ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಕದನ : ಶಿವಾಜಿನಗರ ಕ್ಷೇತ್ರದಲ್ಲಿ ಯಾರಿಗೆ ಗೆಲುವು?

|
Google Oneindia Kannada News

ಬೆಂಗಳೂರು, ಆಗಸ್ಟ್ 19 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಬೆಂಗಳೂರು ನಗರದ ಐವರು ಸಚಿವರಿಗೆ ಮಹತ್ವದ್ದಾಗಿದೆ. ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಅವರು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಖಾತೆ ಸಚಿವರಾಗಿರುವ ಆರ್.ರೋಷನ್ ಬೇಗ್ ಅವರು ಪ್ರತಿನಿಧಿಸುವ ಶಿವಾಜಿನಗರ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 7 ವಾರ್ಡ್‌ಗಳಿವೆ. 2010ರ ಚುನಾವಣೆಯಲ್ಲಿ ಏಳು ವಾರ್ಡ್‌ಗಳಲ್ಲಿ 4ರಲ್ಲಿ ಕಾಂಗ್ರೆಸ್, 2ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಒಂದು ಸ್ಥಾನ ಪಕ್ಷೇತರರ ಪಾಲಾಗಿತ್ತು. [ಚುನಾವಣಾ ಪ್ರಚಾರದ ಚಿತ್ರಗಳು]

roshan baig

ಈ ಬಾರಿ ಸಚಿವ ರೋಷನ್ ಬೇಗ್ ಅವರು 7 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಪ್ರಯತ್ನ ನಡೆಸುತ್ತಿದ್ದಾರೆ. ಕಳೆದ ಬಾರಿ ಶಿವಾಜಿನಗರ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದ ಫರೀದಾ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿ ಕಣಕ್ಕಿಳಿಸಲಾಗಿದೆ.

ಶಿವಾಜಿನಗರ ವಿಧಾನಸಭೆ ವ್ಯಾಪ್ತಿಯಲ್ಲಿ ರೆಸೆಲ್ ಮಾರುಕಟ್ಟೆ, ಬೌರಿಂಗ್ ಆಸ್ಪತ್ರೆಗಳಿವೆ. ಚರ್ಚ್, ಮಸೀದಿ, ದೇವಾಲಯಗಳು ಇರುವುದರಿಂದ ಎಲ್ಲಾ ಧರ್ಮೀಯರು ಶಿವಾಜಿನಗರಕ್ಕೆ ಭೇಟಿ ನೀಡುತ್ತಾರೆ. ಇದು ಪ್ರಮುಖ ವ್ಯಾಪಾರಿ ಕೇಂದ್ರವಾಗಿರುವುದರಿಂದ ಇಲ್ಲಿ ಕಸ ವಿಲೇವಾರಿ ಸಮಸ್ಯೆ ಇದೆ. [ರಾಮಸ್ವಾಮಿ ಪಾಳ್ಯ ವಾರ್ಡ್ 'ಕೈ'ಗೆ ಬಂಡಾಯದ ಬಿಸಿ]

ವಾರ್ಡ್‌ಗಳ ವಿವರಗಳು : ಜಯಮಹಲ್ ವಾರ್ಡ್ (63) ವಾರ್ಡ್‌ನಲ್ಲಿ ಎಂ.ಕೆ.ಗುಣಶೇಖರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಬಾಲಕೃಷ್ಣ ಅವರನ್ನು ಕಣಕ್ಕಿಳಿಸಿದ್ದು, ಜೆಡಿಎಸ್‌ನಿಂದ ಖಲೀಮ್ ಪಾಷಾ ಅವರು ಅಖಾಡದಲ್ಲಿದ್ದಾರೆ.

