ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1 ಗಂಟೆವರೆಗೆ ಮಾತ್ರ ಬಾರ್, ಹೋಟೆಲ್ ತೆರೆದಿಡಲು ಒಪ್ಪಿಗೆ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 29: ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮೇಲೆ ಕವಿದಿದ್ದ ಕಾರ್ಮೋಡ ಕರಗಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ವಿವಿಧ ಹೋಟೆಲ್‌ಗಳು ಡಿ. 31ರಂದು ರಾತ್ರಿ ಒಂದು ಗಂಟೆಯವರೆಗೆ ಮಾತ್ರ ತೆರೆದಿಡಲು ನಗರ ಪೊಲೀಸ್ ಆಯುಕ್ತರು ಒಪ್ಪಿಗೆ ಸೂಚಿಸಿದ್ದಾರೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ. 31ರಂದು ರಾತ್ರಿ 12 ಗಂಟೆ ನಂತರವೂ ಬಾರ್ ಮತ್ತು ಹೋಟೆಲ್ ತೆರೆಡಿದಲು ಅನುಮತಿ ನೀಡಬೇಕೆಂದು ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ, ರಾತ್ರಿ 2 ಗಂಟೆವರೆಗೆ ತೆರೆದಿಡಲು ಒಪ್ಪಿಗೆ ಸೂಚಿಸಿದ್ದರು. ಆದರೆ, ಈ ಕುರಿತು ಸೋಮವಾರ ಹೊಸ ಆದೇಶ ಹೊರಡಿಸಿದ್ದು, ರಾತ್ರಿ 1 ಗಂಟೆಯವರೆಗೆ ಮಾತ್ರ ತೆರೆದಿಡಬಹುದು ಎಂದು ತಿಳಿಸಿದ್ದಾರೆ.

wine

ಏನೇನು ಷರತ್ತುಗಳು...? :

  • ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಡಿ. 31ರಂದು ರಾತ್ರಿ ಒಂದು ಗಂಟೆಯವರೆಗೆ ತೆರೆದಿಡಬಹುದು. ಆದರೆ, ಇದಕ್ಕೆ ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯಬೇಕು.
  • ಮದ್ಯ ಸರಬರಾಜು ಮಾಡದ ಹೋಟೆಲ್‌ಗಳೂ ಹೆಚ್ಚುವರಿ ಅವಧಿಗೆ ತೆರೆದಿಡಬಹುದು. ಇವು ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲ.
  • 1 ಗಂಟೆಯವರೆಗೆ ತೆರೆದಿರುವ ಹೋಟೆಲ್ ಹಾಗೂ ಬಾರ್‌ಗಳು ಭದ್ರತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇಬೇಕು. ಅಕ್ಕಪಕ್ಕದಲ್ಲಿ ವಾಸಿಸುತ್ತಿರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
English summary
Bengaluru Police Commissioner issued general No Objection for all the Bars and Restaurants situated in the limits of the Bengaluru City to keep them open up to 1 am on 1st January 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X