gov.in

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BBMP has implemented to increase the property taxes by 20-25%. BBMP council resolved to hike property tax for residential properties by 20% and by 25% for all non-residential purposes from April 1.
Please Wait while comments are loading...