ಕಟ್ಟಡ ನಿರ್ಮಾಣ: ಬಿಬಿಬಿಎಂಪಿಯಿಂದ ಹೊಸ ಸೂಚನೆಗಳು

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 7: ಬೆಳ್ಳಂದೂರು ಗೇಟ್ ಹತ್ತಿರ ನಿರ್ಮಾಣ ಹಂತದ ಕಟ್ಟಡ ಕುಸಿದು, ಸಾವು-ನೋವು ಸಂಭವಿಸಿದ ನಂತರ ಎಚ್ಚೆತ್ತಂತೆ ಇರುವ ಬಿಬಿಎಂಪಿ, ಕಟ್ಟಡ ನಿರ್ಮಾಣಕ್ಕೆ ಮಾರ್ಗಸೂಚಿಗಳನ್ನು ಗುರುವಾರ ಬಿಡುಗಡೆ ಮಾಡಿದೆ. ಎಲ್ಲವನ್ನೂ ಕಡ್ಡಾಯವಾಗಿ ಪಾಲಿಸಲೇ ಬೇಕು ಎಂದು ಕೂಡ ತಿಳಿಸಿದೆ.

ಸದ್ಯಕ್ಕೆ ಇರುವ ನಿಯಮಗಳನ್ನು ಪಕ್ಕಕ್ಕಿಟ್ಟು ತಮ್ಮ ಮನಸೋ ಇಚ್ಛೆ, ಗುಣಮಟ್ಟದ ಜತೆಗೆ ರಾಜಿ ಮಾಡಿಕೊಂಡು ಕಟ್ಟಡ ಕಟ್ಟುತ್ತಿರುವುದರಿಂದಲೇ ಅನಾಹುತಗಳು ಸಂಭವಿಸುತ್ತಿವೆ. ಆ ಎಲ್ಲ ಗಮನದಲ್ಲಿ ಇಟ್ಟುಕೊಂಡೇ ಈಗ ಹೊಸದಾಗಿ ನಿಯಮಗಳನ್ನು ತಂದಿದ್ದು, ಕಡ್ಡಾಯವಾಗಿ ಪಾಲನೆ ಮಾಡಲೇಬೇಕು ಎಂದಿದೆ.[ಬೆಳ್ಳಂದೂರು ಕಟ್ಟಡ ಕುಸಿತ: ಓನರ್, ಕಂಟ್ರ್ಯಾಕ್ಟರ್ ಬಂಧನ]

BBMP announced new rules for building construction


ಇನ್ನು ಕಟ್ಟಡ ನಿರ್ಮಾಣಕ್ಕೆ ನುರಿತ ವಾಸ್ತುಶಿಲ್ಪಿಯ ಸೇವೆಯನ್ನೇ ಪಡೆಯಬೇಕು. ಇಂಡಿಯನ್ ಸ್ಟ್ಯಾಂಡರ್ಡ್ಸ್ ಪಾಲಿಸಬೇಕು. ಕಟ್ಟಡದ ನಿರ್ಮಾಣ ವೇಳೆ ನಿಯಮ ಉಲಲಂಘಿಸಿದರೆ, ಕಟ್ಟಡ ಕುಸಿದರೆ, ಪ್ರಾಣ ಹಾನಿಯಾದರೆ ಅದಕ್ಕೆ ಕಟ್ಟಡದ ಮಾಲೀಕರು ಹಾಗೂ ನಿರ್ಮಾಣದ ಹೊಣೆ ಹೊತ್ತವರೇ ಜವಾಬ್ದಾರರು ಎಂದು ಖಡಾಖಡಿಯಾಗಿ ಹೇಳಿದೆ.[ಕಟ್ಟಡ ಕುಸಿತ: ಅಧಿಕಾರಿಗಳನ್ನು ವಜಾ ಮಾಡಿದ ಮೇಯರ್]

