ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ ದಿನ ಸಾರ್ವತ್ರಿಕ ರಜಾ ಘೋಷಣೆ

By Vanitha
|
Google Oneindia Kannada News

ಬೆಂಗಳೂರು, ಆಗಸ್ಟ್, 17 : ಬೃಹತ್ ಬೆಂಗಳೂರು ಮಹಾನಗರಪಾಲಿಕೆ(BBMP) ಚುನಾವಣೆಯ ದಿನದಂದು ನೆಗೋಷೀಯೆಬಲ್ ಇನ್‌ಸ್ಟ್ರೂಮೆಂಟ್ ಆಕ್ಟ್ ಪ್ರಕಾರ ಸರ್ಕಾರ ಸಾರ್ವತ್ರಿಕ ರಜಾ ಘೋಷಿಸಿದೆ.

ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ 198 ವಾರ್ಡ್ ಗಳಲ್ಲಿ ಆಗಸ್ಟ್ 22 ರ ಶನಿವಾರದಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಅಂದು ಎಲ್ಲಾ ಪಕ್ಷಗಳ ಬಲಪ್ರಬಲಗಳು ನಿರ್ಧಾರವಾಗಲಿದೆ.[ಶ್ರಾವಣ, ಭಾದ್ರಪದ, ಕಾರ್ತಿಕ ಮಾಸ: ಹಬ್ಬ, ರಜಾದಿನಗಳ ಪಟ್ಟಿ]

BBMP elections 2015 : Government declared holiday on Saturday, August 22

ಹಾಗಾಗಿ ಬಿಬಿಎಂಪಿ ವ್ಯಾಪ್ತಿಗೆ ಬರುವ ಎಲ್ಲಾ ರಾಜ್ಯ, ಕೇಂದ್ರ ಸರ್ಕಾರ ಕಚೇರಿಗಳಿಗೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಖಾನೆ, ಕೈಗಾರಿಕೆ, ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ, ಶಾಲಾ-ಕಾಲೇಜುಗಳಿಗೆ ಸರ್ಕಾರವು ಸಾರ್ವತ್ರಿಕ ರಜಾ ನೀಡಲು ತೀರ್ಮಾನಿಸಿದೆ.

ಮತದಾನವು ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ಮತದಾನ ನಡೆಯುವ ಮತಗಟ್ಟೆಗಳನ್ನು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲೆಗಳಲ್ಲಿ ಸ್ಥಾಪಿಸಲಾಗಿದೆ.[ಬಿಬಿಎಂಪಿ ಚುನಾವಣೆ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ? ಪರೀಕ್ಷಿಸಿ]

ಮತ ಎಣಿಕೆ ಕೇಂದ್ರಗಳಿಗೆ ಮಾತ್ರ ಆಗಸ್ಟ್ 21 ರಂದು ಚುನಾವಣಾ ಪೂರ್ವ ತಯಾರಿಗಾಗಿ, 25 ರಂದು ಎಣಿಕೆಗೆ ಸಂಬಂಧಿಸಿದಂತೆ ರಜಾ ಘೋಷಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಡಾ. ಬಿ.ಎಸ್. ಮಂಜುನಾಥ ಸ್ವಾಮಿ ತಿಳಿಸಿದ್ದಾರೆ.

English summary
Karnataka Government has declared holiday on Saturday, August 22, polling day. Govt offices, banks, schools, colleges will be closed on that day. Hope people will not misuse this opportunity and come out to vote
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X