ಬೆಂಗಳೂರಲ್ಲಿ 5 ಸಾವಿರ ರಸ್ತೆ ಗುಂಡಿಗಳು, ಮುಚ್ಚಲು ಗಡುವು

Posted By: Gururaj
Subscribe to Oneindia Kannada

ಬೆಂಗಳೂರು, ಆಗಸ್ಟ್. 28 : ಬೆಂಗಳೂರು ನಗರದಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆಗೆ ರಸ್ತೆಗಳು ಹಾಳಾಗಿದ್ದು ಗುಂಡಿಗಳು ಬಾಯ್ತೆರೆದು ನಿಂತಿವೆ. ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಗಡುವು ನೀಡಿದೆ.

ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ಭಾನುವಾರ ರಾತ್ರಿ ನಗರ ಸಂಚಾರ ನಡೆಸಿದರು. ಪಾಲಿಕೆಯ ಇಂಜಿನಿಯರ್‌ಗಳ ಜೊತೆ ರಸ್ತೆ ದುರಸ್ಥಿ ಬಗ್ಗೆ ಮಾತುಕತೆ ನಡೆಸಿದರು.

ಇನ್ನೂ ಒಂದು ವಾರಗಳ ಕಾಲ ಬೆಂಗಳೂರಲ್ಲಿ ಮಳೆ

BBMP commissioner inspects potholes, fix dead line to filling up

ನಗರ ರಸ್ತೆಗಳಲ್ಲಿ ಸುಮಾರು 5 ಸಾವಿರ ಗುಂಡಿಗಳಿವೆ ಎಂದು ಬಿಬಿಎಂಪಿ ಅಂದಾಜಿಸಿದೆ. ಈ ಗುಂಡಿಗಳನ್ನು ಮುಚ್ಚಲು ಮಂಜುನಾಥ ಪ್ರಸಾದ್ ಅವರು ಅಧಿಕಾರಿಗಳಿಗೆ ಗುಡುವು ನೀಡಿದರು.

ಮಯೋಹಾಲ್, ಇಂದಿರಾ ನಗರ ಬಿಎಂಟಿಸಿ ಬಸ್ ನಿಲ್ದಾಣ, ನೂರು ಅಡಿ ರಸ್ತೆ ಮುಂತಾದ ಕಡೆ ರಸ್ತೆಗುಂಡಿಗಳನ್ನು ಪರಿಶೀಲಿಸಿದ ಆಯುಕ್ತರು ಮುಂದಿನ 48 ಗಂಟೆಗಳಲ್ಲಿ ಗುಂಡಿಗಳನ್ನು ಮುಚ್ಚಬೇಕು ಎಂದು ಆದೇಶ ನೀಡಿದರು.

   Bengaluru : Jayadeva Flyover will be demolished for Namma Metro

   ಬೆಂಗಳೂರು: ಮೋಡ ಬಿತ್ತನೆಗೆ ಚಾಲನೆ

   ಮಾಧ್ಯಮಗಳ ಜೊತೆ ಮಾತನಾಡಿದ ಆಯುಕ್ತರು, 'ಎರಡು ದಿನಗಳಲ್ಲಿ ಗುಂಡಿಗಳನ್ನು ಮುಚ್ಚಲು ಆಯಾ ವಾರ್ಡ್ ವ್ಯಾಪ್ತಿಯ ಇಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ವಾರ ಮತ್ತೊಮ್ಮೆ ಸ್ಥಿತಿ-ಗತಿ ತಿಳಿಯಲು ಪರಿಶೀಲನೆ ನಡೆಸಲಾಗುತ್ತದೆ' ಎಂದರು.

   ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ದಾಖಲೆಯ ಮಳೆಯಾಗಿದೆ. ಇಲ್ಲಿಯ ತನಕ 345.5 ಮಿ.ಮೀ ಮಳೆಯಾಗಿದೆ. ಇದರಿಂದಾಗಿ ನಗರದ ರಸ್ತೆಗಳಲ್ಲಿ ನೀರು ನಿಂತು ಗುಂಡಿಗಳು ನಿರ್ಮಾಣವಾಗಿವೆ. ಇನ್ನೂ ಒಂದು ವಾರಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Bruhat Bengaluru Mahanagara Palike (BBMP) Commissioner N.Manjunath Prasad on Sunday night went on an inspection of pothole in city roads. He had set the deadline for filling up 5,000 potholes across the city.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   X