ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ವಿದ್ಯಾವಾಚಸ್ಪತಿ' ಬನ್ನಂಜೆ ಗೋವಿಂದಾಚಾರ್ಯ 80ರ ಸಂಭ್ರಮ

By Prasad
|
Google Oneindia Kannada News

ಬೆಂಗಳೂರು, ಡಿಸೆಂಬರ್ 21 : ಮಧ್ವಮತ ಹರಿಕಾರ, ಪ್ರಕಾಂಡ ಪಂಡಿತ, ಕನ್ನಡ ಮತ್ತು ಸಂಸ್ಕೃತ ಭಾಷಾ ವಿದ್ವಾಂಸ, ಅನುವಾದಕ, ಲೇಖಕ 'ವಿದ್ಯಾವಾಚಸ್ಪತಿ' ಬನ್ನಂಜೆ ಗೋವಿಂದಾಚಾರ್ಯ ಅವರು 80ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ 'ಬನ್ನಂಜೆ 80ರ ಸಂಭ್ರಮ' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬನ್ನೆಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಕುಮಾರಸ್ವಾಮಿ ಲೇಔಟ್ ನಲ್ಲಿರುವ ದಯಾನಂದ ಸಾಗರ ಕಾಲೇಜಿನಲ್ಲಿ ಆಯೋಜಿಸುತ್ತಿರುವ ಈ ಕಾರ್ಯಕ್ರಮ ಡಿಸೆಂಬರ್ 23ರಿಂದ 27ರವರೆಗೆ ಐದು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳ ಮುಖಾಂತರ ಬನ್ನಂಜೆ ಅವರ ಅಭಿಮಾನಿಗಳನ್ನು ಸಂಗೀತ-ಸಾಹಿತ್ಯ ಸಾಗರದಲ್ಲಿ ತೇಲಾಡಿಸಲಿದೆ.

ಆರಂಭದ ದಿನ 23ರಂದು ಹತ್ತು ಮಠಗಳ ಯತಿಗಳು ಬನ್ನಂಜೆಯವರನ್ನು ನುಡಿ ಮಂತ್ರಾಕ್ಷತೆಯಲ್ಲಿ ಆಶೀರ್ವದಿಸಲಿದ್ದರೆ, ಮುಂದಿನ ನಾಲ್ಕು ದಿನಗಳಲ್ಲಿ ಚಲನಚಿತ್ರ ಪ್ರದರ್ಶನ, ನೃತ್ಯ ವೈಭವ, ಹಲವಾರು ಕೃತಿಗಳ ಬಿಡುಗಡೆ, ಪ್ರಾಣೇಶರಿಂದ ನಗೆಸೇವೆ, ಚಿಂತಕರು ಪಂಡಿತರು ಪತ್ರಕರ್ತರು ಪ್ರಾಚಾರ್ಯರು ಭಾಗವಹಿಸುವ ಸರ್ವಧರ್ಮ ಸಮ್ಮೇಳನ ಸಂಭ್ರಮಕ್ಕೆ ಕಳೆಕಟ್ಟಲಿದೆ. [ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ: ಕಿರು ಪರಿಚಯ]

Bannanje Govindacharya 80th birthday Celebration in Bengaluru

ಜೊತೆಗೆ ಬನ್ನಂಜೆ ಅವರು ಬರೆದ ಸಾಹಿತ್ಯದ ವಿಮರ್ಶೆ, ಅವರು ಅನುವಾದಿಸಿದ ನಾಟಕ, ಕವನಗಳ ವಾಚನ, ನಾಟಕ ಪ್ರದರ್ಶನಗಳಲ್ಲಿ ಎನ್ಎಸ್ ಲಕ್ಷ್ಮೀನಾರಾಯಣ ಭಟ್, ಎಚ್ಎಸ್ ವೆಂಕಟೇಶ ಮೂರ್ತಿ, ಜಯಂತ ಕಾಯ್ಕಿಣಿ, ಚಂಪಾ, ಆರ್ ಗಣೇಶ್, ರಂಗಕರ್ಮಿ ಪ್ರಸನ್ನ, ದುಂಡಿರಾಜ್, ಸಮತೀಂದ್ರ ನಾಡಿಗ ಮುಂತಾದವರು ಭಾಗವಹಿಸುತ್ತಿದ್ದಾರೆ.

