ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು, ಎಚ್ಡಿಕೆ ಕೊಟ್ಟ ವಿವರ

|
Google Oneindia Kannada News

ಬೆಂಗಳೂರು, ಏ. 16 : ಬೆಂಗಳೂರು ಮಹಾನಗರದಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ವಾಸಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು. ಬಿಬಿಎಂಪಿ ಚುನಾವಣೆ ಎದುರಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಅಕ್ರಮ ವಲಸಿಗರ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚಿನ ನಾಲ್ಕು ವರ್ಷದಿಂದ ಅಕ್ರಮ ಬಾಂಗ್ಲಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸರ್ಕಾರ ಇದರ ಬಗ್ಗೆ ಗಮನಹರಿಸತ್ತಿಲ್ಲ ಎಂದು ಕುಮಾರಸ್ವಾಮಿ ದೂರಿದರು.

ಜಕ್ಕಸಂದ್ರ, ಬೆಳ್ಳಂದೂರು ಕೆರೆ ಮುಂಭಾಗ, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ, ಮುನ್ನೇಕೊಳಲು, ಸೋಮಸುಂದರಪಾಳ್ಯ, ಬೇಗೂರು ರಸ್ತೆ ನೈಸ್‌ ರಸ್ತೆ ಸೇರುವ ಭಾಗ ಸೇರಿದಂತೆ ಬೆಂಗಳೂರಿನ ಅನೇಕ ಪ್ರದೇಶದಲ್ಲಿ ಅಕ್ರಮ ವಲಸಿಗರು ವಾಸಿಸುತ್ತಿದ್ದಾರೆ ಎಂದರು.

ಅಕ್ರಮ ವಲಸಿಗರ ಬಗ್ಗೆ ಸರ್ಕಾರ ಗಮನ ಹರಿಸಲಿ

ಅಕ್ರಮ ವಲಸಿಗರ ಬಗ್ಗೆ ಸರ್ಕಾರ ಗಮನ ಹರಿಸಲಿ

ಬೆಂಗಳೂರು ಮಹಾನಗರದಲ್ಲಿ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಇತ್ತೀಚಿನ ನಾಲ್ಕು ವರ್ಷಗಳಲ್ಲಿ ಇವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಬರುತ್ತಿದೆ ಎಚ್ಚರಿಕೆ ವಹಿಸಿ

ಚುನಾವಣೆ ಬರುತ್ತಿದೆ ಎಚ್ಚರಿಕೆ ವಹಿಸಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಮೀಸುತ್ತಿದೆ. ಸ್ಥಳೀಯ ಕೆಲವರು ಇವರಿಗೆ ಚುನಾವಣಾ ಗುರುತಿನ ಚೀಟಿ ಮಾಡಿಕೊಡುವುದರಲ್ಲಿ ತಲ್ಲೀನರಾಗಿದ್ದಾರೆ. ಆದ್ದರಿಂದ ಈ ಬಗ್ಗೆ ಸರ್ಕಾರ ಕೂಡಲೇ ಗಮನಹರಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಎಲ್ಲಿ ವಾಸಿಸುತ್ತಿದ್ದಾರೆ ವಲಸಿಗರು

ಎಲ್ಲಿ ವಾಸಿಸುತ್ತಿದ್ದಾರೆ ವಲಸಿಗರು

ಜಕ್ಕಸಂದ್ರ, ಬೆಳ್ಳಂದೂರು ಕೆರೆ ಮುಂಭಾಗ, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ, ಮುನ್ನೇಕೊಳಲು, ಸೋಮಸುಂದರಪಾಳ್ಯ, ಬೇಗೂರು ರಸ್ತೆ ನೈಸ್‌ ರಸ್ತೆ ಸೇರುವ ಭಾಗ ಸೇರಿದಂತೆ ಬೆಂಗಳೂರಿನ ಅನೇಕ ಪ್ರದೇಶದಲ್ಲಿ ಅಕ್ರಮ ವಲಸಿಗರು ವಾಸಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಎಷ್ಟು ಮೊಬೈಲ್ ಕರೆ ಹೋಗುತ್ತೆ

ಎಷ್ಟು ಮೊಬೈಲ್ ಕರೆ ಹೋಗುತ್ತೆ

ಬೆಂಗಳೂರಿನಿಂದ ಬಾಂಗ್ಲಾದೇಶಕ್ಕೆ ಎಷ್ಟು ಮೊಬೈಲ್ ಕರೆಗಳು ಹೋಗುತ್ತಿವೆ? ಎಂದು ಯಾರೂ ಪರಿಶೀಲಿಸಲು ಹೋಗಿಲ್ಲ. ನಿರುದ್ಯೋಗ ಹಾಗೂ ವಿದ್ಯಾಭ್ಯಾಸವಿಲ್ಲದ ಇವರ ಸಾವಿರಾರು ಮಕ್ಕಳು ಮುಂದೆ ಬೆಂಗಳೂರಿನಲ್ಲಿ ಏನೆಲ್ಲಾ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾರೆಂಬ ಮುಂದಾಲೋಚನೆಯೂ ಸರ್ಕಾರಕ್ಕಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಗುಜರಿ ಮಾಫಿಯಾದವರು ಕರೆ ತರುತ್ತಾರೆ

ಗುಜರಿ ಮಾಫಿಯಾದವರು ಕರೆ ತರುತ್ತಾರೆ

ದೆಹಲಿಯ ಗುಜರಿ ಹಾಗೂ ಕಸದ ಮಾಫಿಯಾದವರು ತಮ್ಮ ಕೆಲಸಕ್ಕೆ ಇವರನ್ನು ಬಾಂಗ್ಲಾದಿಂದ ಅಕ್ರಮವಾಗಿ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಇವರಲ್ಲಿ ಹಲವರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇಲ್ಲಿ ಸಮಸ್ಯೆಯಾದರೆ ತಕ್ಷಣ ಬಾಂಗ್ಲಾಕ್ಕೆ ವಾಪಸ್ ಹೋಗುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ಸರ್ಕಾರ ಈ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಿ

ಸರ್ಕಾರ ಈ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಿ

ಸರ್ಕಾರ ಜಕ್ಕಸಂದ್ರದ 1ಕ್ಯಾಂಪ್, ಬೆಳ್ಳಂದೂರು ಕೆರೆ ಮುಂಭಾಗದ 1 ಕ್ಯಾಂಪ್, ಇಬ್ಬಲೂರಿನ 1 ಕ್ಯಾಂಪ್, ದೇವರಬೀಸನಹಳ್ಳಿಯ 3 ಕ್ಯಾಂಪ್, ಕಾಡುಬೀಸನಹಳ್ಳಿಯ 2 ಕ್ಯಾಂಪ್ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಿ ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

English summary
JD(S) Karnataka president H.D. Kumaraswamy has alleged that illegal immigrants from Bangladesh are increasing in Bengaluru. He has urged state govt to take note of it and take stringent action against them. He was addressing press conference in Bengaluru on 16th April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X