ಬಿಬಿಎಂಪಿ ಜಾಹೀರಾತು ಹಗರಣ ಬೆಳಕಿಗೆ ತಂದ ಮಥಾಯಿ ವರ್ಗಾವಣೆ?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 16 : ಬಿಬಿಎಂಪಿ ಜಾಹೀರಾತು ತೆರಿಗೆ ಸಂಗ್ರಹದಿಂದ 2 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ವರದಿ ನೀಡಿದ್ದ ಕೆ.ಮಥಾಯಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ವರ್ಗಾವಣೆ ತೀರ್ಮಾನ ಕೈಗೊಳ್ಳಲಾಗಿದೆ.

ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿನ್ ಸಭೆಯಲ್ಲಿ ವರ್ಗಾವಣೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಬಿಬಿಎಂಪಿ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಕೆ.ಮಥಾಯಿ ಅವರನ್ನು ಮಾರುಕಟ್ಟೆ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. [ಬೆಂಗಳೂರು ನಗರಕ್ಕೊಂದು 10 ಪಥದ ರಸ್ತೆ]

k mathai

ಟಿ.ಎಂ.ವಿಜಯಭಾಸ್ಕರ್ ಅವರು ಬಿಬಿಎಂಪಿಯ ಆಡಳಿತಾಧಿಕಾರಿಗಳಾಗಿದ್ದಾಗ ಕೆ.ಮಥಾಯಿ ಅವರು ಜಾಹೀರಾತು ಹಗರಣದ ಬಗ್ಗೆ ವರದಿ ನೀಡಿದ್ದರು. ಜಾಹೀರಾತು ಹಗರಣದ ತನಿಖೆಯನ್ನು ಸಿಐಡಿ ಅಥವ ಸಿಬಿಐಗೆ ವಹಿಸಬೇಕು ಎಂದು ಅವರ ಶಿಫಾರಸು ಮಾಡಿದ್ದರು. [ಇ-ಟಾಯ್ಲೆಟ್ ಹುಡುಕಲು ಬಂತು ಮೊಬೈಲ್ ಅಪ್ಲಿಕೇಶನ್]

ಮಥಾಯಿ ವರದಿಯಲ್ಲೇನಿತ್ತು? : ಜಾಹೀರಾತು ವಿಭಾಗದ ಅವ್ಯವಸ್ಥೆ, ಜಾಹೀರಾತು ತೆರಿಗೆ ಸಂಗ್ರಹದ ವೈಫಲ್ಯದ ಬಗ್ಗೆ ಕೆ.ಮಥಾಯಿ ಅವರು 5 ವರದಿಗಳನ್ನು ನೀಡಿದ್ದರು. ತೆರಿಗೆ ಸಂಗ್ರಹ ವೈಫಲ್ಯದಿಂದ 2000 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ಅವರು ವರದಿಯಲ್ಲಿ ಹೇಳಿದ್ದರು.

ಬಿಬಿಎಂಪಿಯ ಜಾಹೀರಾತು, ಕಂದಾಯ ವಿಭಾಗದ ಅಧಿಕಾರಿಗಳು, ನೌಕರರು, ಹಿರಿಯ ಅಧಿಕಾರಿಗಳ ಅಡಳಿತ ವೈಫಲ್ಯವೇ ಈ ನಷ್ಟಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಿದ್ದರು. ಈ ಜಾಹೀರಾತು ಹಗರಣದ ಬಗ್ಗೆ ಸಿಬಿಐ ಅಥವ ಸಿಐಡಿ ತನಿಖೆಯಾಗಬೇಕು ಎಂದು ಶಿಫಾರಸು ಮಾಡಿದ್ದರು.

ನಿರ್ಣಯ ಅಂತಿಮವಲ್ಲ : 'ಕೌನ್ಸಿಲ್ ಸಭೆಯ ನಿರ್ಣವೇ ಅಂತಿಮವಲ್ಲ. ಕೆ.ಮಥಾಯಿ ಅವರು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರೆ ಅವರನ್ನು ಸೇವೆಯಲ್ಲಿ ಮುಂದುವರೆಸಲಾಗುತ್ತದೆ' ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bruhat Bengaluru Mahanagara Palike (BBMP) advertisement department assistant commissioner K.Mathai has been transferred to Market department.
Please Wait while comments are loading...