ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ ಕಣದಲ್ಲಿರುವ ಸ್ಟಾರ್ ಅಭ್ಯರ್ಥಿಗಳು

|
Google Oneindia Kannada News

ಬೆಂಗಳೂರು, ಆಗಸ್ಟ್ 12 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಕಾವು ಏರತೊಡಗಿದೆ. 198 ಸ್ಥಾನಗಳಿಗೆ ಸುಮಾರು ಎರಡು ಸಾವಿರ ನಾಮಪತ್ರಗಳು ಸಲ್ಲಿಕೆಯಾಗಿವೆ. ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವವರ ಜೊತೆ ಮಾಜಿ ಬಿಬಿಎಂಪಿ ಸದಸ್ಯರು ಸ್ಪರ್ಧೆ ಮಾಡುತ್ತಿದ್ದಾರೆ.

ಮಾಜಿ ಮೇಯರ್, ಶಾಸಕರ ಪತ್ನಿ, ಮಾಜಿ ಶಾಸಕರ ಸಹೋದರ, ಸಿನಿಮಾ ನಿರ್ದೇಶಕಿ ಸೇರಿದಂತೆ ವಿವಿಧ ಸ್ಟಾರ್ ಅಭ್ಯರ್ಥಿಗಳು ಈ ಬಾರಿಯ ಚುನಾವಣಾ ಕಣದಲ್ಲಿದ್ದಾರೆ. ಮಾಜಿ ಮೇಯರ್‌ಗಳು ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಬಿಬಿಎಂಪಿ ಸದಸ್ಯರಾಗುವ ಉತ್ಸಾಹದಲ್ಲಿದ್ದಾರೆ. [ಖಾಕಿ ಕಿತ್ತಾಕಿ ಖಾದಿ ತೊಡಲು ಹೊರಟ ಮಹಿಳಾ ಪೊಲೀಸ್]

ಪೊಲೀಸ್ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಖಾಸಗಿ ಕಂಪನಿ ಉದ್ಯೋಗ ತೊರೆದು, ವೈದ್ಯ ವೃತ್ತಿ ಬಿಟ್ಟು ಬಿಬಿಎಂಪಿ ಚುನಾವಣಾ ಕಣಕ್ಕೆ ಧುಮುಕಿದವರು ಇದ್ದಾರೆ. ಈ ಬಾರಿಯ ಬಿಬಿಎಂಪಿ ಚುನಾವಣಾ ಕಣದಲ್ಲಿರುವ ಸ್ಟಾರ್ ಅಭ್ಯರ್ಥಿಗಳ ವಿವರ ಚಿತ್ರಗಳಲ್ಲಿದೆ......

ಚುನಾವಣಾ ಕಣದಲ್ಲಿ ಮಾಜಿ ಮೇಯರ್

ಚುನಾವಣಾ ಕಣದಲ್ಲಿ ಮಾಜಿ ಮೇಯರ್

ಬಿಬಿಎಂಪಿ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಅವರು ಬಸವನಗುಡಿ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮಾಜಿ ಮೇಯರ್‌ಗಳಿಗೆ ಟಿಕೆಟ್ ಕೊಡುವುದಿಲ್ಲ ಎಂಬ ಮಾತು ಬಿಜೆಪಿ ವಲಯದಲ್ಲಿ ಹಬ್ಬಿತ್ತು. ಅಂತಿಮವಾಗಿ ಇಬ್ಬರು ಮಾಜಿ ಮೇಯರ್‌ಗಳಿಗೆ ಟಿಕೆಟ್ ಸಿಕ್ಕಿದೆ.

ಮಾರುತಿ ಮಂದಿರ ವಾರ್ಡ್‌ನಿಂದ ಶಾಂತ ಕುಮಾರಿ ಸ್ಪರ್ಧೆ

ಮಾರುತಿ ಮಂದಿರ ವಾರ್ಡ್‌ನಿಂದ ಶಾಂತ ಕುಮಾರಿ ಸ್ಪರ್ಧೆ

ಬಿಬಿಎಂಪಿ ಮಾಜಿ ಮೇಯರ್ ಎನ್.ಶಾಂತಕುಮಾರಿ ಅವರು ಪ್ರತಿನಿಧಿಸುತ್ತಿದ್ದ ಮೂಡಲಪಾಳ್ಯ ವಾರ್ಡ್‌ನಲ್ಲಿ ಮೀಸಲಾತಿ ಬದಲಾಗಿದ್ದರಿಂದ ಅವರಿಗೆ ಟಿಕೆಟ್ ಕೈ ತಪ್ಪಿತ್ತು. ಆದರೆ. ಅವರು ಮಾರುತಿ ಮಂದಿರ ವಾರ್ಡ್‌ನಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚುನಾವಣಾ ಕಣಕ್ಕಿಳಿದ ವಿಜಯಲಕ್ಷ್ಮೀ ಸಿಂಗ್

ಚುನಾವಣಾ ಕಣಕ್ಕಿಳಿದ ವಿಜಯಲಕ್ಷ್ಮೀ ಸಿಂಗ್

ನಿರ್ದೇಶಕಿ ಮತ್ತು ನಿರ್ಮಾಪಕಿ ವಿಜಯಲಕ್ಷ್ಮೀ ಸಿಂಗ್ ಅವರು ಈ ಬಾರಿಯ ಬಿಬಿಎಂಪಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಅವರು ಕಾವೇರಿಪುರ ವಾರ್ಡ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಸಿನಿಮಾ ನಟರು ಇವರ ಪರವಾಗಿ ಪ್ರಚಾರಕ್ಕೆ ಆಗಮಿಸುವ ಸಾಧ್ಯತೆ ಇದೆ.

ಬಿಬಿಎಂಪಿ ಚುನಾವಣಾ ಕಣದಲ್ಲಿ ಶಾಸಕರ ಪತ್ನಿ

ಬಿಬಿಎಂಪಿ ಚುನಾವಣಾ ಕಣದಲ್ಲಿ ಶಾಸಕರ ಪತ್ನಿ

ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪತ್ನಿ ವಾಣಿಶ್ರೀ ವಿಶ್ವನಾಥ್ ಅವರು ಚೌಡೇಶ್ವರಿ ವಾರ್ಡ್‌ನಿಂದ ಚುನಾವಣಾ ಕಣಕ್ಕಿಳಿದಿದ್ದಾರೆ.

ಸುಧಾಮನಗರದಲ್ಲಿ ಶಾಸಕರ ಪುತ್ರನ ಸ್ಪರ್ಧೆ

ಸುಧಾಮನಗರದಲ್ಲಿ ಶಾಸಕರ ಪುತ್ರನ ಸ್ಪರ್ಧೆ

ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ವಿ.ದೇವರಾಜ್ ಅವರ ಪುತ್ರ ಆರ್.ವಿ.ಯುವರಾಜ್ ಅವರು ಸುಧಾಮನಗರ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ನೆ.ಲ.ಮಹೇಶ್ ಕುಮಾರ್ ಸ್ಪರ್ಧೆ

ನೆ.ಲ.ಮಹೇಶ್ ಕುಮಾರ್ ಸ್ಪರ್ಧೆ

ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಅವರ ಕಿರಿಯ ಸಹೋದರ ನೆ.ಲ. ಮಹೇಶ್‌ ಕುಮಾರ್‌ ಕಣಕ್ಕಿಳಿದಿದ್ದಾರೆ.

English summary
Bruhat Bengaluru Mahanagara Palike (BBMP) election scheduled on August 22, 2015. The contestants, including many star ones, are in the fray for 198 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X