ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ, ಅಂಕಿ-ಸಂಖ್ಯೆಗಳ ವಿವರ

|
Google Oneindia Kannada News

ಬೆಂಗಳೂರು, ಆಗಸ್ಟ್ 20 : ಉದ್ಯಾನ ನಗರಿ ಬೆಂಗಳೂರು ಮತದಾನಕ್ಕೆ ಸಿದ್ಧವಾಗುತ್ತಿದೆ. ಅವಿಭಜಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಶನಿವಾರ ನಡೆಯಲಿದೆ. ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.

198 ವಾರ್ಡ್‌ಗಳ ಪೈಕಿ 197 ವಾರ್ಡ್‌ಗಳಿಗೆ ಆ.22ರ ಶನಿವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ. ಬೆಂಗಳೂರಿಗರು ಮತ ಕೇಂದ್ರದತ್ತ ಬರುವುದಿಲ್ಲ ಎಂಬ ಆರೋಪ ಈ ಬಾರಿಯಾದರೂ ಸುಳ್ಳಾಗುತ್ತದೆಯೇ? ಎಂದು ಕಾದು ನೋಡಬೇಕು. [ಚುನಾವಣೆ ದಿನ ಸಾರ್ವತ್ರಿಕ ರಜಾ ಘೋಷಣೆ]

ಮತದಾನಕ್ಕೂ ಮೊದಲೇ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೊಂಗಸಂದ್ರ ವಾರ್ಡ್‌ (198)ರಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, 197 ವಾರ್ಡ್‌ಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ 6,759 ಮತಗಟ್ಟೆಗಳನ್ನು ಸ್ಥಾಪಿಸಿದೆ.

bbmp

197 ಸ್ಥಾನಕ್ಕೆ 1000ಕ್ಕೂ ಅಧಿಕ ಅಭ್ಯರ್ಥಿಗಳು : 197 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಬಿಜೆಪಿಯ 197,
ಕಾಂಗ್ರೆಸ್‌ನ 197, ಜೆಡಿಎಸ್‌ನ 187, ಬಿಎಸ್‌ಪಿಯ 34, ಸಿಪಿಐ(ಎಂ)ಯ 29, ಎಐಎಡಿಎಂಕೆಯ 7, 399 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 1000ಕ್ಕೂ ಅಧಿಕ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. [ಈ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು]

ಶನಿವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯಲಿದ್ದು ಶುಕ್ರವಾರ ಸಂಜೆಯೇ ಚುನಾವಣಾಧಿಕಾರಿಗಳು ಮತಗಟ್ಟೆಗೆ ತೆರಳಲಿದ್ದಾರೆ. ಐಎಎಸ್ ದರ್ಜೆಯ 7 ವಿಶೇಷ ವೀಕ್ಷಕರು, 53 ಚುನಾವಣಾಧಿಕಾರಿಗಳು, 27 ವಿಧಾನಸಭಾ ಕ್ಷೇತ್ರಗಳಿಗೂ ಕೆಎಎಸ್ ಅಧಿಕಾರಿಗಳನ್ನು ವೀಕ್ಷಕರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ.[ಬಿಬಿಎಂಪಿ ಚುನಾವಣೆ, ಪಬ್ಲಿಕ್ ಟಿವಿ ಸಮೀಕ್ಷೆ]

ಕೆಲವು ದಿನಗಳ ಹಿಂದೆ ಸಹಕಾರ ಸಂಘಗಳ ಚುನಾವಣೆ ನಡೆದಿರುವುದರಿಂದ ಎಡಗೈ ಹೆಬ್ಬೆರಳಿಗೆ ಶಾಯಿ ಗುರುತನ್ನು ಹಾಕಲಾಗುತ್ತದೆ. ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ನೋಟಾ ಆಯ್ಕೆ ನೀಡಿಲ್ಲ. ನೋಟಾ ಮತದಾನ ಮಾಡುವವರು ಫಾರಂ ನಂ.27ನ್ನು ಪಡೆದು ಅದರಲ್ಲಿ ನಮೂದಿಸಬೇಕು.

election commission

ಭಯ ಬೇಡ ಮತದಾನ ಮಾಡಿ : ಮತದಾನದ ದಿನದ ಭದ್ರತೆಗಾಗಿ 20 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬೆಂಗಳೂರು ನಗರ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದ 11 ಸಾವಿರ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗುತ್ತಿದೆ. ಭಯ ಬೇಡ ಎಲ್ಲರೂ ಬಂದು ಮತದಾನ ಮಾಡಿ ಎಂದು ಬೆಂಗಳೂರು ಪೊಲೀಸರು ಕರೆ ನೀಡಿದ್ದಾರೆ.

English summary
Stage set for The Bruhat Bengaluru Mahanagara Palike (BBMP) election 2015. Voting will be held on August 22, Saturday. 6, 759 polling booth set for voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X