ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಯಾವ ಭಾಗ್ಯ: ಬಿಬಿಎಂಪಿ ಬಜೆಟ್ ಇಂದು ಮಂಡನೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 28 : ಈ ಬಾರಿಯ ಬಿಬಿಎಂಪಿ ಬಜೆಟ್ ನಲ್ಲಿ ಬೆಂಗಳೂರು ಸ್ವಚ್ಛ ಹಾಗೂ ಮಾಲಿನ್ಯ ಮುಕ್ತ ಬೆಂಗಳೂರು' ಮುಖ್ಯ ಆಶಯವಾಗುವ ಸಾದ್ಯತೆ ಇದೆ.

ಇದಕ್ಕಾಗಿ ಪ್ರತಿ ವಾರ್ಡ್ ಗೊಂದು ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ, ಮಾಲಿನ್ಯ ನಿಯಂತ್ರಣಕ್ಕಾಗಿ ನಗರದ ಕೆಲವೆಡೆ ಮಾಲಿನ್ಯ ನಿಯಂತ್ರಣ ಮತ್ತು ನಿರ್ವಹಣಾ ಕೊಠಡಿ ಗಳ ನಿರ್ಮಾಣ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಒಳಗೊಂಡ ಬಿಬಿಎಂಪಿ ಬಜೆಟ್ ಬುಧವಾರ ಮಂಡನೆಯಾಗಲಿದೆ.

ಬಜೆಟ್ : ಬಿಬಿಎಂಪಿ ವ್ಯಾಪ್ತಿಯಲ್ಲಿ ಏನೇನು ಅಭಿವೃದ್ಧಿ?ಬಜೆಟ್ : ಬಿಬಿಎಂಪಿ ವ್ಯಾಪ್ತಿಯಲ್ಲಿ ಏನೇನು ಅಭಿವೃದ್ಧಿ?

ಕುತೂಹಲಕಾರಿ ಸಂಗತಿಯೆಂದರೆ, ಮೇಯರ್ ಸಂಪತ್ ರಾಜ್ ಈ ವರ್ಷದ ಮೊದಲ ದಿನ ಪಾಲಿಕೆ ಆಸ್ಪತ್ರೆ ಯಲ್ಲಿ ಹುಟ್ಟಿದ ಮೊದಲ ಹೆಣ್ಣು ಮಗುವಿಗೆ ಐದು ಲಕ್ಷ ರೂ ಡೆಪಾಸಿಟ್ ಮಾಡುವ ಮೂಲಕ ಸುದ್ದಿಯಾದರು.

BBMP Budget: What can get Bengalureans?

ಈ ಡೆಪಾಸಿಟ್ ಆಲೋಚನೆ ಈಗ ಬೃಹತ್ ಯೋಜನೆ ಸ್ವರೂಪ ಪಡೆದಿದ್ದು. ಬುಧವಾರ ಮಂಡನೆಯಾಗಲಿರುವ ಬಜೆಟ್ ನಲ್ಲಿ ಬಿಬಿಎಂಪಿ ಪಾಲಿಕೆಯ ಎಲ್ಲಾ 124 ಹೆರಿಗೆ ಆಸ್ಪತ್ರೆಗಳಲ್ಲಿ ಹುಟ್ಟುವ ಮೊದಲ ಮಗುವಿಗೆ ಐದು ಲಕ್ಷ ರೂ ಡೆಪಾಸಿಟ್ ಇಡುವ ಯೋಜನೆಯೂ ಬಜೆಟ್ ನಲ್ಲಿ ಅಡಕವಾಗುವ ಸಾದ್ಯತೆ ಇದೆ.

ಇದರ ಮೂಲಕಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮನ ಗೆಲ್ಲಲು ಜನಪ್ರಿಯ ಯೋಜನೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಬಜೆಟ್ ನಲ್ಲಿ ಮಂಡನೆಯಾಗುವ ಲಕ್ಷಣ ಇದೆ.

ಇಇಷ್ಟಾಆಗಿಯೂ ಬಜೆಟ್ ಗಾತ್ರ 10 ಸಾವಿರ ಕೋಟಿ ಮೀರುವ ಸಾಧ್ಯತೆ ಕಡಿಮೆ ಎಂದೇ ಮೂಲಗಳು ಹೇಳುತ್ತವೆ. ಮಳೆ ನೀರು ಕೊಯ್ಲು ಪದ್ಥತಿ ಕಟ್ಟುನಿಟ್ಟಿನ ಜಾರಿಗೆ ಒತ್ತು ನೀಡುವುದು, ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ರಸ್ತೆಗಳಲ್ಲಿ ಅಲ್ಲಲ್ಲಿ ಸ್ಮಾರ್ಟ್ ಬಿನ್ ಗಳ ಅಳವಡಿಕೆ, ತುರ್ತು ಆರೋಗ್ಯ ಸೇವೆಗಾಗಿ ನಗರಕ್ಕೆ ಬರುವ ಜನರಿಗೆ ಎಂಟು ವಲಯಗಳಲ್ಲೂ ಹೆಲಿಪ್ಯಾಡ್ ಗಳ ನಿರ್ಮಾಣ ಸೇರಿದಮತೆ ಇನ್ನೂ ಅನೇಕ ಮಹತ್ವದ ಯೋಜನೆಗಳು ಬಜೆಟ್ ನಲ್ಲಿ ಘೋಷಣೆಯಾಗಲಿವೆ.

