ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಕ್ರೆಡಿಟ್ ರೇಟಿಂಗ್ ಏರಿಕೆ: ಆರ್ಥಿಕ ಸುಸ್ಥಿತಿಯತ್ತ ಪಾಲಿಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 09 : ಕಳೆದ ಐದು ವರ್ಷಗಳ ಹಿಂದೆ ಆರ್ಥಿಕವಾಗಿ ದಿವಾಳಿಯತ್ತ ಸಾಗಿದ್ದ ಬಿಬಿಎಂಪಿ ಇದೀಗ ಚೇತರಿಸಿಕೊಂಡಿದೆ.

ಅದರಂತೆ ಸಿ ಪ್ಲಸ್ ಇದ್ದ ಕ್ರೆಡಿಟ್ ರೇಟಿಂಗ್ ಇದೀಗ ಎ ಮೈನಸ್ ಗೆ ಏರಿಕೆಯಾಗಿದೆ. ಆ ಮೂಲಕ ಆರ್ಥಿಕ ಸದೃಢವಾಗುವತ್ತ ಹೆಜ್ಜೆ ಇಟ್ಟಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಬಿಬಿಎಂಪಿ, ಆಸ್ತಿಗಳನ್ನು ಅಡಮಾನವಿಟ್ಟು ವಿವಿಧ ಬ್ಯಾಂಕ್ ಗಳಿಂದ ಸಾಲ ಪಡೆದಿತ್ತು. ಈಗ ಅಡಮಾನ ಇಡಲಾಗಿದ್ದ 11 ಆಸ್ತಿಗಳ ಪೈಕಿ ೪ ಆಸ್ತಿಗಳನ್ನು ಬ್ಯಾಂಕ್ ಗಳಿಂದ ಬಿಡಿಸಿಕೊಂಡಿದೆ. ಆಸ್ತಿ ತೆರಿಗೆ ಸಂಗ್ರಹದಲ್ಲೂ ಹೆಚ್ಚಳವಾಗಿದೆ.

ಫೆಬ್ರವರಿ ಅಂತ್ಯಕ್ಕೆ ಬಿಬಿಎಂಪಿ ಬಜೆಟ್: ಸಂಪತ್ ರಾಜ್ಫೆಬ್ರವರಿ ಅಂತ್ಯಕ್ಕೆ ಬಿಬಿಎಂಪಿ ಬಜೆಟ್: ಸಂಪತ್ ರಾಜ್

ಇವು ಬಿಬಿಎಂಪಿಯ ಕ್ರೆಡಿಟ್ ರೇಟಿಂಗ್ ನಲ್ಲಿ ಮೇಲೇರಲು ಕಾರಣವಾಗಿದೆ. ಸ್ಥಳೀಯ ಸಂಸ್ಥೆಗಳ ಕ್ರೆಡಿಟ್ ನಿರ್ಧರಿಸುವ ಅಂತಾರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿ ವರದಿಯಂತೆ 5 ವರ್ಷಗಳ ಹಿಂದೆ ಬಿಬಿಎಂಪಿ ಕ್ರೆಡಿಟ್ ರೇಟಿಂಗ್ ಸಿ ಪ್ಲಸ್ ಇತ್ತು ಅದೀಗ ಎ ಮೈನಸ್ ಬಂದಿದ್ದು ಮುಂದಿನ ದಿನಗಳಲ್ಲಿ ಎ ಪ್ಲಸ್ ಗೆ ಏರುವ ನಿರೀಕ್ಷೆ ಇದೆ.

BBMP credit rating improved from C plus to A minus

ಅವಧಿ ಮುನ್ನ ಸಾಲ ಮರುಪಾವತಿ: ಪ್ರಸ್ತುತ ಬಿಬಿಎಂಪಿ 1,231 ಕೋಟಿ ರೂ. ಸಾಲ ಹೊಂದಿದೆ. ಇನ್ನೂ 5 ಆಸ್ತಿಗಳನ್ನು ಅಡಮಾನಮುಕ್ತ ಮಾಡಬೇಕಿದೆ. ಈ ಸಾಲ ಮರುಪಾವತಿ ಸಂಬಂಧಿಸಿದಂತೆ ನಿಗದಿತ ಸಮಯಕ್ಕಿಂತ ಮೊದಲೇ ಕಂತು ಪಾವತಿಸಲಾಗುತ್ತಿದೆ. ಆ ಮೂಲಕ ಬಡ್ಡಿ ದರದಲ್ಲಿ ಉಳಿತಾಯ ಮಾಡುವುದರ ಜತೆಗೆ ಸಾಲ ಮರುಪಾವತಿಯಲ್ಲೂ ಉತ್ತಮವೆನಿಸಿಕೊಳ್ಳಲಿದೆ.

English summary
BBMP has been paid Rs 2,000 crore loan out of Rs 3000 in the last two years. Following this initiative, the credit capacity of the corporation was improved from Cplus to A minus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X