ಹಲಸೂರು ವಾರ್ಡ್‌ (90)ನಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳ ಜೊತೆ ಮಾಜಿ ಸದಸ್ಯರಾದ ಶರವಣ ಅವರ ಪತ್ನಿ ಮಮತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ನಿಂದ ಎನ್.ಯಶೋಧಾ, ಬಿಜೆಪಿಯಿಂದ ಸಿ.ಜಿ.ಸುಮತಿ ರವಿ ಮತ್ತು ಜೆಡಿಎಸ್‌ನಿಂದ ಅಶ್ವಿನಿ ಅವರು ಕಣದಲ್ಲಿದ್ದಾರೆ. [ಒಣಹಣ್ಣುಗಳ ಸರದಾರ ರಸಲ್ ಮಾರ್ಕೆಟ್ ಮಹಮ್ಮದ್]

ಬಂಡಾಯದ ಬಿಸಿ : ರಾಮಸ್ವಾಮಿ ಪಾಳ್ಯ (62) ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿತ್ತು. ಮೇರಿ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ ಅವರು ಮೇರಿ ಅವರಿಗೆ ಬೆಂಬಲ ನೀಡಿದ್ದರು. ಆದರೆ, ಸಚಿವ ರೋಷನ್ ಬೇಗ್ ಸಂಧಾನ ಸಭೆ ನಡೆಸಿ ಬಂಡಾಯದ ಬಿಸಿ ತಗ್ಗಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ನೇತ್ರಾವತಿ ಕೃಷ್ಣೇಗೌಡ, ಬಿಜೆಪಿಯಿಂದ ಗಿರಿಜಾ ಪ್ರಕಾಶ್, ಜೆಡಿಎಸ್‌ನಿಂದ ಸಿ.ಸಮೀನಾ ಸ್ಪರ್ಧಿಸಿದ್ದಾರೆ.

shivaji nagar

ಭಾರತೀ ನಗರ ವಾರ್ಡ್‌ (91)ನಿಂದ ಮಾಜಿ ಬಿಬಿಎಂಪಿ ಸದಸ್ಯ ಶಕೀಲ್ ಅಹಮದ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಉಮಾಮಹೇಶ್ವರಿ ಮತ್ತು ಜೆಡಿಎಸ್‌ನಿಂದ ಸೈಯದ್ ಮುಜಾಯಿದ್ ಕಣದಲ್ಲಿದ್ದಾರೆ.

ಪಕ್ಷೇತರ ಅಭ್ಯರ್ಥಿ ಗೆದ್ದಿದ್ದರು : ಶಿವಾಜಿನಗರ (92)ವಾರ್ಡ್‌ನಲ್ಲಿ 2010ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದ ಫರೀದಾ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿದೆ. ಬಿಜೆಪಿಯಿಂದ ಸರಳಾ ಮತ್ತು ಜೆಡಿಎಸ್‌ನಿಂದ ರಜಿಯಾ ಸುಲ್ತಾನ್ ಅವರು ಕಣದಲ್ಲಿದ್ದಾರೆ.

ಕಟ್ಟಾ ಪುತ್ರ ಗೆದ್ದಿದ್ದರು : ವಸಂತ ನಗರ ವಾರ್ಡ್‌ (93)ರಲ್ಲಿ 2010ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡ ಪುತ್ರ ಕಟ್ಟಾ ಜಗದೀಶ್ ಗೆಲುವು ಸಾಧಿಸಿದ್ದರು. ಈ ಬಾರಿ ಮೀಸಲಾತಿ ಬದಲಾಗಿದ್ದು, ಬಿಜೆಪಿಯಿಂದ ಕೆ.ಯಶೋಧ, ಕಾಂಗ್ರೆಸ್‌ನಿಂದ ಬಿ.ಆರ್‌.ನಾಯ್ಡು ಮತ್ತು ಜೆಡಿಎಸ್‌ನಿಂದ ಜೆ.ಸಿ.ರವಿ ಕಣದಲ್ಲಿದ್ದಾರೆ.

ಸಂಪಂಗಿರಾಮನಗರ (110) ವಾರ್ಡ್‌ನಲ್ಲಿ ಬಿಜೆಪಿಯಿಂದ ಡಾ.ಆನಂದ ಕುಮಾರ್, ಕಾಂಗ್ರೆಸ್‌ನಿಂದ ವಸಂತಕುಮಾರ್, ಜೆಡಿಎಸ್‌ನಿಂದ ಧನಲಕ್ಷ್ಮೀ ಅವರು ಚುನಾವಣಾ ಕಣದಲ್ಲಿದ್ದಾರೆ.

English summary
BBMP election 2015 : 7 Wards Shivajinagar assembly constituency fight. Shivajinagar constituency represent by Minister for Infrastructure Development, Information and Haj R. Roshan Baig.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X