ಭಾನುವಾರವೂ ಬೆಂಗಳೂರಲ್ಲಿ ಜೆಸಿಬಿ ಘರ್ಜನೆ

Written By:
Subscribe to Oneindia Kannada

ಬೆಂಗಳೂರು. ಆಗಸ್ಟ್, 07: ಭಾನುವಾರವೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ರಜೆ ಮಾಡಲಿಲ್ಲ. ಶನಿವಾರದಿಂದ ನಡೆಸುತ್ತಿದ್ದ ಅಕ್ರಮ ಭೂ ಮತ್ತು ರಾಜಾ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಭಾನುವಾರವೂ ಮುಂದುವರಿಸಿದ್ದರು.

ಮಹದೇವಪುರ, ಕೈಗೊಂಡನಹಳ್ಳಿ ಮತ್ತು ಕಸವನಹಳ್ಳಿಯಲ್ಲಿ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದ್ದು ದೊಡ್ಡ ಕಟ್ಟಗಳ ತೆರವು ಕಾರ್ಯಾಚರಣೆ ಭಾನುವಾರ ನಡೆಯಿತು.['ಈಗಷ್ಟೇ ಮನೆ ಕಟ್ಟಿದ್ದೇನೆ, ಗೃಹ ಪ್ರವೇಶ ಆಗಿಲ್ಲ ಬಿಟ್ಟು ಬಿಡಿ']

bengaluru

ಕೈಗೊಂಡನಹಳ್ಳಿ ಮತ್ತು ಕಸವನಹಳ್ಳಿಯಿಂದ ಚೋಳಕೆರೆವರೆಗೂ ತೆರವು ಕಾರ್ಯಾಚರಣೆ ನಡೆಸಿದರು. ಈ ವೇಳೆ ರಾಜಾಕಾಲುವೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ 2 ಅಪಾರ್ಟ್ ಮೆಂಟ್ ಹಾಗೂ ನಾಲ್ಕು ಮನೆಗಳನ್ನು ನೆಲಸಮ ಮಾಡಲಾಯಿತು. ಬೊಮ್ಮನಹಳ್ಳಿ ವಲಯದ ಅವಾನಿ ಶೃಂಗೇರಿ ನಗರ, ಅರಕೆರೆಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು.[ಸಾರಕ್ಕಿ ಕೆರೆ ತೆರವು: 2 ಸಾವಿರ ಕೋಟಿ ಮೌಲ್ಯದ ಜಾಗ ವಶ]

ಅಧಿಕಾರಿಗಳಿಗೆ ಶಾಪ:
ನಾವು 2005 ರಲ್ಲಿ ನಿವೇಶನ ತೆಗೆದುಕೊಂಡು ಕೋಟ್ಯಂತರ ರು. ವೆಚ್ಚ ಮಾಡಿ, ಸಾಲ ಮಾಡಿ ಮನೆ ಕಟ್ಟಿದ್ದೇವೆ. ನಮ್ಮ ಬಳಿ ಎಲ್ಲ ದಾಖಲೆಗಳು ಇವೆ. ನೋಟಿಸ್ ಸಹ ನೀಡದೆ ಅಧಿಕಾರಿಗಳು ಯಾವ ಆಧಾರದಲ್ಲಿ ಮನೆ ಕೆಡವುತ್ತಿದ್ದಾರೆ ಎಂದು ನಿವಾಸಿಗಳು ಪ್ರಶ್ನೆ ಮಾಡಿದರು. ನಕ್ಷೆ ನೋಡಿದರೆ ರಾಜಕಾಲುವೆ ಇಲ್ಲಿ ಬರುವುದೇ ಇಲ್ಲ. ಕೆಲ ಬಿಲ್ಡರ್ ಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು ನಮ್ಮ ಮನೆ ನೆಲಸಮ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bruhat Bangalore Mahanagara Palike (BBMP) on August 7, 2016 continue the operation to clear encroachments of raja kaluve.
Please Wait while comments are loading...