ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾ ಕ್ಯಾಂಟೀನ್ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಮಾರ್ಷಲ್!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 05 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದಿರಾ ಕ್ಯಾಂಟೀನ್‌ಗಳ ಉಸ್ತುವಾರಿ ನೋಡಿಕೊಳ್ಳಲು ನಿವೃತ್ತ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ನೇಮಕಗೊಳ್ಳಲಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳ ಆಹಾರದ ಗುಣಮಟ್ಟ ಪರೀಕ್ಷೆ, ನಿರ್ವಹಣೆ ಉಸ್ತುವಾರಿಯನ್ನು ಮಾರ್ಷಲ್‌ಗಳು ನೋಡಿಕೊಳ್ಳಲಿದ್ದಾರೆ. ಈಗಾಗಲೇ 12 ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಿರಿಯ ಕಮೀಷನ್ ಅಧಿಕಾರಿಗಳು (ಜೆಸಿಒ) ಎಂಬ ಹುದ್ದೆಗಳನ್ನು ಇದಕ್ಕಾಗಿ ರಚನೆ ಮಾಡಲಾಗಿದೆ.

47 ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಇನ್ನೂ ಜಾಗ ಸಿಕ್ಕಿಲ್ಲ!47 ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಇನ್ನೂ ಜಾಗ ಸಿಕ್ಕಿಲ್ಲ!

 BBMP appoints retired marshals to look after Indira canteen

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 12 ಅಡುಗೆ ಮನೆಗಳು ಈಗ ಸಿದ್ಧವಾಗಿವೆ. ಇವುಗಳಿಗೆ 12 ಮಾರ್ಷಲ್ ಗಳನ್ನು ನೇಮಿಸಿಕೊಳ್ಳಲಾಗಿದೆ. ಉಳಿದ ಅಡುಗೆ ಮನೆಗಳು ನಿರ್ಮಾಣವಾದ ಬಳಿಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನಗರದಲ್ಲಿ ಇನ್ನೂ 47 ಕ್ಯಾಂಟೀನ್‌ಗಳು ನಿರ್ಮಾಣವಾಗಬೇಕಿದೆ.

ಎಲ್ಲಾ ಜಿಲ್ಲೆಗಳಲ್ಲಿ ಇಂದಿರಾ ಸವಿರುಚಿ ಕೈ ತುತ್ತು ಕ್ಯಾಂಟೀನ್ಎಲ್ಲಾ ಜಿಲ್ಲೆಗಳಲ್ಲಿ ಇಂದಿರಾ ಸವಿರುಚಿ ಕೈ ತುತ್ತು ಕ್ಯಾಂಟೀನ್

ಬಿಬಿಎಂಪಿಯ ಜಂಟಿ ಆಯುಕ್ತರ (ಹಣಕಾಸು) ಅಡಿ ಇವರೆಲ್ಲರೂ ಕೆಲಸ ಮಾಡಲಿದ್ದಾರೆ. ಕ್ಯಾಂಟೀನ್ ಆಹಾರದ ಗುಣಮಟ್ಟ ಪರೀಕ್ಷೆ ಮಾಡುವುದು, ಕ್ಯಾಂಟೀನ್‌ ನಿರ್ಹವಣೆ ನೋಡಿಕೊಳ್ಳುವುದು, ವಿತರಣೆಯಾದ ಊಟ, ತಿಂಡಿಗಳ ಲೆಕ್ಕವನ್ನು ಇವರು ನೋಡಿಕೊಳ್ಳಲಿದ್ದಾರೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಇಡ್ಲಿ ಸವಿದ ಜಿ.ಪರಮೇಶ್ವರಇಂದಿರಾ ಕ್ಯಾಂಟೀನ್‌ನಲ್ಲಿ ಇಡ್ಲಿ ಸವಿದ ಜಿ.ಪರಮೇಶ್ವರ

ಮೊದಲು ಪಾಲಿಕೆಯ ಸಹಾಯಕ ಇಂಜಿನಿಯರ್‌ಗಳಿಗೆ ಕ್ಯಾಂಟೀನ್ ಉಸ್ತುವಾರಿ ನೋಡಿಕೊಳ್ಳಲು ಸೂಚನೆ ನೀಡಲಾಗಿತ್ತು. ಆದರೆ, ಅವರಿಗೆ ಇತರ ಕೆಲಸದ ಜೊತೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

English summary
Bruhat Bengaluru Mahanagara Palike (BBMP) has appointed retired marshals to look after the quality of food, service at Indira canteen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X