ಬಿಬಿಎಂಪಿ ಬಜೆಟ್ 2016-17, ಮುಖ್ಯಾಂಶಗಳು

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 28 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 2016-17ನೇ ಸಾಲಿನ ಬಜೆಟ್ ಮಂಡನೆಯಾಗಿದೆ. 8,994.41 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಲಾಗಿದ್ದು, ನಗರದ ಕಸದ ಸಮಸ್ಯೆ ನಿವಾರಣೆಗೆ 636 ಕೋಟಿ ರೂ. ಮೀಸಲಾಗಿಡಲಾಗಿದೆ. [ಸುದ್ದಿದನಿ : ಬಿಬಿಎಂಪಿ ಬಜೆಟ್]

ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತವಿದೆ. ಸೋಮವಾರ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಿವರಾಜು ಅವರು 2016-17ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿರುವುದರಿಂದ 2,445 ಕೋಟಿಗೂ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ. [ಬಿಬಿಎಂಪಿ ಬಜೆಟ್ 2015-16 : ಮುಖ್ಯಾಂಶಗಳು]

bbmp

ಬಜೆಟ್ ಮುಖ್ಯಾಂಶಗಳು

* ನಗರದ ಆಯ್ದ ಪ್ರದೇಶಗಳಲ್ಲಿ ಪಾಲಿಕೆ ವತಿಯಿಂದ ವೈಫೈ ಸೌಲಭ್ಯ
* ಪ್ರತಿ ವಾರ್ಡ್‌ನಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 26 ಕೋಟಿ
* ನಗರದ ಕಸ ವಿಲೇವಾರಿಗಾಗಿ 636 ಕೋಟಿ ರೂ. ಮೀಸಲು
* 2 ಲಕ್ಷ ಗಿಡಗಳನ್ನು ನೆಡಲು 6 ಕೋಟಿ ಅನುದಾನ
* 1,500 ಕಿ.ಮೀ.ರಸ್ತೆ ಅಭಿವೃದ್ಧಿ
* 300 ಕಿ.ಮೀ.ಸಿಮೆಂಟ್ ರಸ್ತೆ ನಿರ್ಮಾಣ
* ಆನ್‌ಲೈನ್ ಮೂಲಕ ಜಾಹೀರಾತುಗಳ ಟೆಂಡರ್ ಕರೆಯುವುದು
* ಮಿನರ್ವ ವೃತ್ತದಿಂದ ಟೌನ್‌ಹಾಲ್ ತನಕ ಉಕ್ಕಿನ ಸೇತುವೆ ನಿರ್ಮಾಣ
* ಫ್ಲೈ ಓವರ್‌ಗಳ ನಿರ್ಮಾಣಕ್ಕೆ 50 ಕೋಟಿ ರೂ. ಮೀಸಲು
* 10 ಕೋಟಿ ರೂ. ವೆಚ್ಚದಲ್ಲಿ ಜಾನ್ಸನ್ ಮಾರುಕಟ್ಟೆ ಅಭಿವೃದ್ಧಿ
* ಹಿಂದುಳಿದ ವರ್ಗ ಮತ್ತು ಪ.ಜಾ/ಪ.ಪಂ. ದವರಿಗಾಗಿ ನಮ್ಮ ಮನೆ ಯೋಜನೆ ಜಾರಿ
* ನಮ್ಮ ಮನೆ ಯೋಜನೆಯಡಿ ಪ್ರತಿ ವಾರ್ಡ್‌ನಲ್ಲಿ 30 ಮನೆ ನಿರ್ಮಾಣ
* ಸಂಧ್ಯಾ ಕುಟೀರ ಯೋಜನೆಗೆ 3 ಕೋಟಿ ಅನುದಾನ ಮೀಸಲು
* 1958 ಕೋಟಿ ವೆಚ್ಚದಲ್ಲಿ ನಗರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ
* ಹೊಸದಾಗಿ ಉದ್ಯಾನ ನಿರ್ಮಾಣಕ್ಕೆ 40 ಕೋಟಿ ಅನುದಾನ
* ಸರ್ಕಾರದಿಂದ 4,235 ಕೋಟಿ ರೂ.ಗಳ ನೆರವಿನ ನಿರೀಕ್ಷೆ
* ಮಹಿಳಾ ಸದಸ್ಯರಿರುವ ವಾರ್ಡ್‌ಗೆ 10 ಲಕ್ಷ ರೂ. ಅನುದಾನ
* ನಮ್ಮ ಶಾಲೆಯಲ್ಲಿ ಇಂಗ್ಲಿಶ್ ಕಲಿಯೋಣ ಯೋಜನೆ
* ಯೋಜನೆಯಡಿ ಬಿಬಿಎಂಪಿಯ ಶಾಲೆಗಳಲ್ಲಿ ಇಂಗ್ಲಿಶ್ ಕಲಿಕೆ ಆರಂಭ
* ಕೆಂಪಾಪುರದಲ್ಲಿನ ಕೆಂಪೇಗೌಡರ ಸಮಾಧಿ ಅಭಿವೃದ್ಧಿಗೆ 2 ಕೋಟಿ ಮೀಸಲು
* ನಗರದ ರಸ್ತೆ, ವೃತ್ತಗಳಿಗೆ ಕನ್ನಡದ ಹಿರಿಯ ಚೇತನಗಳ ಹೆಸರು ನಾಮಕರಣ


* ಪಾಲಿಕೆಯ ಖಾಲಿ ಜಾಗ ಆಟದ ಮೈದಾನವಾಗಿ ಪರಿವರ್ತನೆ
* 20 ಸಾವಿರ ಪೌರಕಾರ್ಮಿಕರಿಗೆ ಬಿಸಿಯೂಟದ ವ್ಯವಸ್ಥೆ
* ಸ್ವಚ್ಛಭಾರತ ಯೋಜನೆಯಡಿ ನಗರದಲ್ಲಿ 250 ಶೌಚಾಲಯ ನಿರ್ಮಾಣ
* ಡಾ.ಅಂಬೇಡ್ಕರ್ ಜಯಂತಿ ಆಚರಣೆಗೆ 1 ಕೋಟಿ ರೂ. ಮೀಸಲು
* ಹಳೆಯ ವಾರ್ಡ್‌ಗೆ 2 ಮತ್ತು ಹೊಸ ವಾರ್ಡ್‌ಗೆ 3 ಕೋಟಿ ಅನುದಾನ
* ಹೊಸ ಕೆರೆಗಳ ಅಭಿವೃದ್ಧಿಗೆ 10 ಕೋಟಿ ಅನುದಾನ
* ಕನ್ನಡ ಮನೆ ನಿರ್ಮಾಣಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ 1 ಕೋಟಿ ಅನುದಾನ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bruhat Bangalore Mahanagara Palike (BBMP) Tax and Finance standing committee chairperson M.Shivaraju tabled BBMP budget 2016-17 on Monday, March 28, 2016. Here are the highlights of the budget.
Please Wait while comments are loading...