ಸೋಮವಾರ ಬೆಂಗಳೂರು ಕಡಲೆಕಾಯಿ ಪರಿಷೆ ಉದ್ಘಾಟನೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 23: ಬೆಂಗಳೂರು ದೊಡ್ಡ ಬಸವಣ್ಣ ದೇವಸ್ಥಾನದ ಐತಿಹಾಸಿಕ ಕಡಲೆಕಾಯಿ ಪರಿಷೆ ಸೋಮವಾರ (ನ.28) ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಯಾಗಲಿದೆ.

ಎಂದಿನಂತೆಯೇ ಈ ಬಾರಿಯೂ ಸಹ ಕಾರ್ತಿಕ ಮಾಸದ ಕೊನೆಯ ವಾರದಲ್ಲಿ ಜಾತ್ರೆ ನಡೆಯಲಿದೆ. ಭಾನುವಾರ ಬೆಳಿಗ್ಗೆಯಿಂದಲೇ ಪರಿಷೆ ಆರಂಭಗೊಂಡರೂ ಮುಖ್ಯ ಉತ್ಸವ ಸೋಮವಾರ ನಡೆಯಲಿದೆ.

Basavangudi decks up for Kadlekai Parishe

ಜಾತ್ರೆ ಪ್ರಯುಕ್ತ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಾನುವಾರ ಸಂಜೆಯಿಂದಲೇ ಕಾರ್ಯಕ್ರಮಗಳು ನಡೆಯಲಿದ್ದು, ಭೀಮಣ್ಣ ಮತ್ತು ಸಂಗಡಿಗರ ವತಿಯಿಂದ ಕೆಂಪೇಗೌಡ ಆಟದ ಮೈದಾನದಲ್ಲಿ 'ಸುಡುಗಾಡು ಸಿದ್ಧರ ಜಾನಪದ ಕಲೆ'ಯನ್ನು ಭಾನುವಾರ ಸಂಜೆ ಆಯೋಜಿಸಲಾಗಿದೆ.

ಇನ್ನು ಸೋಮವಾರ ಸಂಜೆ ಕಹಳೆಬಂಡೆ ಉದ್ಯಾನವನದಲ್ಲಿ ಸಂಜೆ 6 ರಿಂದ 7:30ರ ವರೆಗೆ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ನರಸಿಂಹಸ್ವಾಮಿ ಉದ್ಯಾನವನದಲ್ಲೂ ಸಹ ಸೋಮವಾರ ಸಂಜೆ 6 ರಿಂದ 7:30 ರವರೆಗೆ ಸ್ವರನಾದ ತಂಡದಿಂದ 'ತಾಳ ವಾದ್ಯ' ಕಾರ್ಯಕ್ರಮ ಏರ್ಪಡಿಸಲಾಗಿದೆ.

ಮಂಗಳವಾರೂ ಸಹ ನಾಟಕ, ಯಕ್ಷಗಾನ ಪ್ರಸಂಗ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕೋಲಾರ, ಚಿಕ್ಕಬಳ್ಳಾಪುರ, ಕೋಲಾರ, ಶ್ರೀನಿವಾಸಪುರ, ಮಾಗಡಿ, ಮಂಡ್ಯ, ಮೈಸೂರು, ಚಿಂತಾಮಣಿ, ತುಮಕೂರು, ಕುಣಿಗಲ್ ಸೇರಿದಂತೆ ನೆರೆಯ ಆಂಧ್ರಪ್ರದೇಶದಿಂದಲೂ ವರ್ತಕರು ಬಂದು ಕಡಲೆಕಾಯಿ ಮಾರುವುದುಂಟು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Get set to soak in the city’s heritage as the historic groundnut fair, Kadlekai Parishe, will be celebrated on Monday (Nov.28).
Please Wait while comments are loading...