ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಕದನ : ಯಲಹಂಕದಿಂದ ಪಕ್ಷೇತರ ಅಭ್ಯರ್ಥಿ ಅಪಹರಣ

|
Google Oneindia Kannada News

ಬೆಂಗಳೂರು, ಆಗಸ್ಟ್ 10 : ಬಿಬಿಎಂಪಿ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದ ಮಹಿಳೆ ಮತ್ತು ಆಕೆಯ ಪತಿಯನ್ನು ಅಪಹರಣ ಮಾಡಿರುವ ಘಟನೆ ಇಂದು ನಡೆದಿದೆ. ತಮಿಳುನಾಡಿನಲ್ಲಿ ಇಬ್ಬರನ್ನು ಬಿಟ್ಟು ಅಪಹರಣಕಾರರು ಪರಾರಿಯಾಗಿದ್ದು, ಇಬ್ಬರು ಸುರಕ್ಷಿತವಾಗಿದ್ದಾರೆ.

ಸೋಮವಾರ ಮುಂಜಾನೆ ಯಲಹಂಕದಿಂದ ಚಂದ್ರಶೇಖರ್ ಮತ್ತು ನಾಗಲಕ್ಷ್ಮೀ ಅವರನ್ನು ಅಪಹರಣ ಮಾಡಿರುವ ದುಷ್ಕರ್ಮಿಗಳು ತಮಿಳುನಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ನಾಗಲಕ್ಷ್ಮೀ ಅವರು ಚೌಡೇಶ್ವರಿ ವಾರ್ಡ್‌ ನಂ 2ರಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದರು. [ನಾಮಪತ್ರ ಸಲ್ಲಿಸಿದ ಕಟ್ಟೆ ಸತ್ಯ]

bbmp elections

ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕಾಗಿತ್ತು. ಅದನ್ನು ತಪ್ಪಿಸಲು ಮುಂಜಾನೆಯೇ ಇಬ್ಬರನ್ನು ಅಪಹರಣ ಮಾಡಲಾಗಿದೆ. ನಾಲ್ವರು ಅಪರಿಚಿತರ ಗುಂಪು ಈ ಕೃತ್ಯ ಮಾಡಿದೆ ಎಂದು ತಿಳಿದುಬಂದಿದೆ. [ರಾಮಸ್ವಾಮಿ ವಾರ್ಡ್, 'ಕೈ'ಗೆ ಬಂಡಾಯದ ಬಿಸಿ]

ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿದಿದ್ದ ನಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ನಾಗಲಕ್ಷ್ಮೀ ಅವರು ಯಲಹಂಕ ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ನಿವಾಸದ ಎದುರು ಅನಾಮಧೇಯ ವಾಹನಗಳು ನಿಲ್ಲುತ್ತಿವೆ ಎಂದು ದೂರಿನಲ್ಲಿ ಹೇಳಿದ್ದರು. ಇಂದು ಮುಂಜಾನೆ ಇಬ್ಬರನ್ನು ಅಪಹರಣ ಮಾಡಲಾಗಿದೆ.

ಸೋಮವಾರ ಮಧ್ಯಾಹ್ನ 3 ಗಂಟೆಯ ತನಕ ಬಿಬಿಎಂಪಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕವಾಶವಿತ್ತು. ಸೋಮವಾರ ಕಾಂಗ್ರೆಸ್‌ನ 133, ಬಿಜೆಪಿಯ 107, ಜೆಡಿಎಸ್‌ನ 74, ಲೋಕಾಸತ್ತಾದ 12, ಬಿಎಸ್ಪಿಯ 10, ಸಿಪಿಐನ 3 ಸೇರಿ ಸುಮಾರು 619 ನಾಮಪತ್ರಗಳು ಸಲ್ಲಿಕೆಯಾಗಿವೆ.

English summary
Independent candidate Nagalakshmi who wish to contest for BBMP election form Chowdeshwari Ward (Ward No 2) was kidnapped by unidentified persons on Monday morning from Yelahanka, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X