ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ : ನಿಮ್ಮ ಮತಗಟ್ಟೆ ತಿಳಿಯಲು ಎಸ್‌ಎಂಎಸ್ ಮಾಡಿ

|
Google Oneindia Kannada News

ಬೆಂಗಳೂರು, ಆಗಸ್ಟ್ 21 : ಶನಿವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ನಡೆಯಲಿದೆ. ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು? ಎಂಬ ಗೊಂದಲಗಳಿದ್ದರೆ ಎಸ್‌ಎಂಎಸ್ ಮಾಡಿ, ಮತಗಟ್ಟೆ ವಿವರ ನಿಮ್ಮ ಬೆರಳ ತುದಿಯಲ್ಲಿ ಸಿಗುತ್ತದೆ.

ಬಿಬಿಎಂಪಿ ಮತದಾರರ ಸಂಖ್ಯೆಯನ್ನು ಎಸ್‌ಎಂಎಸ್‌ ಮಾಡಿದರೆ ವಾರ್ಡ್‌ ಮತ್ತು ಮತಗಟ್ಟೆ ವಿವರ ಒದಗಿಸುವ ವ್ಯವಸ್ಥೆಯನ್ನು ರೂಪಿಸಿದೆ ಎಂದು ಪಾಲಿಕೆ ಆಯುಕ್ತ ಮತ್ತು ಚುನಾವಣಾಧಿಕಾರಿ ಜಿ.ಕುಮಾರ ನಾಯಕ್ ಹೇಳಿದ್ದಾರೆ. [ಬಿಬಿಎಂಪಿ ಚುನಾವಣೆ, ಅಂಕಿ-ಸಂಖ್ಯೆಗಳ ವಿವರ]

mobile

ಎಸ್‌ಎಂಎಸ್ ಮಾಡುವುದು ಹೇಗೆ? : ಮತಗಟ್ಟೆ ವಿವರಗಳನ್ನು ಪಡೆಯಲು epic ಎಂದು ಟೈಪ್‌ ಮಾಡಿ, ಸ್ಪೇಸ್ ಬಿಟ್ಟು, ಮತದಾರರ ಸಂಖ್ಯೆ ಟೈಪ್‌ ಮಾಡಿ 88618 66993 ನಂಬರ್‌ಗೆ ಎಸ್‌ಎಂಎಸ್ ಕಳಿಸಬಹುದಾಗಿದೆ. ತಕ್ಷಣ ನಿಮಗೆ ಎಸ್‌ಎಂಎಸ್‌ ರೂಪದಲ್ಲಿ ಮಾಹಿತಿ ಲಭ್ಯವಾಗುತ್ತದೆ. [ಬಿಬಿಎಂಪಿ ಕದನ : ಪಬ್ಲಿಕ್ ಟಿವಿ ಸಮೀಕ್ಷೆ ಫಲಿತಾಂಶ]

ನಿಮ್ಮ ಮನೆಯ ಸಮೀಪದ ಬೆಂಗಳೂರು ಒನ್‌ ಕೇಂದ್ರ, ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಸಹ ಮತಗಟ್ಟೆ ವಿವರಗಳನ್ನು ಪಡೆಯಬಹುದಾಗಿದೆ ಎಂದು ಜಿ.ಕುಮಾರ್‌ ನಾಯಕ್‌ ತಿಳಿಸಿದ್ದಾರೆ. [ಬಿಬಿಎಂಪಿ ವೆಬ್ ಸೈಟ್ ವಿಳಾಸ]

ನೋಟಾ ಮತ ಹಾಕ್ತೀರಾ? : ಈ ಬಾರಿಯ ಚುನಾವಣೆಯಲ್ಲಿ ನೋಟಾ ಬಳಕೆಗೆ ಅವಕಾಶ ನೀಡಿಲ್ಲ. ಆದರೆ, ಯಾವುದೇ ಅಭ್ಯರ್ಥಿಗೆ ಮತ ಹಾಕಲು ಇಷ್ಟವಿಲ್ಲದ ಜನರು ಫಾರಂ ನಂ.27ಅನ್ನು ಪಡೆದು ಅದರಲ್ಲಿ ಹೆಸರು ನಮೂದಿಸಬಹುದಾಗಿದೆ.

English summary
BBMP election 2015 : Citizens who do not know where to cast their vote can get the necessary information by sending an SMS with Elector's Photo Identity Card (EPIC) number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X