ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಜೆಡಿಎಸ್ ಕಚೇರಿಗೆ ಜಾಗ ಸಿಕ್ಕಿತು

|
Google Oneindia Kannada News

ಬೆಂಗಳೂರು, ಜ. 1 : ಬೆಂಗಳೂರಿನಲ್ಲಿ ಕಚೇರಿ ಕಟ್ಟಡಕ್ಕಾಗಿ ಹಡುಕಾಟ ನಡೆಸುತ್ತಿದ್ದ ಜೆಡಿಎಸ್‌ಗೆ ಜಾಗ ಸಿಕ್ಕಿದೆ. ವೈಯಾಲಿಕಾವಲ್‌ನಲ್ಲಿ ಜೆಡಿಎಸ್ ಕಚೇರಿಗೆ ಜಾಗ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. 30 ವರ್ಷಗಳ ಅವಧಿಗೆ ಈ ಜಾಗವನ್ನು ಲೀಸ್‌ ಆಧಾರದಲ್ಲಿ ಕೊಡಲು ಬಿಬಿಎಂಪಿ ತೀರ್ಮಾನಿಸಿದೆ.

ಸುಪ್ರೀಂಕೋರ್ಟ್ ಆದೇಶದ ಅನ್ವಯ ಜೆಡಿಎಸ್ ರೇಸ್‌ಕೋರ್ಸ್ ರಸ್ತೆಯಲ್ಲಿರುವ ತನ್ನ ಕಚೇರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಬೇಕಿದೆ. ಆದ್ದರಿಂದ ರಾಜಾಜಿನಗರದ ಬಿಡಿಎ ಕಾಂಪ್ಲೆಕ್ಸ್ ಸಮೀಪ ಅಥವಾ ಬಿಬಿಎಂಪಿಯ ಯಾವುದಾದರೂ ಪ್ರದೇಶವನ್ನು ಕಚೇರಿಗೆ ಬಿಟ್ಟುಕೊಡುವಂತೆ ಎಚ್.ಡಿ. ದೇವೇಗೌಡರು ಪಾಲಿಕೆಗೆ ಪತ್ರ ಬರೆದಿದ್ದರು. [ಕಚೇರಿಗಾಗಿ ಕೋರ್ಟ್ ಮೆಟ್ಟಿಲೇರಿದ ಜೆಡಿಎಸ್]

jds

ಬುಧವಾರ ನಡೆದ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಎನ್‌.ಆರ್‌.ರಮೇಶ್‌ ವೈಯಾಲಿಕಾವಲ್‌ ಸರ್ವೆ ಸಂಖ್ಯೆ 1 ಹಾಗೂ 4 ರಲ್ಲಿರುವ 1.1 ಎಕರೆ ಜಮೀನನ್ನು ಜೆಡಿಎಸ್‌ ಕಚೇರಿಗೆ 30 ವರ್ಷಗಳ ಅವಧಿಗೆ ಮಂಜೂರು ಮಾಡುವ ನಿರ್ಣಯವನ್ನು ಮಂಡಿಸಿದರು. [ಜೆಡಿಎಸ್ ಗೆ ಕಚೇರಿ ಖಾಲಿ ಮಾಡಲು ಸುಪ್ರೀಂ ಆದೇಶ]

ಈ ಜಾಗಕ್ಕೆ ವರ್ಷಕ್ಕೆ 1 ಸಾವಿರ ರೂ.ಗಳನ್ನು ಜೆಡಿಎಸ್ ಪಾವತಿ ಮಾಡಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡಿರುವ ನಿರ್ಣಯ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿ, ಅನುಮೋದನೆಗೊಂಡ ಬಳಿಕ ಕಟ್ಟಡ ಕಾಮಗಾರಿ ಕೆಲಸ ಆರಂಭವಾಗಲಿದೆ.

ಇನ್ನೂ ಕಚೇರಿ ಖಾಲಿ ಮಾಡಿಲ್ಲ : ಸುಪ್ರೀಂಕೋರ್ಟ್ ಆದೇಶದಂತೆ ಜೆಡಿಎಸ್‌ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಕಚೇರಿಯನ್ನು ಡಿ.31ರೊಳಗೆ ಖಾಲಿ ಮಾಡಿಕೊಡಬೇಕಿತ್ತು. ಆದರೆ, ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ ಜೆಡಿಎಸ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಜ.10ರ ನಂತರ ನಡೆಯಲಿದೆ.

English summary
The Bruhat Bengaluru Mahanagara Palike (BBMP) on Wednesday passed a resolution to allocate 1.1 acres land to Janata Dal (Secular) office building. The proposal is to offer a plot for 30 years for an annual lease of Rs. 1,000. Supreme Court ordered that JD(S) office in Race Course Road in Bengaluru belongs to Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X