ಕೊಲ್ಲುತ್ತೇನೆಂದು ಬೆದರಿಸಿದರೂ 2 ಸಾವಿರಕ್ಕಿಂತ ಹೆಚ್ಚು ಹಣವಿಲ್ಲ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 11 : ಅಯ್ಯೋ ಸಾರ್ ಕೆಲಸಕ್ಕೆ ಹೋಗಬೇಕಿತ್ತು ಇಲ್ಲಿ ಬಂದು ದುಡ್ಡಿಗಾಗಿ ಎಟಿಎಂ, ಬ್ಯಾಂಕಿನ ಮುಂದೆ ಅಲೆಯುವಂತಾಗಿದೆ ಮೂರು ದಿನದಿಂದ ಯಾವ ಕೆಲ್ಸಾನು ಆಗ್ತಾಇಲ್ಲ ಎನ್ನುತ್ತಾರೆ ಬೆಂಗಳೂರಿನ ಬಿಸಿನೆಸ್ ಮನ್ ಗಣೇಶ್.

ಇನ್ನು ಬ್ಯಾಂಕು ಮತ್ತು ಎಟಿಎಂಗಳಲ್ಲಿ ಬರುವುದು 2000 ರು ಅದರಿಂದ ಏನಾಗುತ್ತದೆ. ತಿಂಗಳ ಮೊದಲನೇ ವಾರ ಎರಡನೇ ವಾರದಲ್ಲಿ ಮನೆಯ ಹಾಲು, ಹೂವು, ಪೇಪರ್, ಬಾಡಿಗೆ ಕಟ್ಟುವವರು ಏನು ಮಾಡಬೇಕು ನೀವೇ ಹೇಳಿ? ಹಲವು ಕಡೆ ಬ್ಯಾಂಕುಗಳಲ್ಲಿ ಹೊಸ ನೋಟನ್ನು ನೀಡುತ್ತಾರೆ ಆದರೆ ಅದನ್ನು ಚಿಲ್ಲರೆ ಮಾಡಿಸುವುದಾದರೂ ಎಲ್ಲಿ ? ಹಾಗೆಯೇ ನೂರು ನೂರು ರುಪಾಯಿ ನೋಟನ್ನು ಹೊತ್ತು ತಿರುಗಾಡುವುದಾದರೂ ಹೇಗೆ? ಎನ್ನುವಂತಾಗಿದೆ ಪರಿಸ್ಥಿತಿ.

bank, ATM give the money only for 2000 rupee

ಶುಕ್ರವಾರ ಬೆಳಗಿನಿಂದಲೇ ಸಾಲು ಸಾಲಾಗಿನಿಂತ ಎಂಟಿಎಂಗಳ ಮುಂದೆ ನಿಂತ ಜನರು 10-11 ಗಂಟೆ ವೇಳೆಗೆ ಎಟಿಎಂನಲ್ಲಿದ್ದ ಹಣವನ್ನು ಖಾಲಿ ಮಾಡಿದ್ದಾರೆ. ಎಟಿಎಂನಲ್ಲಿ ಒಂದು ಬಾರಿಗೆ ಬರುವ 2000 ಮಾತ್ರ ತೆಗೆಯಲು ಅವಕಾಶ ನೀಡಲಾಗಿದೆ. ಅದೂ ನೂರು, ನೂರು ರುಪಾಯಿ ನೋಟುಗಳು. ಬೆಂಗಳೂರಿನ ಎಟಿಎಂಗಳಲ್ಲಿ ಕೆಲವೆಡೆ ಹಣ ಮುಗಿದು ಹೋಗಿ ಎಟಿಎಂಗಳನ್ನು ಮುಚ್ಚಿದ್ದಾರೆ.

bank, ATM give the money only for 2000 rupee

ಇನ್ನೂ ಕೆಲ ಎಟಿಎಂಗಳಲ್ಲಿ ಹಣವಿಲ್ಲ ಎಂದು ಪಕ್ಕದಲ್ಲಿಯೇ ಇರುವ ಅದೇ ಬ್ಯಾಂಕಿನಲ್ಲಿ ಕೇಳಿದರೆ ಹಣವನ್ನು ನೀಡುತ್ತೇವೆ. ಅಪ್ಲಿಕೇಶನ್‌ ತುಂಬಿಕೊಂಡು ಬಂದು ಆಧಾರ್, ಪ್ಯಾನ್ ಜೆರಾಕ್ಸ್ ನೀಡಿ ಎಂದಿದ್ದಾರೆ. ಎಟಿಎಂಗಳಲ್ಲಿ ಎಲ್ಲೂ ಹೊಸ ನೋಟು ಬಂದಿಲ್ಲ. ಮತ್ತೆ ಕೆಲವು ಕಡೆ ಮಧ್ಯಾಹ್ನ ಹೊಸ ನೂರು ರು ನೋಟುಗಳನ್ನು ತುಂಬಲು ಬ್ಯಾಂಕಿನವರು ಮುಂದಾಗಿದ್ದಾರೆ. ಹಣವಿರುವ ಎಟಿಎಂನ ಎಲ್ಲಡೆಯೂ ಜನವೋ ಜನ ಬ್ಯಾಂಕ್ ಪೋಸ್ಟ್ ಆಫೀಸ್‌ಗಳಲ್ಲೂ ಜನರ ನೂಕು ನುಗ್ಗಲು ಉಂಟಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Currency ban effect: only Rs 2000 give money in bank, ATM. people have lage scale of probleme
Please Wait while comments are loading...