ಇನ್ನು, ಸಿನೆಮಾ ಮತ್ತು ಪತ್ರಿಕೋದ್ಯಮದಲ್ಲೂ ತಮ್ಮ ಕೈಚಳಕ ತೋರಿಸಿದ್ದ ಬನ್ನಂಜೆ ಗೋವಿಂದಾಚಾರ್ಯ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ವೇದಾಂತ ಸಿನೆಮಾ ಪ್ರಸ್ತುತತೆ ಕುರಿತು ಚರ್ಚೆ, ಪತ್ರಿಕೋದ್ಯಮ ಸಂವಾದ ಬನ್ನಂಜೆಯವರ ಸಮ್ಮುಖದಲ್ಲಿ ಜರುಗಲಿದೆ. ಬನ್ನಂಜೆ ಬದುಕು ಮತ್ತು ಸಂಸ್ಕೃತ ಸಾಹಿತ್ಯ ಕುರಿತು ಗೋಷ್ಠಿಗಳು ನಡೆಯಲಿವೆ.

ತಮಗನಿಸಿದ್ದನ್ನು ಖಂಡತುಂಡವಾಗುವಂತೆ ಹೇಳುವ ಬನ್ನಂಜೆ ಗೋವಿಂದಾಚಾರ್ಯ ಅವರ ಮೇಲೆ ಅಭಿಮಾನದ ವರ್ಷಧಾರೆ ಸುರಿಸುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿ ಸಹಭೋಜನ ಇರಲಿದೆ.

ಮೊದಲ ದಿನ ಆಶೀರ್ವಚನ ನೀಡಲಿರುವ ಶ್ರೀಗಳು

ಪರಮ ಪೂಜ್ಯ ಶ್ರೀ ವಿಶ್ವೇಶ್ವತೀರ್ಥ ಶ್ರೀಪಾದರು, ಪೇಜಾವರ ಮಠ, ಉಡುಪಿ
ಪರಮ ಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠ, ಉಡುಪಿ
ಪರಮ ಪೂಜ್ಯ ಶ್ರೀ ಕೇಶವನಿಧಿತೀರ್ಥ ಶ್ರೀಪಾದರು, ಶ್ರೀಪಾದರಾಜ ಮಠ, ಮುಳಬಾಗಿಲು
ಪರಮ ಪೂಜ್ಯ ಶ್ರೀ ರಘುಭೂಷಣತೀರ್ಥ ಶ್ರೀಪಾದರು, ಬಾಳಗಾರು ಮಠ, ತೀರ್ಥಹಳ್ಳಿ
ಪರಮ ಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪೇಜಾವರ ಮಠ, ಉಡುಪಿ
ಪರಮ ಪೂಜ್ಯ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಶಿರೂರು ಮಠ, ಉಡುಪಿ
ಪರಮ ಪೂಜ್ಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಅದಮಾರು ಮಠ, ಉಡುಪಿ
ಪರಮ ಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು, ರಾಘವೇಂದ್ರ ಮಠ, ಮಂತ್ರಾಲಯ
ಪರಮ ಪೂಜ್ಯ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಭಂಡಾರಕೆರೆ ಮಠ, ಬಾರಕೂರು
ಪರಮ ಪೂಜ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠ, ಸುಬ್ರಹ್ಮಣ್ಯ

English summary
Scholar, philosopher, pravachanakara, writer, poet, screen play writer, greatest experts of Madhwa philosophy Padma Shri Bannanje Govindacharya's 80th birthday celebration has been organized in Bengaluru for five days from December 23 to 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X