ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ ಫಲಿತಾಂಶ, ಇದು ಓದುಗರ ತೀರ್ಪು

|
Google Oneindia Kannada News

ಬೆಂಗಳೂರು, ಆಗಸ್ಟ್ 21 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಕುಸಿಯಲಿದ್ದು, ಬಿಜೆಪಿಯ ಅಭ್ಯರ್ಥಿಗಳು ಮೇಯರ್ ಗೌನ್ ಧರಿಸಲಿದ್ದಾರೆ ಎಂದು ಒನ್ ಇಂಡಿಯಾ ಓದುಗರು ಅಭಿಪ್ರಾಯಪಟ್ಟಿದ್ದಾರೆ.

ಪ್ರಣಾಳಿಕೆಗಳು: ಬಿಜೆಪಿ | ವಾಟಾಳ್ ಪಕ್ಷ | ಕಾಂಗ್ರೆಸ್ | ಜೆಡಿಎಸ್ | ಲೋಕಸತ್ತಾ

ಒನ್ ಇಂಡಿಯಾ ಕನ್ನಡ 'ಬಿಬಿಎಂಪಿ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸೀಟು?' ಎಂಬ ಪ್ರಶ್ನೆಯನ್ನು ಕೇಳಿತ್ತು. ಇದುವರೆಗೂ 1,744 ಮತಗಳು ಬಂದಿದ್ದು, ಬಿಬಿಎಂಪಿ ಪುನಃ ಕಮಲ ಪಕ್ಷದ ಪಾಲಾಗಲಿದೆ ಎಂದು ಓದುಗರು ಹೇಳಿದ್ದಾರೆ. [ಹಲೋ ಬೆಂಗಳೂರು. ಫಸ್ಟ್ ಓಟು ಮಾಡು, ಆಮೇಲೆ ಮಾತಾಡು!]

'ಬಿಜೆಪಿ 80-90' ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಶೇ 59.12 ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ಪರವಾಗಿ 1031 ಮತಗಳು ಬಂದಿವೆ. ನಮ್ಮ ಸಮೀಕ್ಷೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದ ಎಲ್ಲಾ ಓದುಗರಿಗೂ ಒನ್ ಇಂಡಿಯಾ ಕನ್ನಡ ಧನ್ಯವಾದ ತಿಳಿಸುತ್ತದೆ. [ವಿಜಯವಾಣಿ-ಈಟಿವಿ ಸಮೀಕ್ಷೆ ಫಲಿತಾಂಶ]

ಆ.22ರ ಶನಿವಾರ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ಬಿಬಿಎಂಪಿಯ 198 ವಾರ್ಡ್‌ಗಳ ಪೈಕಿ 197 ವಾರ್ಡ್‌ಗಳಿಗೆ ಮತದಾನ ನಡೆಯಲಿದೆ. ಮತದಾನ ಮಾಡಲು ಅನುಕೂಲವಾಗುವಂತೆ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ತಪ್ಪದೇ ಮತದಾನ ಮಾಡಿ.ಸಮೀಕ್ಷೆ ವಿವರ ಚಿತ್ರಗಳಲ್ಲಿ.......[ಪಬ್ಲಿಕ್ ಟಿವಿ ಸಮೀಕ್ಷೆ ಏನು ಹೇಳುತ್ತೆ?]

ಒನ್ ಇಂಡಿಯಾ ನೀಡಿದ್ದ ಪ್ರಶ್ನೆಗಳು

ಒನ್ ಇಂಡಿಯಾ ನೀಡಿದ್ದ ಪ್ರಶ್ನೆಗಳು

ಬಿಬಿಎಂಪಿ ಚುನಾವಣೆ ಯಾರಿಗೆ ಎಷ್ಟು?
ಬಿಜೆಪಿ 80-95
ಕಾಂಗ್ರೆಸ್ 90-98
ಜೆಡಿಎಸ್ 15-25
ಇತರೆ 1-5

ಎರಡನೇ ಸ್ಥಾನಕ್ಕೆ ಕುಸಿಯಲಿದೆ ಕಾಂಗ್ರೆಸ್

ಎರಡನೇ ಸ್ಥಾನಕ್ಕೆ ಕುಸಿಯಲಿದೆ ಕಾಂಗ್ರೆಸ್

ಓದುಗರ ಅಭಿಪ್ರಾಯದಂತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ರಾಜಧಾನಿಯಲ್ಲಿ ಅಧಿಕಾರ ಹಿಡಿಯಲು ವಿಫಲವಾಗಲಿದೆ. ಕಾಂಗ್ರೆಸ್ 90-98 ಸ್ಥಾನಗಳನ್ನು ಗಳಿಸಲಿದೆ ಎಂದು ಶೇ 24.25 ರಷ್ಟು ಜನರು ಮತಹಾಕಿದ್ದಾರೆ. ಪಕ್ಷದ ಪರವಾಗಿ ಮತ ಹಾಕಿರುವ ಓದುಗರ ಸಂಖ್ಯೆ 423.

ಜೆಡಿಎಸ್‌ಗೆ ಶೇ 14ರಷ್ಟು ಜನರ ಬೆಂಬಲ

ಜೆಡಿಎಸ್‌ಗೆ ಶೇ 14ರಷ್ಟು ಜನರ ಬೆಂಬಲ

ಜೆಡಿಎಸ್ 15-25 ಸ್ಥಾನಗಳನ್ನುಗಳಿಸಲಿದೆ ಎಂದು 261 ಜನರು ಮತ ಹಾಕಿದ್ದು, ಶೇ 14.97ರಷ್ಟು ಜನರು ಜೆಡಿಎಸ್ ಪರವಾಗಿದ್ದಾರೆ.

ಬಿಬಿಎಂಪಿಯಲ್ಲಿ ಅರಳಲಿದೆ ಕಮಲ

ಬಿಬಿಎಂಪಿಯಲ್ಲಿ ಅರಳಲಿದೆ ಕಮಲ

ಬಿಜೆಪಿ 80-95 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಶೇ 59.12ರಷ್ಟು ಜನರು ಅಭಿಪ್ರಾಯಪಟ್ಟಿದ್ದು, 1031 ಜನರು ಪಕ್ಷದ ಪರವಾಗಿ ಮತ ಹಾಕಿದ್ದಾರೆ. ಸಮೀಕ್ಷೆಯಲ್ಲಿ ಇದುವರೆಗೂ ಚಲಾವಣೆಯಾದ ಮತಗಳ ಸಂಖ್ಯೆ 1,744.

ಓಗುಗರು ನೀಡಿದ ತೀರ್ಪು

ಓಗುಗರು ನೀಡಿದ ತೀರ್ಪು

ಇದು ಬಿಬಿಎಂಪಿ ಚುನಾವಣೆ ಬಗ್ಗೆ ಓದುಗರು ನೀಡಿದ ತೀರ್ಪು, ಮತದಾನ ಮಾಡಿದ ಎಲ್ಲಾ ಓದುಗರಿಗೂ ಒನ್ ಇಂಡಿಯಾ ಕನ್ನಡದ ಕಡೆಯಿಂದ ಧನ್ಯವಾದಗಳು

English summary
The Bruhat Bengaluru Mahanagara Palike (BBMP) election 2015. Here is poll survey results conducted by http://kannada.oneindia.com/.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X