124 ಹೆಣ್ಮಕ್ಕಳಿಗೆ 5 ಲಕ್ಷ: ಮೇಯರ್ ಸಂಪತ್ ರಾಜ್ ಅವರು ಬಿಬಿಎಂಪಿಯ ಚುಕ್ಕಾಣಿ ಹಿಡಿದ ಬಳಿಕ 2018 ರ ಹೊಸ ವರ್ಷ ದಂದು ಪಾಲಿಕೆ ಹೆರಿಗೆ ಆಸ್ಪತ್ರೆಗಳಲ್ಲಿ ಮೊದಲು ಹುಟ್ಟಿದ ಒಂದು ಹೆಣ್ಣುಮಗುವಿಗೆ ಭವಿಷ್ಯದ ವ್ಯಾಸಂಗಕ್ಕಾಗಿ 5 ಲಕ್ಷ ರೂ ಠೇವಣಿ ಇಡುವುದಾಗಿ ಕಳೆದ ಡಿಸೆಂಬರ್ ತಿಂಗಳ ಕೌನ್ಸಿಲ್ ಸಭೆಯಲ್ಲಿ ಹೇಳಿತ್ತು. ಅದರಂತೆ 2017 ರ ಡಿಸೆಂಬರ್ 31 ರ ಮಧ್ಯರಾತ್ರಿ 12 ಗಂಟೆ ನಂತರ ಹುಟ್ಟಿದ ಮೊದಲ ಒಂದು ಹೆಣ್ಣು ಮಗುವಿಗೆ 5 ಲಕ್ಷ ರೂ ಠೇವಣಿ ಇಡಲಾಗಿತ್ತು.

ಈ ಯೋಜನೆಯನ್ನು ಬಿಬಿಎಂಪಿಯ ಎಲ್ಲಾ 124 ಹೆರಿಗೆ ಆಸ್ಪತ್ರೆಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದರಿಂದ 124 ಹೆಣ್ಣುಮಕ್ಕಳಿಗೆ ಇದರ ಪ್ರಯೋಜನ ದೊರೆಯಲಿದೆ. ಪ್ರಸ್ತುತ ಕರ್ನಾಟಕ ಬಜೆಟ್ ನಲ್ಲಿ ಬೆಂಗಳೂರು ಅಭಿವೃದ್ಧಿಗೆ 2500 ಕೋಟಿ ಹಣವನ್ನು ಮೀಸಲಿಟ್ಟಿದ್ದರು.

ನಿರೀಕ್ಷಿತ ಯೋಜನೆಗಳು:
-ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ:ಇಗೆ ತಲಾ 20 ಸಾವಿರ, ಪಿಯುಸಿ ವಿದ್ಯಾರ್ಥಿಗಳಿಗೆ 30 ಸಾವಿರ ರೂ ಶಿಷ್ಯ ವೇತನ
-ಬೈಕ್ ಆಂಬ್ಯುಲೆನ್ಸ್ ಹಾಗೂ ಮೊಬೈಅಪ್ಲಿಕೇಷನ್ ಅಭಿವೃದ್ಧಿಗೆ 1 ಕೋಟಿ ರೂ ಮೀಸಲು
- ಬಿಬಿಎಂಪಿ ರೆಫರೆಡಲ್ ಆಸ್ಪತ್ರೆಗಳಲ್ಲಿನ ವಸತಿಗೃಹಗಳ ದುರಸ್ತಿಗೆ 3 ಕೋಟಿ ರೂ
-ಒಂಟಿ ಮನೆ ಯೋಜನೆ ಅನುದಾನ 4 ಲಕ್ಷ ರೂ ಗಳಿಗೆ ಹೆಚ್ಚಳ
-ಸಿದ್ದಯ್ಯ ರಸ್ತೆ ಮತ್ತು ದಾಸಪ್ಪ ಆಸ್ಪತ್ರೆಗಳಲ್ಲಿ ಐಸಿಯು ನಿರ್ಮಾಣ
-10 ಹೊಸ ಮಾರುಕಟ್ಟೆಗಳ ಸ್ಥಾಪನೆ, ಗರುಡಾ ಮಾಲ್ ಮಾದರಿ ಜಾನ್ಸನ್ ಮಾರುಕಟ್ಟೆ ಅಭಿವೃದ್ಧಿ
-18 ಮಾರುಕಟ್ಟೆಗಳ ಮರು ನಿರ್ಮಾಣಕ್ಕೆ 150 ಕೋಟಿ ರೂ.

ರಾಜ್ಯ ಬಜೆಟ್: ಬೆಂಗಳೂರಿಗೆ ದೊರೆತಿದ್ದೇನು? ಇಲಾಖೆವಾರು ಮಾಹಿತಿ ರಾಜ್ಯ ಬಜೆಟ್: ಬೆಂಗಳೂರಿಗೆ ದೊರೆತಿದ್ದೇನು? ಇಲಾಖೆವಾರು ಮಾಹಿತಿ

ರಾಜಧಾನಿಗೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಕೊಟ್ಟಿದ್ದೇನು? ಹೈಲೈಟ್ಸ್ರಾಜಧಾನಿಗೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಕೊಟ್ಟಿದ್ದೇನು? ಹೈಲೈಟ್ಸ್

English summary
Eying on state assembly election, many schemes under social sector and infrastructures development schemes to be expected in BBMP budget on Wednesday. BBMP taxation and finance committee chairman M Mahadev will table the Budget
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X