ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಓಕಳಿಪುರಂ ಸಿಗ್ನಲ್‌ ಫ್ರೀ ಕಾರಿಡಾರ್‌ ಕಾಮಗಾರಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 18 : ಸುಮಾರು ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 8 ಪಥದ ಓಕಳಿಪುರಂ ಸಿಗ್ನಲ್‌ ಫ್ರೀ ಕಾರಿಡಾರ್‌ ಯೋಜನೆಯ ಕಾಮಗಾರಿ ಆರಂಭವಾಗಿದೆ. ಕಾಮಗಾರಿಗೆ ಸಹಾಯಕವಾಗುವಂತೆ ಓಕಳಿಪುರಂ ಸುತ್ತ-ಮುತ್ತಲಿನ ಕೆಲವು ರಸ್ತೆಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ರೈಲ್ವೆ ಇಲಾಖೆಯಿಂದ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಾದ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈಗ ಎಲ್ಲಾ ವಿವಾದ ಬಗೆಹರಿದು ಕಾಮಗಾರಿ ಆರಂಭವಾಗಿದೆ. [ಅಷ್ಟಪಥ ಕಾಮಗಾರಿಯ ಅಡ್ಡಿಗಳು ನಿವಾರಣೆ]

ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಗಾಗಿ ರೈಲ್ವೆ ಇಲಾಖೆಯಿಂದ ಸುಮಾರು ಎರಡು ಎಕರೆ ಭೂಮಿಯನ್ನು ಸ್ವಾಧೀನಪಡಿ­ಸಿ­ಕೊಳ್ಳಲಾಗಿದ್ದು, ಇದಕ್ಕೆ ಬದಲಾಗಿ ಬಿನ್ನಿಮಿಲ್‌ ಕಾರ್ಖಾನೆ ಜಾಗವನ್ನು ಇಲಾಖೆಗೆ ನೀಡಲಾಗಿದೆ. ಯೋಜನೆಗೆ ಸುಮಾರು 115.5 ಕೋಟಿ ರೂ.ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. [ನಮ್ಮ ಬೆಂಗಳೂರು ಹೀಗಾದರೆ ಚೆನ್ನ.. ವಿಡಿಯೋ ನೋಡಿ]

ಗುರುವಾರ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸಚಿವ ದಿನೇಶ್ ಗುಂಡೂರಾವ್ ಮತ್ತು ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್, ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಅವರು ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ವಿವರಗಳನ್ನು ಚಿತ್ರಗಳಲ್ಲಿ ನೋಡಿ..... [ಬೆಂಗಳೂರು ನಗರಕ್ಕೊಂದು 10 ಪಥದ ರಸ್ತೆ]

ನೆನೆಗುದಿಗೆ ಬಿದ್ದಿದ್ದ ಯೋಜನೆ

ನೆನೆಗುದಿಗೆ ಬಿದ್ದಿದ್ದ ಯೋಜನೆ

ನೆನೆಗುದಿಗೆ ಬಿದ್ದಿದ್ದ 8 ಪಥದ ಓಕಳಿಪುರಂ ಸಿಗ್ನಲ್‌ ಫ್ರೀ ಕಾರಿಡಾರ್‌ ಯೋಜನೆಯ ಕಾಮಗಾರಿಯನ್ನು ಆರಂಭಿಸಲಾಗಿದೆ. ಕಾಮಗಾರಿಗೆ ಸಹಾಯಕವಾಗುವಂತೆ ಓಕಳಿಪುರಂ ಸುತ್ತ-ಮುತ್ತಲಿನ ಕೆಲವು ರಸ್ತೆಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

ಸಂಚಾರ ಮಾರ್ಗ ಬದಲಾವಣೆ

ಸಂಚಾರ ಮಾರ್ಗ ಬದಲಾವಣೆ

ಸಿಗ್ನಲ್‌ ಫ್ರೀ ಕಾರಿಡಾರ್‌ ಯೋಜನೆಯ ಕಾಮಗಾರಿಗೆ ಅನುಕೂಲವಾಗುವಂತೆ ಡಾ.ರಾಜ್ ಕುಮಾರ್ ರಸ್ತೆಯ 17ನೇ ಅಡ್ಡರಸ್ತೆ ಜಂಕ್ಷನ್‌ನಿಂದ 10ನೇ ಅಡ್ಡರಸ್ತೆ ಜಂಕ್ಷನ್‌ವರೆಗೆ ಸಾಗುವ ವಾಹನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕಾಮಗಾರಿ ಮುಕ್ತಾಯವಾಗುವ ತನಕ ಈ ಸಂಚಾರ ನಿಷೇಧ ಜಾರಿಯಲ್ಲಿರುತ್ತದೆ.

ಸಚಿವರಿಂದ ಪರಿಶೀಲನೆ

ಸಚಿವರಿಂದ ಪರಿಶೀಲನೆ

ಗುರುವಾರ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸಚಿವ ದಿನೇಶ್ ಗುಂಡೂರಾವ್ ಮತ್ತು ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಅವರು ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ವಿಳಂಬವಾದ ಕಾಮಗಾರಿ

ವಿಳಂಬವಾದ ಕಾಮಗಾರಿ

ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ರೈಲ್ವೆ ಇಲಾಖೆಯಿಂದ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಾದ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಯೋಜನೆಗಾಗಿ ರೈಲ್ವೆ ಇಲಾಖೆಯಿಂದ ಸುಮಾರು ಎರಡು ಎಕರೆ ಭೂಮಿಯನ್ನು ಯೋಜನೆಗಾಗಿ ಸ್ವಾಧೀನಪಡಿ­ಸಿ­ಕೊಳ್ಳಲಾಗಿದ್ದು, ಇದಕ್ಕೆ ಬದಲಾಗಿ, ಬಿನ್ನಿಮಿಲ್‌ ಕಾರ್ಖಾನೆ ಜಾಗವನ್ನು ಇಲಾಖೆಗೆ ನೀಡಲಾಗಿದೆ.

115 ಕೋಟಿ ರೂ.ಗಳ ಯೋಜನೆ

115 ಕೋಟಿ ರೂ.ಗಳ ಯೋಜನೆ

8 ಪಥದ ಓಕಳಿಪುರಂ ಸಿಗ್ನಲ್‌ ಫ್ರೀ ಕಾರಿಡಾರ್‌ ಯೋಜನೆಯ ಕಾಮಗಾರಿಗೆ 115.5 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಭೂಮಿ ಸ್ವಾಧೀನಪಡಿಸಿಕೊಳ್ಳುವ ವೆಚ್ಚವೂ ಇದರಲ್ಲಿ ಸೇರಿದೆ. ಯೋಜನೆಗಾಗಿ 41 ಮರಗಳನ್ನು ಕತ್ತರಿಸಲಾಗಿದೆ.

English summary
Bruhat Bangalore Mahanagara Palike (BBMP) begins the Okalipuram 8 lane signal-free corridor project. BBMP will execute the project at the cost of Rs 115.5. Project includes underpass and road under-bridges between Okalipuram Junction and Fountain Circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X