ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಮಪತ್ರ ಸಲ್ಲಿಸಿದ ಬಿಬಿಎಂಪಿ ಮಾಜಿ ಮೇಯರ್ ಕಟ್ಟೆ ಸತ್ಯಾ

|
Google Oneindia Kannada News

ಬೆಂಗಳೂರು, ಆಗಸ್ಟ್ 10 : ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಅವರಿಗೆ ಕೊನೆ ಕ್ಷಣದಲ್ಲಿ ಬಿಜೆಪಿ ಟಿಕೆಟ್ ನೀಡಿದೆ. ಬಸವನಗುಡಿ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಸೋಮವಾರ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಬಿಬಿಎಂಪಿ ಕಚೇರಿಯಲ್ಲಿ ಕಟ್ಟೆ ಸತ್ಯನಾರಾಯಣ ಅವರು ನಾಮಪತ್ರ ಸಲ್ಲಿಸಿದ್ದಾರೆ. 'ಮಾಜಿ ಮೇಯರ್‌ಗಳಿಗೆ ಟಿಕೆಟ್ ನೀಡುವುದಿಲ್ಲ' ಎಂದು ನಿರ್ಣಯ ಕೈಗೊಂಡಿದ್ದ ಬಿಜೆಪಿ ಮೊದಲ ಪಟ್ಟಿಯಲ್ಲಿ ಯಾರಿಗೂ ಟಿಕೆಟ್ ನೀಡಿರಲಿಲ್ಲ. ಆದರೆ, ಮೂರನೇ ಪಟ್ಟಿಯಲ್ಲಿ ಶಾಂತ ಕುಮಾರಿ ಮತ್ತು ಕಟ್ಟೆ ಸತ್ಯನಾರಾಯಣ ಅವರಿಗೆ ಟಿಕೆಟ್ ನೀಡಲಾಗಿತ್ತು. [ಬಿಜೆಪಿ ಬಿಬಿಎಂಪಿ ಚುನಾವಣಾ ವೆಬ್ ಸೈಟ್]

bbmp

ಬಿಬಿಎಂಪಿಯ ಐದು ವರ್ಷಗಳ ಆಡಳಿತದಲ್ಲಿ ಎಸ್‌.ಕೆ. ನಟರಾಜ್‌ (ಸಾರಕ್ಕಿ ವಾರ್ಡ್‌), ಶಾರದಮ್ಮ (ಶೆಟ್ಟಿಹಳ್ಳಿ ವಾರ್ಡ್), ಡಿ.ವೆಂಕಟೇಶಮೂರ್ತಿ (ಕತ್ರಿಗುಪ್ಪೆ ವಾರ್ಡ್), ಕಟ್ಟೆ ಸತ್ಯನಾರಾಯಣ (ಬಸವನಗುಡಿ ವಾರ್ಡ್) ಮತ್ತು ಎನ್‌.ಶಾಂತಕುಮಾರಿ (ಮೂಡಲಪಾಳ್ಯ ವಾರ್ಡ್) ಮೇಯರ್ ಆಗಿದ್ದರು. [ಬಿಜೆಪಿ 96 ಅಭ್ಯರ್ಥಿಗಳ ಪಟ್ಟಿ]

ಐವರು ಮಾಜಿ ಮೇಯರ್‌ಗಳ ಪೈಕಿ ಕಟ್ಟೆ ಸತ್ಯನಾರಾಯಣ ಮತ್ತು ಶಾಂತಕುಮಾರಿ ಅವರಿಗೆ ಮಾತ್ರ ಟಿಕೆಟ್ ಸಿಕ್ಕಿದೆ. ಎಸ್.ಕೆ.ನಟರಾಜ್‌ ಅವರು ಪ್ರತಿನಿಧಿಸುತ್ತಿದ್ದ ಸಾರಕ್ಕಿ ವಾರ್ಡ್‌ ಮೀಸಲಾತಿ ಬದಲಾಗಿದ್ದು, ಅವರ ಪತ್ನಿಗೆ ಜೆ.ಪಿ.ನಗರ ವಾರ್ಡ್‌ನಲ್ಲಿ ಟಿಕೆಟ್ ಸಿಕ್ಕಿದೆ. ಆದರೆ, ವೆಂಕಟೇಶಮೂರ್ತಿ, ಶಾರದಮ್ಮ ಅವರಿಗೆ ಟಿಕೆಟ್ ಸಿಕ್ಕಿಲ್ಲ. [ಬಿಜೆಪಿ 2ನೇ ಪಟ್ಟಿ]

ವೆಂಕಟೇಶಮೂರ್ತಿ ಪ್ರತಿಭಟನೆ : ಶಾಸಕ ಆರ್. ಅಶೋಕ್ ಅವರು ತಮಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಭಾನುವಾರ ಡಿ.ವೆಂಕಟೇಶಮೂರ್ತಿ ಅವರು ತಮ್ಮ ಬೆಂಬಲಿಗರೊಂದಿಗೆ ವಿದ್ಯಾಪೀಠ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು.

ಅಂದಹಾಗೆ ನಾಮಪತ್ರ ಸಲ್ಲಿಕೆ ಮಾಡಲು ಆ.10ರ ಸೋಮವಾರ ಮಧ್ಯಾಹ್ನ 3.30ರ ತನಕ ಅವಕಾಶವಿದೆ. ಆ.22ರ ಶನಿವಾರ ಮತದಾನ ನಡೆಯಲಿದ್ದು, ಆ.25ರ ಮಂಗಳವಾರ ಮತ ಎಣಿಕೆ ನಡೆಯಲಿದೆ.

English summary
Former BBMP Mayor Katte Satyanarayana filed nomination from Basavanagudi as BJP candidate on Monday, August 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X