ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಸಹಾಯಕ ಆಯುಕ್ತೆಗೆ ದಂಡ: ಕಾರಣವೇನು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಬಿಬಿಎಂಪಿ ಸಹಾಯಕ ಆಯುಕ್ತೆಗೆ ಕರ್ನಾಟಕ ಮಾಹಿತಿ ಆಯೋಗ 20 ಸಾವಿರ ರೂ ದಂಡ ವಿಧಿಸಿದೆ.

ಬೆಂಗಳೂರು ಪೊಲೀಸರಿಗೆ ಹೈಕೋರ್ಟ್‌ ಕಪಾಳಮೋಕ್ಷ: ಕಾರಣ ಇಲ್ಲಿದೆ ನೋಡಿ ಬೆಂಗಳೂರು ಪೊಲೀಸರಿಗೆ ಹೈಕೋರ್ಟ್‌ ಕಪಾಳಮೋಕ್ಷ: ಕಾರಣ ಇಲ್ಲಿದೆ ನೋಡಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ತಡೆಗೆ ಸಂಬಂಧಿಸಿದಂತೆ ಆಯುಕ್ತರು ಹೊರಡಿಸಿರುವ ಆದೇಶವನ್ನು ಆರ್‌ಟಿಐ ಕಾರ್ಯಕರ್ತರಿಗೆ ನೀಡದ ಕಾರಣ ದಂಡ ವಿಧಿಸಲಾಗಿದೆ.

ಹೋಟೆಲ್‌, ಮಾಲ್‌ಗಳಲ್ಲೂ ಫ್ಲೆಕ್ಸ್‌ ನಿಷೇಧ: ಬಿಬಿಎಂಪಿ ಖಡಕ್‌ ನಿರ್ಧಾರ ಹೋಟೆಲ್‌, ಮಾಲ್‌ಗಳಲ್ಲೂ ಫ್ಲೆಕ್ಸ್‌ ನಿಷೇಧ: ಬಿಬಿಎಂಪಿ ಖಡಕ್‌ ನಿರ್ಧಾರ

ಜ್ಞಾನಜ್ಯೋತಿ ನಗರ ನಿವಾಸಿ ವಿಶ್ವನಾಥ್ ಎಂಬುವವರು ಅಕ್ರಮ ಕಟ್ಟಡಗಳ ನಿರ್ಮಾಣ ನಿಯಂತ್ರಿಸಲು 2012ರ ಅ.4ರಂದು ಆಯುಕ್ತರು ಹೊರಡಿಸಿರುವ ಆದೇಶ ಅಥವಾ ಸುತ್ತೋಲೆಯ ದೃಢೀಕೃತ ಪ್ರತಿಯನ್ನು ನೀಡುವಂತೆ ಕೋರಿದ್ದರು.

BBMP assistant commmissioner fined for not furnishing information

ಆದರೆ ಬಿಬಿಎಂಪಿ ಸಹಾಯ ಆಯುಕ್ತರಾಗಿದ್ದ ಹರಿಶಿಲ್ಪ ಅವರು ಯಾವುದೇ ಮಾಹಿತಿ ನೀಡಿರಲಿಲ್ಲ, ವಿಶ್ವನಾಥ್ ಅವರು ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು ಈ ಹಿನ್ನೆಲೆಯಲ್ಲಿ ಹರಿಶಲ್ಪ ಅವರಿಗೆ 20 ಸಾವಿರ ರೂ ದಂಡವಿಧಿಸಲಾಗಿದೆ. ಆಯೋಗವು ಅರ್ಜಿದಾರರಿಗೆ ಮಾಹಿತಿ ನೀಡದಿರುವುದು ಮತ್ತು ಆರು ಬಾರಿ ವಿಚಾರಣೆಗೆ ಗೈರಾಗಿರುವುದರಿಂದ ದಂಡ ವಿಧಿಸಬೇಕು ಎಂದು ಕೋರಲಾಗಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 20 ಸಾವಿರ ರೂ ದಂಡ ವಿಧಿಸಲಾಗಿದೆ. ಹರಿಶಿಲ್ಪ ಅವರ ವೇತನದಲ್ಲಿ ಕಡಿತಗೊಳಿಸಿ ಆಯೋಗದ ಖಾತೆಗೆ ಜಮಾ ಮಾಡಬೇಕು ಎಂದು ತಿಳಿಸಲಾಗಿದೆ.

English summary
Karnataka information commission slapped 20,000 penalty to bbmp assistant commissioner Hrishilpa. She was denied some information to RTI applicatants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X