ರಸ್ತೆಗುಂಡಿ ಚಿತ್ರ ತೋರಿಸಿ, ದುಡ್ಡು ಗಳಿಸಿ: ಬಿಬಿಎಂಪಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 19: ಋತು ಯಾವುದಾದರೇನು ನಿದ್ದೆ ಮಾಡುವುದೇ ನಮ್ಮ ಕೆಲಸ ಎಂಬಂತೆ ವರ್ತಿಸುವ ರಸ್ತೆ ರಿಪೇರಿ ಮಾಡುವ ಸಂಸ್ಥೆಗಳಿಗೆ ಚುರುಕು ಮುಟ್ಟಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆಯುಕ್ತ ಮಂಜುನಾಥ್ ಪ್ರಸಾದ್ ಸಕತ್ ಐಡಿಯಾ ಮಾಡಿದ್ದಾರೆ. ಈ ಯೋಜನೆ ಯಶಸ್ಸಿಗೆ ಸಾರ್ವಜನಿಕರ ನೆರವು ಕೋರಿದ್ದಾರೆ. ಏನಿದು ಯೋಜನೆ ಮುಂದೆ ಓದಿ...

ಮಳೆ ಬಂದಾಗ ರಸ್ತೆಗಿಳಿಯಲು ಭಯ, ಅವೈಜ್ಞಾನಿಕ ಹಂಪ್ಸ್, ರಸ್ತೆಗುಂಡಿಗಳು, ತೆರೆದ ಮ್ಯಾನ್ ಹೋಲ್ ಗಳು (2 ಲಕ್ಷಕ್ಕೂ ಅಧಿಕ ಇವೆ). ಹೋಗಲಿ ಮರದ ಕೆಳಗೆ ನಿಲ್ಲೋಣ ಎಂದರೆ ಮರ ಯಾವಾಗ ತಲೆ ಮೇಲೆ ಬೀಳುತ್ತದೆಯೋ ಎಂಬ ಭಯ ಎಂದು ಗೊಣಗಾಡುವ ನಾಗರಿಕರಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಅವಕಾಶ ನೀಡುತ್ತಿದ್ದಾರೆ.[ಬೆಂಗಳೂರು ರಸ್ತೆಗಳ ಗುಂಡಿ ಮುಚ್ಚಲು 11 ಕೋಟಿ ಬಿಡುಗಡೆ]

BBMP gives chance to earn money from pothole Know Why?

ರಸ್ತೆಗುಂಡಿ ಕಂಡರೆ ಫೋಟೋ ತೆಗೆದು ಬಿಬಿಎಂಪಿ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡುವಂತೆ ಕೋರಿದ್ದಾರೆ. ಈ ಮೂಲಕ ರಸ್ತೆಗುಂಡಿ ಮುಚ್ಚುವ ಕಾರ್ಯಕ್ಕೆ ಚುರುಕುತನ ತಂದಿದ್ದಾರೆ. ರಸ್ತೆ ಗುಂಡಿ ಮುಚ್ಚಲು ಹತ್ತಾರು ಕೋಟಿ ರು ವ್ಯಯಿಸಲಾಗುತ್ತದೆ. ಆದರೆ, ಟೆಂಡರ್ ಪಡೆದ ಕಂಪನಿಗಳು ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸುವುದಿಲ್ಲ. ಸದ್ಯ ಜನವರಿ 31 ಡೆಡ್ ಲೈನ್ ನೀಡಲಾಗಿದೆ.[ಬೆಂಗಳೂರಿನ ರಸ್ತೆ ಅಭಿವೃದ್ಧಿ ಆಪ್ ಸಲಹೆಗಳು]

ಫೆಬ್ರವರಿ 1 ರಿಂದ ನಾಗರಿಕರು ರಸ್ತೆಗುಂಡಿ ಚಿತ್ರವನ್ನು ಅಪ್ ಲೋಡ್ ಮಾಡಲು ಶುರು ಮಾಡಬಹುದಾಗಿದೆ. ಹೀಗೆ ಮಾಡಿದ್ರೆ 100 ರೂಪಾಯಿ ಬಹುಮಾನ ಸಿಗುತ್ತೆ. ಅಂದ ಹಾಗೆ, ಬಿಬಿಎಂಪಿ 10 ಕಂಟ್ರೋಲ್ ರೂಮ್ ಹೊಂದಿವೆ, 24X7 ಅವಧಿ ಕಾರ್ಯನಿರ್ವಹಿಸುತ್ತದೆ. ಬಿಬಿಎಂಪಿ ಸಹಾಯವಾಣಿ ಸಂಖ್ಯೆ ಈ ಲಿಂಕ್ ನಲ್ಲಿ ಲಭ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BBMP gives chance to earn money from pothole. Bruhat Bengaluru Mahanagara Palike (BBMP) Commissioner Manjunath Prasad has now embarked on this initiative The project will kick off from February 1. Officials have been given deadline to fill up potholes across city by January 31.
Please Wait while comments are loading...