ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನ್ನೇರುಘಟ್ಟ ಪಾರ್ಕ್ ಪ್ರವೇಶ ಇನ್ನು ದುಬಾರಿ

|
Google Oneindia Kannada News

ಬೆಂಗಳೂರು, ಫೆ.28 : ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೋಗುವ ಪ್ರವಾಸಿಗರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಹೌದು,ಉದ್ಯಾನವನದ ಪ್ರವೇಶ ದರವನ್ನು ಹೆಚ್ಚಳ ಮಾಡಲಾಗಿದ್ದು, ಮಾರ್ಚ್ 1ರಿಂದಲೇ ನೂತನ ದರ ಅನ್ವಯವಾಗಲಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರವೇಶ ದರವನ್ನು ಹೆಚ್ಚಳ ಮಾಡಿರುವ ಕುರಿತು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ರಂಗೇಗೌಡ ಮಾಹಿತಿ ನೀಡಿದ್ದು, ಮಾರ್ಚ್ 1ರಿಂದ ನೂತನ ದರ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

Bannerghatta National Park

ರಾಜ್ಯ ಮೃಗಾಲಯ ಪ್ರಾಧಿಕಾರದ 125ನೇ ಗೌವರ್ನಿಂಗ್ ಕೌನ್ಸಿಲ್ ನಲ್ಲಿ ಹೊಸ ದರ ನಿಗದಿ ಪಡಿಸಿ ಆದೇಶ ನೀಡಲಾಗಿದೆ. ಮಾರ್ಚ್ 1ರಿಂದ ನಾವು ನೂತನ ದರ ಅನ್ವಯ ಮಾಡಲಿದ್ದೇವೆ ಎಂದು ರಂಗೇಗೌಡ ತಿಳಿಸಿದ್ದಾರೆ. ನೂತನ ದರವು ಮೃಗಾಲಯ, ಚಿಟ್ಟೆ ಉದ್ಯಾನ ಮತ್ತು ಗ್ರ್ಯಾಂಡ್ ಸಫಾರಿ ಮೂರಕ್ಕೂ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. [ಉದ್ಯಾನವನದ ವೆಬ್ ಸೈಟ್ ನೋಡಿ]

ಹಿಂದಿನ ದರಗಳು : ಮೃಗಾಲಯದ ವೀಕ್ಷಣೆಗೆ ವಯಸ್ಕರಿಗೆ 60, ಮಕ್ಕಳಿಗೆ 30 ಹಿರಿಯ ನಾಗರೀಕರಿಗೆ 40 ರೂ. ನಿಗದಿಪಡಿಸಲಾಗಿತ್ತು. ಚಿಟ್ಟೆ ಉದ್ಯಾನ ವೀಕ್ಷಣೆಗೆ ವಯಸ್ಕರಿಗೆ 25, ಮಕ್ಕಳಿಗೆ 15 ರೂ. ದರವಿತ್ತು. ಗ್ರ್ಯಾಂಡ್ ಸಫಾರಿಗೆ ವಯಸ್ಕರಿಗೆ 150, ಮಕ್ಕಳಿಗೆ 70 ಮತ್ತು ಹಿರಿಯ ನಾಗರೀಕರಿಗೆ 100 ರೂ. ದರವಿತ್ತು.

ಹೊಸ ದರಗಳು : ಮೃಗಾಲಯ ವೀಕ್ಷಣೆ : ವಯಸ್ಕರಿಗೆ 80, ಮಕ್ಕಳಿಗೆ 40, ಹಿರಿಯ ನಾಗರೀಕರಿಗೆ 50 ರೂ., ಚಿಟ್ಟೆ ಉದ್ಯಾನ : ವಯಸ್ಕರು 30, ಮಕ್ಕಳು 20, ಹಿರಿಯರು 20, ಗ್ರ್ಯಾಂಡ್ ಸಫಾರಿ ವಯಸ್ಕರು 260, ಮಕ್ಕಳು 130, ಹಿರಿಯರು 150, ವಿದೇಶಿರು 400, ವಿದೇಶಿ ಮಕ್ಕಳು 300 ರೂ.

English summary
Bannerghatta National Park entry fee hiked new fee will be applicable from March 1, 2014 said, National Park executive director Rangegowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X