ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

300 ಗುಂಡಿಗಳು ಮಾತ್ರ ಉಳಿದಿವೆ: ಹೈಕೋರ್ಟ್‌ಗೆ ಬಿಬಿಎಂಪಿ ವರದಿ

|
Google Oneindia Kannada News

ಬೆಂಗಳೂರು, ಸೆ.24: ರಸ್ತೆ ಗುಂಡಿಗಳನ್ನು ಮುಚ್ಚಲು ಕೈಗೊಂಡ ಕ್ರಮಗಳ ವರದಿಯನ್ನು ಬಿಬಿಎಂಪಿ ಹೈಕೋರ್ಟ್‌ಗೆ ಸೋಮವಾರ ಸಲ್ಲಿಸಿದೆ.

ಬುಧವಾರ ಬಿಬಿಎಂಪಿಯು ಬೆಂಗಳೂರಲ್ಲಿ ಇನ್ನು 1600 ಗುಂಡಿಗಳನ್ನು ಮುಚ್ಚುವುದು ಬಾಕಿ ಇದೆ ಎಂದು ವರದಿ ನೀಡಿತ್ತು, ಇದಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಸೆ.24ರವರೆಗೆ ಗಡುವು ನೀಡಿತ್ತು. ಇದೀಗ ಬಿಬಿಎಂಪಿ ವರದಿಯನ್ನು ಸಲ್ಲಿಕೆ ಮಾಡಿದ್ದು ಇನ್ನೂ ಅಂದಾಜು 300 ಗುಂಡಿಗಳನ್ನು ಮುಚ್ಚಬೇಕಿದೆ ಎಂದು ಮಾಹಿತಿ ನೀಡಿದೆ.

ಸೆ.24ರೊಳಗೆ ಗುಂಡಿ ಮುಕ್ತ ಬೆಂಗಳೂರು: ಹೈಕೋರ್ಟ್ ಡೆಡ್ ಲೈನ್ ಸೆ.24ರೊಳಗೆ ಗುಂಡಿ ಮುಕ್ತ ಬೆಂಗಳೂರು: ಹೈಕೋರ್ಟ್ ಡೆಡ್ ಲೈನ್

ಏನು ಮಾಡುತ್ತೀರೋ ಅದನ್ನು ಇಂದೇ ಮಾಡಿ ಮುಹಿಸಿ ಎಂದು ಸೂಚನೆ ನೀಡಿರುವ ಹೈಕೋರ್ಟ್ ವಿಚಾರಣೆಯನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದೆ.

BBMP claims only 300 potholes remained in Bengaluru roads

ಸೋಮವಾರ(ಸೆ.24)ರೊಳಗೆ ಒಂದೇ ಒಂದು ರಸ್ತೆಗುಂಡಿ ಕಾಣಿಸಬಾರದು ಎಂದು ಸಿಜೆ ದಿನೇಶ್ ಮಹೇಶ್ವರಿ ತಾಕೀತು ಮಾಡಿದ್ದಾರೆ, ಬುಧವಾರ ಸಂಜೆಯಿಂದ ಇಲ್ಲಿಯವರೆಗೆ 899 ಗುಂಡಿಗಳನ್ನು ಮುಚ್ಚಲಾಗಿದೆ, ಇನ್ನೂ 2,172 ಗುಂಡಿಗಳನ್ನು ಮುಚ್ಚಬೇಕಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ರಸ್ತೆ ಗುಂಡಿಗೆ ಶಾಶ್ವತ ಪರಿಹಾರ: ಬಿಬಿಎಂಪಿಗೆ ಸಿಜೆ ಖಡಕ್ ಆದೇಶ ರಸ್ತೆ ಗುಂಡಿಗೆ ಶಾಶ್ವತ ಪರಿಹಾರ: ಬಿಬಿಎಂಪಿಗೆ ಸಿಜೆ ಖಡಕ್ ಆದೇಶ

ರಸ್ತೆಗುಂಡಿಗಳ ಕುರಿತಂತೆ ಬುಧವಾರ ನಡೆದಿದ್ದ ವಿಚಾರಣೆಯಲ್ಲಿ ರಸ್ತೆಗುಂಡಿಗಳ ಬಗ್ಗೆ ಮೆಷರ್ ಮೆಂಟ್ ಪುಸ್ತಕ ಸಲ್ಲಿಸಲು ಒಂದು ದಿನ ಕಾಲಾವಕಾಶ ನೀಡುವಂತೆ ಬಿಬಿಎಂಪಿ ಪರ ವಕೀಲರು ಮಾಡಿದ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿತ್ತು. ಅಷ್ಟೇ ಅಲ್ಲದೆ ಒಂದೇ ದಿನದಲ್ಲಿ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚುವಂತೆ ಸೂಚಿಸಿತ್ತು. ಆದರೆ ಬಿಬಿಎಂಪಿ ಅದು ಸಾಧ್ಯವಾಗದ ಕಾರಣ ಸೆ.24ರವರೆಗೆ ಗಡುವು ನೀಡಿತ್ತು.

English summary
BBMP has submitted affidavit before high court claiming that only 300 potholes untouched in the city. But the court has set a deadline for everything before 1 pm today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X