ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋಟೆಲ್‌, ಮಾಲ್‌ಗಳಲ್ಲೂ ಫ್ಲೆಕ್ಸ್‌ ನಿಷೇಧ: ಬಿಬಿಎಂಪಿ ಖಡಕ್‌ ನಿರ್ಧಾರ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 7: ಬಿಬಿಎಂಪಿ ನಗರದಲ್ಲಿರುವ ಫ್ಲೆಕ್ಸ್‌, ಬ್ಯಾನರ್‌, ಪೋಸ್ಟರ್‌ಗಳ ವಿರುದ್ಧ ಸಮರ ಸಾರಿದ್ದು, ಕೇವಲ ರಸ್ತೆಗಳಲ್ಲಿ ಮಾತ್ರವಲ್ಲ ಇನ್ನುಮುಂದೆ ಸಮಾರಂಭಗಳಲ್ಲೂ ಕೂಡ ಬ್ಯಾನರ್‌ ಹಾಕುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ.

ಇತ್ತೀಚೆಗೆ ಅಕ್ರಮ ಫ್ಲೆಕ್ಸ್‌ ಹಾಗೂ ಹೋರ್ಡಿಂಗ್‌ಗಳ ವಿರುದ್ಧ ಹೈಕೋರ್ಟ್‌ ಸಮರ ಸಾರಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ನಗರದ ಎಲ್ಲೆಡೆ ಅಕ್ರಮ ಫ್ಲೆಕ್ಸ್‌ ಹಾಗೂ ಹೋರ್ಡಿಂಗ್‌ ತೆರವುಗೊಳಿಸಲು ಮುಂದಾಗಿತ್ತು.

ಮರ-ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಿದ್ರೆ ಬೀಳುತ್ತೆ ಲಕ್ಷ ದಂಡಮರ-ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಿದ್ರೆ ಬೀಳುತ್ತೆ ಲಕ್ಷ ದಂಡ

ಇದೀಗ ನಗರದಲ್ಲಿ ಎಲ್ಲೆಂದರಲ್ಲಿ ಅಕ್ರಮವಾಗಿ ಜಾಹೀರಾತು ಕಂಪನಿಗಳು ಹಾಗೂ ಖಾಸಗಿ ಸಂಸ್ಥೆ, ವಾಣಿಜ್ಯ ಹಾಗೂ ಧಾರ್ಮಿಕ ಭಿತ್ತಿಪತ್ರಗಳನ್ನು ಪಾಲಿಕೆಯ ನಿಯಮ ಪಾಲಿಸದೆ ಅಂಟಿಸುತ್ತಿರುವುದರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

BBMP bans flex and banner at hotels and malls too

ಕೇವಲ ರಸ್ತೆಗಳಲ್ಲಿ ಮಾತ್ರವಲ್ಲದೆ ಮಾಲ್‌ಗಳಲ್ಲಿಯೂ ಕೂಡ ಜಾಹೀರಾತು ಫಲಕಗಳನ್ನು ಹಾಕುವಂತಿಲ್ಲ, ಮದುವೆ ಸಮಾರಂಭ, ದೇವಸ್ಥಾನ, ಹೋಟೆಲ್‌ಗಳಲ್ಲೂ ಬ್ಯಾನರ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರಿಗೆ, ಸಂಘಟನೆಗಳಿಗೆ ಈ ಕುರಿತು ಸೂಚನೆ ನೀಡಿದೆ.

ಮರ ಹಾಗೂ ಗೋಡೆ ಮೇಲೆ ಭಿತ್ತಪತ್ರ ಅಂಟಿಸುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ಅಂತವರಿಗೆ 1 ಲಕ್ಷ ರೂ. ದಂಡ ವಿಧಿಸಲು ಚಿಂತನೆ ನಡೆಸಿದೆ. ಅಕ್ರಮವಾಗಿ ಎಲ್ಲೆಂದರಲ್ಲಿ ಇನ್ನುಮುಂದೆ ಭಿತ್ತಿಪತ್ರಗಳನ್ನು ಅಂಟಿಸುವಂತಿಲ್ಲ, ಭಿತ್ತಿಪತ್ರ ಅಂಟಿಸಿದರೆ ಬೀಳಲಿದೆ ಭಾರಿ ಪ್ರಮಾಣದ ದಂಡ, ಮರಕ್ಕೆ ಸೀರಿಯಲ್‌ ಸೆಟ್‌ ಹಾಕಿದರೂ ದಂಡಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಕ್ರಿಮಿನಲ್‌ ಮೊಕದ್ದಮೆ ಕೂಡ ದಾಖಲಿಸಲಾಗುತ್ತದೆ.

ಮರ ಹಾಗೂ ಗೋಡೆಗಳ ಮೇಲೆ ಅಕ್ರಮವಾಗಿ ಭಿತ್ತಿಪತ್ರಗಳನ್ನು ಅಂಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಬಿಬಿಎಂಪಿ ಕೊನೆಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಲು ಮುಂದಾಗಿದೆ.

English summary
BBMP has imposed ban on installation of flex, banners and hoardings at hotels, shopping complex and malls too. Earlier the authority was banned flex and banners in public premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X