ಕಸ ವಿಲೇವಾರಿ ಸ್ಥಗಿತ ಇಲ್ಲ: ತೆರಿಗೆ ಇಲಾಖೆಯೊಂದಿಗೆ ಜ.16ರಂದು ಸಭೆ

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 11: ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಜ.16 ರಂದು ಸಭೆ ನಡೆಸಿ ಸೇವಾ ತೆರಿಗೆ ಬಾಕಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಆಯುಕ್ತರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಗುರುವಾರದಿಂದ ಕಸ ವಿಲೇವಾರಿ ಸ್ಥಗಿತಗೊಳಿಸುವ ನಿರ್ಧಾರವನ್ನು ಗುತ್ತಿಗೆದಾರರು ಕೈಬಿಟ್ಟಿದ್ದಾರೆ.

ಅಲ್ಲದೆ, ಮೇಯರ್ ಚೀನಾ ಪ್ರವಾಸ, ಆಯುಕ್ತರು ದೆಹಲಿ ಪ್ರಯಾಣದ ಹಿನ್ನೆಲೆಯಲ್ಲಿ ಪಾಲಿಕೆಯ ಕಸ ವಿಲೇವಾರಿ ಆಟೋ, ಲಾರಿ, ಚಾಲಕರು, ಸಹಾಯಕರು, ಮತ್ತು ಮೇಲ್ವಿಚಾರಕರು ಕೂಡ ಸೇವಾ ಖಾಯಂಗಾಗಿ ಗುರುವಾರದಿಂದ ಕರ್ತವ್ಯಕ್ಕೆ ಹಾಜರಾಗದಿರಲು ಕೈಗೊಂಡಿದ್ದ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ನಾಳೆಯಿಂದ ಬೆಂಗಳೂರು ಕಸ ತೆಗೆಯೋರು ಯಾರು?

ನಗರದಲ್ಲಿ ಯಾವುದೇ ಕಸದ ಸಮಸ್ಯೆಯಾಗುವುದಿಲ್ಲ ಎಂದಿನಂತೆ ಕಸ ವಿಲೇವಾರಿ ಪ್ರಕ್ರಿಯೆ ನಡೆಯಲಿದೆ. ಜಿಎಸ್ ಟಿ ಜಾರಿಗೂ ಹಿಂದಿನ ಮೂರು ವರ್ಷಗಳಿಗೆ ಅನ್ವಯಿಸುವಂತೆ ಘನತ್ಯಾಜ್ಯ ವಿಲೇವಾರಿ ಬಿಬಿಎಂಪಿ ಗುತ್ತಿಗೆದಾರರು ಶೇ.೧೫ರಷ್ಟು ಬಾಕಿ ಸೇವಾ ತೆರಿಗೆ ಪಾವತಿ ಮಾಡಬೇಕು ಎಂದು ತೆರಿಗೆ ಇಲಾಖೆ ನೋಡಿಸ್ ಜಾರಿಮಾಡಿತ್ತು.

ಸಂಕ್ರಾಂತಿ ವಿಶೇಷ ಪುಟ

BBMP cleaning contractors strike withdrawn

ಆದರೆ, ಬಿಬಿಎಂಪಿಯು ಗುತ್ತಿಗೆದಾರರ ಮೂಲಕ ನಿರ್ವಹಿಸುತ್ತಿರುವ ಘನ ತ್ಯಾಜ್ಯ ವಿಲೇವಾರಿಗೆ ಸೇವಾ ತೆರಿಗೆಯಿಂದ ವಿನಾಯ್ತಿ ಇದೆ ಎಂದು ಟೆಂಡರ್ ಅವಧಿಯಲ್ಲಿ ಸೇವಾ ತೆರಿಗೆಗೆ ಒಳಪಡಿಸಿರಲಿಲ್ಲ. ಇದನ್ನು ಒಪ್ಪದ ತೆರಿಗೆ ಇಲಾಖೆಯು ಸೇವಾ ತೆರಿಗೆ ಪಾವತಿಸದಿದ್ದರೆ ಗುತ್ತಿಗೆದಾರರ ಬ್ಯಾಂಕ್ ಖಾತೆಯಲ್ಲಿನ ಹಣ ಮುಟ್ಟುಗೋಲು ಹಾಕಿಕೊಳ್ಳುವ ಬೆದರಿಕೆ ಒಡ್ಡುತ್ತಿದೆ ಎಂದು ಆರೋಪಿಸಿದ್ದರು. ಹಾಗಾಗಿ ಜ.16 ರಂದು ತೆರಿಕೆ ಇಲಾಖೆಯೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ಭರವಸೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Following assurance by Commissioner Manjunath Prasad to resolve service tax to cleaning contractors in BBMP, The indefinite strike by contractors was withdrawn and the meeting will be held on January 16 on the issue.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