ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.31ರಂದು 2 ಗಂಟೆವರೆಗೆ ಬಾರ್, ಹೋಟೆಲ್ ಓಪನ್

|
Google Oneindia Kannada News

ಬೆಂಗಳೂರು, ಡಿ. 28 : ಹೊಸ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಡಿ.31ರಂದು ಬೆಂಗಳೂರು ನಗರದಲ್ಲಿ ಬಾರ್‌ ಮತ್ತು ಹೋಟೆಲ್‌ಗಳು ರಾತ್ರಿ 2 ಗಂಟೆವರೆಗೆ ತೆರೆದಿರುತ್ತವೆ. ಬಾರ್, ಹೋಟೆಲ್ ಅವಧಿಯನ್ನು ವಿಸ್ತರಣೆ ಮಾಡಿ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಇದೇ ಮೊದಲ ಬಾರಿಗೆ ಬಾರ್ ಮತ್ತು ಹೋಟೆಲ್‌ಗಳ ಅವಧಿಯನ್ನು ಡಿ.31ರಂದು ರಾತ್ರಿ ಎರಡು ಗಂಟೆಯ ತನಕ ವಿಸ್ತರಣೆ ಮಾಡಲಾಗಿದೆ. ಆದ್ದರಿಂದ ಎರಡು ಗಂಟೆಯ ತನಕ ಮದ್ಯ ಮತ್ತು ಊಟ ದೊರೆಯಲಿದೆ. ನಗರದಲ್ಲಿ ಶುಕ್ರವಾರ, ಶನಿವಾರ ಹೊರತು ಪಡಿಸಿ ಬಾರ್, ಹೋಟೆಲ್‌ಗಳು ರಾತ್ರಿ 11 ಗಂಟೆಯ ತನಕ ತೆರೆದಿರುತ್ತವೆ. [ಹೊಸವರ್ಷ : ಎಂಜಿ ರಸ್ತೆಯಲ್ಲಿ ವಿಶೇಷ ಪೊಲೀಸ್ ಗಸ್ತು]

Bar

ನಗರ ಪೊಲೀಸ್ ಆಯುಕ್ತರ ಪರವಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಈ ಆದೇಶ ಹೊರಡಿಸಿದ್ದಾರೆ. ಆದೇಶದ ಅನ್ವಯ ಮದ್ಯ ಮಾರಾಟ ಮಾಡಲು ಬಾರ್‌ ಮಾಲೀಕರು ಅಬಕಾರಿ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ಅನುಮತಿ ಪಡೆಯುವ ಅಗತ್ಯವಿಲ್ಲ. [ಬೆಂಗಳೂರಿನಲ್ಲಿ ಬಾರ್ 1 ಗಂಟೆವರಗೆ ಓಪನ್]

ಹೊಸ ವರ್ಷಾಚರಣೆ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಬಾರ್ ಮಾಲೀಕರಿಗೆ ಪೊಲೀಸರು ನಿರ್ದೇಶನ ನೀಡಿದ್ದಾರೆ. ರಾತ್ರಿ 2 ಗಂಟೆ ನಂತರವೂ ವಹಿವಾಟು ನಡೆಸಿದರೆ ಬಾರ್‌ಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. [ಕರ್ನಾಟಕ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡಿ]

ಹೊಸ ವರ್ಷವನ್ನು ಆಚರಿಸಲು ನಗರದ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್‌ ರಸ್ತೆಯಲ್ಲಿ ಹೆಚ್ಚಿನ ಜನರು ಸೇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಆ ರಸ್ತೆಗಳಲ್ಲಿ ಹೆಚ್ಚಿನ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆಚರಣೆ ವೇಳೆ ಅಸಭ್ಯವಾಗಿ ವರ್ತಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ.

ರಾತ್ರಿ ಪೂರ್ತಿ ವಾಹನ ತಪಾಸಣೆ : ರಾತ್ರಿ 2 ಗಂಟೆಯ ತನಕ ಬಾರ್, ಹೋಟೆಲ್‌ ತೆರೆದಿರಲು ಅನುಮತಿ ನೀಡಿರುವುದರಿಂದ ಸಂಚಾರಿ ಪೊಲೀಸರು ರಾತ್ರಿ ಪೂರ್ತಿ ವಾಹನ ತಪಾಸಣೆ ನಡೆಸಲಿದ್ದಾರೆ. ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

English summary
Bengaluru City police have granted permission to open hotels and restaurants till 2 am on December 31. The managements of bars will be required to obtain permission from the State Excise Department to keep them open during the additional hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X