ಕಟ್ಟಡ ನಿರ್ಮಾಣದ ವೇಳೆ ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆಗಳು
1.ನಿರ್ಮಾಣ ಸ್ಥಳದಲ್ಲಿ ಮಣ್ಣಿನ ಧಾರಣೆ ಸಾಮರ್ಥ್ಯವನ್ನು ಪರೀಕ್ಷಿಸಿ, ಅದರ ಆಧಾರದಲ್ಲೇ ತಳಪಾಯದ ವಿನ್ಯಾಸವನ್ನು ಮಾಡಬೇಕು
2.ಇನ್ನು ತಳಪಾಯಕ್ಕೆ ಭೂಮಿ ಅಗೆಯುವಾಗ ಭೂ ಕುಸಿತದಂಥದ್ದನ್ನು ತಡೆಯುವುದಕ್ಕೆ ಅಗತ್ಯವಾದ ಕ್ರಮವನ್ನು ತೆಗೆದುಕೊಳ್ಳಬೇಕು
3.ತಳಪಾಯ ಅಗೆಯುವಾಗ ಅಂತರ್ಜಲ ಅಥವಾ ಮಳೆ ನೀರು ನಿಲ್ಲದಂತೆ ತಕ್ಷಣ ಹೊರ ಹಾಕುವುದಕ್ಕೆ ಪಂಪಿಂಗ್ ವ್ಯವಸ್ಥೆ ಇರಬೇಕು.
4.ಪಾಯಕ್ಕೆ ಮಣ್ಣು ಅಗೆಯುವಾಗ ಅಂಚಿನಲ್ಲಿ ಭೂಮಿ ಕಸಿಯದಂತೆ, ಅಕ್ಕಪಕ್ಕದ ಕಟ್ಟಡಕ್ಕೆ ಹಾನಿಯಾಗದಂತೆ ಕನಿಷ್ಠ 2 ಮೀಟರ್ ಅಂತರ ಇರಬೇಕು
5.ಬಂಡೆ ಒಡೆಯುವ ಸಂದರ್ಭ ಬಂದರೆ ಸಂಬಂಧಪಟ್ಟವರಿಂದ ಅನುಮತಿ ಪಡೆದು, ಸುತ್ತಲಿನ ಕಟ್ಟಡಗಳಿಗೆ ಹಾನಿಯಾಗದಂಥ ವಿಧಾನ ಅನುಸರಿಸಬೇಕು
6.ಕಟ್ಟಡ ನಿರ್ಮಾಣಕ್ಕಾಗಿ ಬಳಸುವ ಸಾಮಗ್ರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ, ಗುಣಮಟ್ಟ ಖಚಿತಪಡಿಸಿಕೊಳ್ಳಬೇಕು
7.ಕಾಂಕ್ರೀಟ್, ಸ್ಟೀಲ್ ನ ಸಾಮರ್ಥ್ಯವನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕು
8.ಗುಣಮಟ್ಟದ ಖಾತ್ರಿಗೆ ಏನೇನು ಕ್ರಮ ಕೈಗೊಂಡರೋ ಎಲ್ಲದರ ದಾಖಲೆ ಇಟ್ಟಿರಬೇಕು. ಪರಿಶೀಲನೆ ಸಂದರ್ಭದಲ್ಲಿ ತೋರಿಸಬೇಕು
9.ಕಟ್ಟಡ ಕಾರ್ಮಿಕರ ಭದ್ರತೆ, ಸುರಕ್ಷತೆ, ಸ್ವಚ್ಛ ವಾತಾವರಣಕ್ಕೆ ಎಲ್ಲ ಸೌಕರ್ಯ ನೀಡಬೇಕು
10.ಕಟ್ಟಡ ಆರಂಭಕ್ಕೆ ಬೇಕಾದ ಪ್ರಮಾಣ ಪತ್ರ, ಪೊಸೆಷನ್ ಸರ್ಟಿಫಿಕೇಟ್ ಪಡೆಯಬೇಕು
11.ಎಲ್ಲ ಇಲಾಖೆಗಳಿಂದ ಪಡೆಯಬೇಕಾದ ಎನ್ ಒಸಿ(ನಿರಾಕ್ಷೇಪಣಾ ಪತ್ರ), ಸಮ್ಮತಿ-ತೀರುವಳಿ ಪತ್ರ ಪಡೆದು, ನಿರ್ದಿಷ್ಟ ನಿಬಂಧನೆಗಳನ್ನು ಪಾಲಿಸಬೇಕು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BBMP announced new rules for building construction. After building collapse in Bellandur, BBMP has announced new rules on Thursday.
Please Wait while comments are loading...