ರಾಜಕಾಲುವೆ ಜಾಗದಲ್ಲೇ ದರ್ಶನ್ ತೂಗುದೀಪ ಅವರ ಮನೆ!

Posted By:
Subscribe to Oneindia Kannada

ಬೆಂಗಳೂರು, ಸೆ. 15: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮಾಜಿ ಸಚಿವ, ಕಾಂಗ್ರೆಸ್ ಪ್ರಭಾವಿ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಆಸ್ತಿಗಳು ರಾಜಕಾಲುವೆ ಒತ್ತುವರಿ ತೆರವು ಜಾಗದಲ್ಲೇ ಇರುವುದು ದೃಢಪಟ್ಟಿದೆ.

ದರ್ಶನ್ ರ 'ತೂಗುದೀಪ ನಿವಾಸ' ಮತ್ತು ಶಾಮನೂರು ಶಿವಶಂಕರಪ್ಪ ಅವರ ಎಸ್ ಎಸ್ ಆಸ್ಪತ್ರೆ ಸಹ ಇದೀಗ ತೆರವಿನ ಭಯ ಎದುರಿಸುತ್ತಿದೆ. [ಒತ್ತುವರಿ ತೆರವು, ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ: ಸಿಎಂ]

ಭೂ ದಾಖಲೆಗಳ ಜಂಟಿ ನಿರ್ದೇಶಕರು ಸೆ. 8ರಂದು ಆಯುಕ್ತರಿಗೆ ಸಲ್ಲಿಸಿರುವ ವರದಿ ಪ್ರಕಾರ, ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಹಲಗೇವಡೇರಹಳ್ಳಿ ಗ್ರಾಮದ ಸರ್ವೇ ನಂ.3೮ರಿಂದ 41, 43ರಿಂದ 47 ಹಾಗೂ 51ರಿಂದ 56ರವರೆಗಿನ ಆಸ್ತಿಗಳ ಸರ್ವೇ ನಡೆಸಲಾಗಿದೆ. ಅದರಲ್ಲಿ ಕಂದಾಯ ಇಲಾಖೆ ದಾಖಲೆಗಳಲ್ಲಿರುವಂತೆ ಹದ್ದಿಗಿಡಿದ ಹಳ್ಳ ಸೇರಿ ಒಟ್ಟು 15 ಸರ್ವೇ ಸಂಖ್ಯೆಯಲ್ಲಿರುವ ಆಸ್ತಿಗಳಿಂದ 7.31 ಎಕರೆ ವಿಸ್ತೀರ್ಣದ ರಾಜಕಾಲುವೆ ಜಾಗ ಒತ್ತುವರಿಯಾಗಿದೆ. [ಮನೆ ಕಳೆದುಕೊಂಡವರಿಂದ ಬಿಬಿಎಂಪಿಗೆ ಪ್ರಶ್ನೆಗಳ ಸುರಿಮಳೆ]

BBMP confirms encroachment by Darshan and Shamanur Shivashankarappa Hospital


ಈ ಪ್ರದೇಶದಲ್ಲಿ ಚಿತ್ರನಟ ದರ್ಶನ್‌ ಅವರ 'ತೂಗುದೀಪ ನಿಲಯ' ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಒಡೆತನದ 'ಎಸ್‌ಎಸ್ ಆಸ್ಪತ್ರೆ' ಇದೆ. ಎರಡು ಕೂಡಾ ಒತ್ತುವರಿಯಾಗಿದೆ. ಭೂದಾಖಲೆಗಳ ಜಂಟಿ ನಿರ್ದೇಶಕರಿಗೆ ಸಿಕ್ಕಿರುವ ವರದಿಯಂತೆ, ದರ್ಶನ್ ಮನೆಯಿಂದ 2 ಗುಂಟೆ ಹಾಗೂ ಎಸ್‌ಎಸ್ ಆಸ್ಪತ್ರೆಯಿಂದ 22 ಗುಂಟೆ ರಾಜಕಾಲುವೆ ಜಾಗ ಒತ್ತುವರಿಯಾಗಿದೆ.

ಚಿತ್ರನಟ ದರ್ಶನ್ ಮನೆ ರಾಜಕಾಲುವೆ ಜಾಗದಲ್ಲಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ ಬಿಬಿಎಂಪಿ ಆಯುಕ್ತರಿಗೆ ವರದಿ ಸಲ್ಲಿಸಿದೆ. ಕೇಂದ್ರ ಕಚೇರಿಯಿಂದ ನಮಗೆ ವರದಿ ಬಂದಿಲ್ಲ. ಈ ವರದಿ ಬಂದ ಮೇಲೆ ಮುಂದಿನ ಕ್ರಮ ಜರುಗಿಸಲಾಗುತ್ತದೆ.

30 ವರ್ಷಗಳ ಹಿಂದೆ ಆಸ್ಪತ್ರೆಗೆಂದು 2.34 ಎಕರೆ ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ)ಪಡೆದುಕೊಂಡಿದ್ದೆವು. ಅದು ಈಗ ಹೇಗೆ ಅಕ್ರಮವಾಗುತ್ತದೆ ಎಂದು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BBMP confirms encroachment by Darshan The BBMP's Rajarajeshwarinagar Zone Joint Commissioner B. Veerabadrappa said he had sent a letter to the Revenue Department seeking superimposed maps of location of Kannada film actor Darshan Thoogudipa's house and former minister Shamanur Shivashankarappa's SS hospital.
Please Wait while comments are loading...