ಮೊದಲು ಚಲನ್ ತುಂಬಲು ಪ್ಯಾನ್ ಕಾರ್ಡ್ ಇದೆಯಾ ನೋಡ್ಕೊಳ್ಳಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ ೧೦: ಬೆಂಗಳೂರಿನಲ್ಲಿ 500-1000 ನೋಟುಗಳ ಬದಲಾವಣೆಗೆ ಜನರು ಬ್ಯಾಂಕುಗಳ ಮುಂದೆ ಮುಗಿಬಿದ್ದಿದ್ದಾರೆ.

ಬ್ಯಾಂಕುಗಳಲ್ಲಿ ಹಣ ಹಾಕಲು ಮತ್ತು ತೆಗೆದುಕೊಳ್ಳಲು ತಮ್ಮದೇ ಆದ ರೀತಿಯಲ್ಲಿ ವಿವಿಧ ಮಾದರಿಯ ಚಲನ್ ವ್ಯವಸ್ಥೆಯನ್ನು ಮಾಡಲಾಗಿದೆ.

bank have procedure to exchange money

ಬ್ಯಾಂಕ್ ಗಳಲ್ಲಿ ಹಣವನ್ನು ಕಟ್ಟಲು ಅಡ್ಡಿಯಿಲ್ಲ ಅದರೆ ತೆಗೆದುಕೊಳ್ಳಲು ಅಡ್ಡಿಯಾಗುತ್ತಿದೆ. ಎಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇರವವರಿಗೆ ಯಾವ ತೊಂದರೆಯೂ ಇಲ್ಲ.

ಹೊಸ ಚಲನ್ ಗಳನ್ನು ಫಿಲಪ್ ಮಾಡಿ, ಆಧಾರ್ ಮತ್ತು ಪ್ಯಾನ್ ಗಳ ಜೆರಾಕ್ಸ್ ನೀಡಿದರೆ ಮಾತ್ರ ದುಡ್ಡು ಕಟ್ಟಲು ಸಾಧ್ಯ.[FAQ: 500, 1000 ನೋಟು ಬದಲಾವಣೆ ಬ್ಯಾಂಕ್ ನಿಯಮಗಳು]

bank have procedure to exchange money

ಕೆಲವರು ನನ್ನ ಬಳಿ ಪ್ಯಾನ್ ಕಾರ್ಡ್ ಇಲ್ಲ, ಐಡಿ ಇಲ್ಲ ಎಂದು ಗೊಣಗುತ್ತಾ ಹೋಗುತ್ತಿದ್ದಾರೆ. ಕೆಲವರು ಎಟಿಎಂ ತೆರೆದಿಲ್ಲ. ಹೊಸ ನೋಟು ಬಂದಿಲ್ಲ ನಾವು ಹಣಕ್ಕಾಗಿ ಏನು ಮಾಡುವುದು ಎಂದು ಚಿಂತಿಸುತ್ತಿದ್ದಾರೆ.

ನಾನು ಬೆಳಗ್ಗೆಯಿಂದಲೇ ಬ್ಯಾಂಕಿನಲ್ಲಿ ಕಾಯುತ್ತಿದ್ದೇನೆ ಆದರೆ ಅವರು ಆಧಾರ್ ಬೇಕು ಪ್ಯಾನ್ ಕಾರ್ಡ್ ಬೇಕು ಎನ್ನುತ್ತಿದ್ದಾರೆ. ಈಗ ಹೋಗಿ ಮತ್ತೆ ಬಂದರೆ ನಾನು ಕ್ಯೂನಲ್ಲಿ ಕೊನೆಯವನಾಗುತ್ತೇನೆ ಎನ್ನುತ್ತಾರೆ ತ್ಯಾಗರಾಜನಗರದ ಮಣಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After the ban on Rs 500 and Rs 1,000 notes, exchange of notes started from banks started from Thursday. bank have procedure to exchange money
Please Wait while comments are loading...