ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಷ್ಯಾಕ್ಕೆ ಹಾರಿದ ಬಿಬಿಎಂಪಿಯ 27 ಸದಸ್ಯರು

|
Google Oneindia Kannada News

ಬೆಂಗಳೂರು, ಜು. 22 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 27 ಸದಸ್ಯರ ತಂಡವೊಂದು ಏಳು ದಿನಗಳ ರಷ್ಯಾ ಪ್ರವಾಸ ಕೈಗೊಂಡಿದೆ. ಬೆಂಗಳೂರಿನ ಕಸದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ, ಇನ್ನು ಬಿಬಿಎಂಪಿ ಆರ್ಥಿಕ ಸ್ಥಿತಿ ಏನು ಎಂಬುದು ಎಲ್ಲರಿಗೂ ತಿಳಿಸಿದೆ. ಈ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಬಿಬಿಎಂಪಿ ಸದಸ್ಯರು ವಿದೇಶಕ್ಕೆ ಹಾರಿದ್ದಾರೆ.

ಬಿಬಿಎಂಪಿಯ ಪ್ರತಿಪಕ್ಷ ನಾಯಕ ಬಿ.ಎನ್.ಮಂಜುನಾಥ ರೆಡ್ಡಿ, ಕಾಂಗ್ರೆಸ್‌ ನ ಎಂ.ಕೆ.ಗುಣಶೇಖರ್, ಎಂ.ನಾಗರಾಜ್, ಜೆಡಿಎಸ್ ನಾಯಕ ಆರ್.ಪ್ರಕಾಶ್, ಬಿಜೆಪಿಯ ಕೆ.ರಂಗಣ್ಣ ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷದ 27 ಕಾರ್ಪೋರೇಟರ್‌ಗಳು ವಿದೇಶ ಪ್ರವಾಸ ಕೈಗೊಂಡಿದ್ದಾರೆ.

BBMP

ಮಂಗಳವಾರ ಮುಂಜಾನೆ ನಾಲ್ಕು ಗಂಟೆಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬಿಬಿಎಂಪಿ ಸದಸ್ಯರು ದುಬೈಗೆ ತೆರಳಿದ್ದು, ಅಲ್ಲಿಂದ ರಷ್ಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮೊದಲ ಮೂರು ದಿನ ಪೀಟರ್ಸ್‌ ಬರ್ಗ್ ನಗರ ಹಾಗೂ ನಂತರದ ಮೂರು ದಿನಗಳನ್ನು ಮಾಸ್ಕೊ ನಗರದಲ್ಲಿ ಕಳೆಯುವ ತಂಡ ಜು.29ರಂದು ಬೆಂಗಳೂರಿಗೆ ಮರಳಲಿದೆ. [ದುಬೈ ಪ್ರವಾಸ ರದ್ದುಗೊಳಿಸಿದ ಮೇಯರ್]

ರಷ್ಯಾ ಪ್ರವಾಸ ಕೈಗೊಳ್ಳುವ ಬಗ್ಗೆ ಎರಡು ತಿಂಗಳ ಹಿಂದೆಯೇ ಚರ್ಚೆ ನಡೆದಿತ್ತು ಎಂದು ತಿಳಿದುಬಂದಿದೆ. ಸುಮಾರು 27 ಸದಸ್ಯರು ಹಲವರು ಕುಟುಂಬ ಸಮೇತರಾಗಿ ಪ್ರವಾಸಕ್ಕೆ ತೆರಳಿದ್ದಾರೆ. ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಅಧಿಕಾರಾವಧಿ ಕೆಲವೇ ತಿಂಗಳಲ್ಲಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

ಮಂಡೂರಿಗೆ ಭೇಟಿ ನೀಡುತ್ತಾರಾ? : ಬೆಂಗಳೂರು ನಗರದ ಕಸ ತೆಗೆದುಕೊಂಡು ಹೋಗಿ ಸುರಿಯುತ್ತಿರುವ ಮಂಡೂರು ಘಟಕಕ್ಕೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ರಷ್ಯಾ ಪ್ರವಾಸಕ್ಕೆ ಹೊರಟಿರುವ ಬಿಬಿಎಂಪಿ ಪಾಲಿಕೆ ಸದಸ್ಯರು ಮಂಡೂರು ಭೇಟಿಯನ್ನು ಬಿಟ್ಟು ರಷ್ಯಾಕ್ಕೆ ಹಾರಿದ್ದಾರೆ.

ಮೇಯರ್ ಏನು ಹೇಳ್ತಾರೆ : ಪಾಲಿಕೆ ಸದಸ್ಯರ ವಿದೇಶ ಪ್ರವಾಸದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ "ಬಿಬಿಎಂಪಿ ಸದಸ್ಯರ ಪ್ರವಾಸದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ವೈಯಕ್ತಿಕವಾಗಿ ಅವರು ಪ್ರವಾಸ ಕೈಗೊಂಡಿರಬಹುದು" ಎಂದು ಹೇಳಿದ್ದಾರೆ.

English summary
27 Bruhat Bangalore Mahanagara Palike (BBMP) corporators plans for a foreign trip for Russia form July 22 to 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X