1000 ಕೋಟಿ ಮೌಲ್ಯದ 189 ಎಕರೆ ಭೂಮಿ ಒತ್ತುವರಿ ತೆರವು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 18; ನಕಲಿ ದಾಖಲೆ ಸೃಷ್ಟಿ, ಜಮೀನು ಒತ್ತುವರಿ ಸಂಬಂಧ ಒಂದು ಸಾವಿರ ಕೋಟಿ ಮೌಲ್ಯದ 189 ಎಕರೆ ಜಮೀನನ್ನು ಜಿಲ್ಲಾಡಳಿತ ಬಿಗಿ ಭ್ರದತೆಯಲ್ಲಿ ತೆರವು ಮಾಡಿದೆ.

ಕೆಂಗೇರಿ ಹೋಬಳಿಯ ಮಾಳಿಗೊಂಡನಹಳ್ಳಿ ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ಜಿಲ್ಲಾದಿಕಾರಿ ವಿ.ಶಂಕರ್ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿದೆ.

ಟಾರ್ ಪ್ಲಾಂಟೇಷನ್ ಇಂಡಸ್ಟ್ರೀ ಸರ್ಕಾರದಿಮದ 55 ಎಕರೆ ಜಮೀನು ಮಂಜೂರಾಗಿದೆ ಎಂದು ಮಾಳಿಗೊಂಡನಹಳ್ಳಿಯಲ್ಲಿ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಉದ್ಯಮ ನಡೆಸಲಾಗುತ್ತಿತ್ತು. ಸರಿಯಾದ ದಾಖಲಾತಿ ದೊರೆಯದೇ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ.[ರಾಜಕಾಲುವೆ ಒತ್ತುವರಿ ವಿವರ ಈಗ ವೆಬ್‌ಸೈಟ್‌ನಲ್ಲಿ ಲಭ್ಯ]

BBMP acupay worth of Rs 1000 crore value land

ಇನ್ನು ಟಾರ್ ಪ್ಲಾಂಟೇಷನ್ ಗೆ ಸೇರಿದ ಮಿಷಿನ್ ಗಳು ಮತ್ತು ಜೆಸಿಬಿ ಇತ್ಯಾದಿ ವಾಹನ ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಾದ್ಯಂತ ಈ ಕೆಲಸಕ್ಕೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಪೊಲೀಸರು ಸಹಕರಿಸಿದ್ದು 900 ಕೋಟಿಗೂ ಅಧಿಕ ಮೌಲ್ಯದ 189 ಎಕರೆ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.[ನಟ ದರ್ಶನ್ ಮನೆ ಇನ್ನು 'ಸರಕಾರಿ ಸ್ವತ್ತು']

ಬೆಂಗಳೂರಿನಲ್ಲಿ ಈ ಒತ್ತುವರಿ ವಿಷಯವಾಗಿ ಇನ್ನು ಕಾರ್ಯಚರಣೆ ಮುಂದುವರೆಯಲಿದೆ. ಇದಕ್ಕೆ ಅಧಿಕಾರಿಗಳಿಂದ ಸಮೀಕ್ಷೆ ಪಟ್ಟಿ ತಯಾರಿಸಲಾಗಿದೆ.

ಜಮೀನು ಒತ್ತುವರಿ ಮಾಡಲು ಸಹಕರಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BBMP acupay worth of Rs 1000 crore value of 189 ekres near kengeri, maligondanahalli. The DC and survay officer raid the encroachment people in bengaluru.
Please Wait while comments are loading...