ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್ ತೆರಿಗೆ ಪಾವತಿ ನಿರಾಳ:20 ದಿನದಲ್ಲಿ 365 ಕೋಟಿ ಸಂಗ್ರಹ

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಆನ್‌ಲೈನ್ ನಲ್ಲಿ ಆಸ್ತಿ ತೆರಿಗೆ ಪಾವತಿಗಿದ್ದ ವಿಘ್ನವನ್ನು ಬಿಬಿಎಂಪಿ ಅರಿಪಡಿಸಿರುವುದರಿಂದ ತೆರಿಗೆ ಪಾವತಿ ಪ್ರಮಾಣ ಹೆಚ್ಚಳವಾಗಿದೆ. 20ದಿನದಲ್ಲಿ ಒಟ್ಟು 365 ಕೋಟಿ ರೂ. ತೆರಿಗೆ ಪಾವತಿಯಾಗಿದೆ.

2 ಲಕ್ಷಕ್ಕೂ ಅಧಿಕ ಜನರು ತೆರಿಗೆ ಪಾವತಿಸಿದ್ದಾರೆ. ಕಳೆದ ಆರ್ಥಿಕ ವರ್ಷಗಳಿಗೆ ಹೋಲಿಸಿದರೆ ಮೊದಲ 20 ದಿನಗಳಲ್ಲಿ ಸಂಗ್ರಹವಾದ ಅತಿ ಹೆಚ್ಚು ತೆರಿಗೆ ಇದಾಗಿದೆ. ಆನ್ ಲೈನ್ ಮೂಲಕ 145 ಕೋಟಿ ರೂ. ಮತ್ತು ಚಲನ್ ಗಳ ಮೂಲಕ 215 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಏ.30 ರೊಳಗೆ ಶೇ.5ರಷ್ಟು ರಿಯಾಯಿತಿಯಲ್ಲಿ ತೆರಿಗೆ ಪಾವತಿ ಮಾಡಲು ಅವಕಶವಿದೆ. ಈ ಬಾರಿ ಅವಧಿ ವಿಸ್ತರಣೆ ಮಾಡುವುದಿಲ್ಲ ಎಂದು ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಏಪ್ರಿಲ್ ಅಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿ ಪಡೆಯಿರಿ ಏಪ್ರಿಲ್ ಅಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿ ಪಡೆಯಿರಿ

ಹಿಂದಿನ ವರ್ಷವೂ ಆನ್ ಲೈನ್ ಮೂಲಕ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ತಾಂತ್ರಿಕ ತೊಂದರೆಯಿಂದ ಪಾವತಿ ಮಾಡುವುದು ಕಷ್ಟವಾಗಿತ್ತು. ಆನ್ ಲೈನ್ ವ್ಯವಸ್ಥೆಯಿದ್ದರೂ ಪ್ರಯೋಜನವಿಲ್ಲದೆ ಜನ ಬ್ಯಾಂಕ್ ಗಳ ಮುಂದೆ ಸಾಲುಗಟ್ಟಿ ಪಾವತಿಸಿದ್ದರು.

BBMP collects Rs365 crores tax in 20 days!

ಕಳೆದ ವರ್ಷ ಆನ್‌ಲೈನ್ ತಂತ್ರಾಂಶದಲ್ಲಿ ದೋಷಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ರಿಯಾಯಿತಿ ಅವಧಿ ವಿಸ್ತರಿಸಲಾಗಿತ್ತು. ಈ ಬಾರಿ ಅದಕ್ಕೆ ಅಕಾಶವಿಲ್ಲ. ಹೀಗಾಗಿ ತೆರಿಗೆದಾರರು ಏ.30ರೊಳಗೆ ಪೂರ್ಣ ತೆರಿಗೆ ಪಾವತಿಸಿ ಶೇ.5ರಷ್ಟು ರಿಯಾಯಿತಿ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

English summary
Sorting out technical errors in online tax payment system, BBMP has successfully collected Rs365 crores as tax from 2 lakhs residents within last 20 days as the authority had declared 5% rebate on paying tax within April 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X