ಒಂದು ವರ್ಷದ ಮಗುವಿನ ಮುಂದೆ ಮಹಿಳೆ ಮೇಲೆ ಅತ್ಯಾಚಾರ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 9: 23 ವರ್ಷದ ಮಹಿಳೆ ಮೇಲೆ ಕೆಲಸ ಮಾಡುವ ಕಂಪೆನಿಯ ಬಾಸ್, ಆಕೆಯ ಒಂದು ವರ್ಷದ ಮಗುವಿನ ಎದುರಿನಲ್ಲೇ ಅತ್ಯಾಚಾರ ಎಸಗಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಯಲಹಂಕದ ಕೊಗಿಲು ಕ್ರಾಸ್ ನಲ್ಲಿರುವ ಖಾಸಗಿ ಕಂಪೆನಿಯ ಕಸ್ಟಮರ್ ಕೇರ್ ಎಕ್ಸ್ ಕ್ಯೂಟಿವ್ ಆಗಿದ್ದ ಆಕೆ ಮೇಲೆ ಕೊಡಗಿನಲ್ಲಿ ಅತ್ಯಾಚಾರ ಎಸಗಲಾಗಿದೆ.

ಸಂತ್ರಸ್ತೆ ಅ ಕಂಪೆನಿ ಸೇರಿ ಎರಡು ತಿಂಗಳಾಗಿತ್ತು. ಕಂಪೆನಿಯ ಪಾರ್ಟ್ ನರ್ ಗಳ ಪೈಕಿ ಒಬ್ಬನಾದ ಟಿ.ವಿವೇಕಾನಂದ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ, ದೈಹಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಆದರೆ ಆತನಿಂದ ಅಂತರ ಕಾಯ್ದುಕೊಂಡು, ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.[ಬೆಳಗಾವಿ ಯುವತಿ ಮೇಲೆ ಎರಡು ತಿಂಗಳು ಅತ್ಯಾಚಾರ]

Bangalore Woman raped by boss infront of her son

ಆ ನಂತರ ಕೊಡಗಿಗೆ ಕಂಪೆನಿ ವ್ಯವಹಾರದ ಸಲುವಾಗಿಯೇ ಪ್ರವಾಸವನ್ನು ನಿಗದಿ ಮಾಡಿ, ಆಕೆ ಕಡ್ಡಾಯವಾಗಿ ಬರುವಂತೆ ವಿವೇಕಾನಂದ ಮಾಡಿದ್ದಾನೆ. ಜತೆಗೆ ಮತ್ತೊಬ್ಬ ಪಾರ್ಟ್ ನರ್ ಇದ್ದಿದ್ದರಿಂದ ಮತ್ತು ಸಂತ್ರಸ್ತೆಯ ತವರುಮನೆ ಕೊಡಗಿನಲ್ಲೇ ಇದ್ದಿದ್ದರಿಂದ ಆಕೆ ಯಾವುದೇ ಅನುಮಾನ ಇಲ್ಲದೆ ಹೋಗಿದ್ದಾರೆ. ಜತೆಗೆ ತಮ್ಮ ಮಗನನ್ನೂ ಕರೆದೊಯ್ದಿದ್ದಾರೆ.

ಏಪ್ರಿಲ್ ನಲ್ಲಿ ಘಟನೆ ನಡೆದಿದ್ದು, ಆರೋಪಿಯು ವೀರಾಜಪೇಟೆಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಒಂದೇ ರೂಮ್ ಬುಕ್ ಮಾಡಿ ಅಲ್ಲೇ ಉಳಿಯುವಂತೆ ಮಾಡಿದ್ದಾನೆ.ಮಾರನೇ ದಿನ ಜತೆಗೆ ಬಂದಿದ್ದ ಪಾರ್ಟ್ ನರ್ ಒಬ್ಬರು ಕೆಲಸ ಇದೆ ಎಂದು ವಾಪಸ್ ಬೆಂಗಳೂರಿಗೆ ಬಂದಿದ್ದಾರೆ.[ಬೆಂಗಳೂರಿನಲ್ಲಿ ಹೆಣವನ್ನು ಸಂಭೋಗಿಸಿದ ದುರುಳರ ಬಂಧನ]

ಆ ಸಂದರ್ಭದಲ್ಲಿ, ಸ್ನಾನ ಮಾಡುವಾಗ ಅದರ ವಿಡಿಯೋ ತೆಗೆದಿದ್ದೀನಿ, ನನ್ನ ಜತೆ ದೈಹಿಕವಾಗಿ ಸಹಕರಿಸಲಿಲ್ಲ ಅಂದರೆ ಆನ್ ಲೈನ್ ನಲ್ಲಿ ಹಾಕ್ತೀನಿ ಎಂದು ಸಂತ್ರಸ್ತೆಗೆ ಹೆದರಿಸಿದ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಇದೇ ರೀತಿ ಹೆದರಿಸಿ ಕೆಲ ದಿನಗಳ ಅತ್ಯಾಚಾರ ಎಸಗಿದ್ದು, ಜಕ್ಕೂರಿನಲ್ಲಿರುವ ತನ್ನ ಅಪಾರ್ಟ್ ಮೆಂಟ್ ಗೆ ಕರೆದುಕೊಂಡು ಹೋಗಿ ಆಕೆಯನ್ನು ತನ್ನ ಹೆಂಡತಿ ಎಂದೇ ಪರಿಚಯಿಸಿದ್ದಾನೆ.

ಈ ವಿಚಾರ ಸಂತ್ರಸ್ತೆಯ ಪತಿಗೆ ತಿಳಿಯುವವರೆಗೆ ಆರೋಪಿ ಆಕೆಯನ್ನು ಬಳಸಿಕೊಂಡಿದ್ದು, ಆ ನಂತರ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದ ಮೇಲೆ ಆರೋಪಿ ಆಂಧ್ರಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದು, ಕೆಳ ಹಂತದ ಕೋರ್ಟ್ ನಲ್ಲಿ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜತೆಗಿದ್ದ ಪಾರ್ಟ್ ನರ್ ಗೆ ವಿವೇಕಾನಂದನ ಉದ್ದೇಶ ತಿಳಿದಿತ್ತೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಕಳೆದ ಕೆಲವು ವಾರಗಳಿಂದ ಕಂಪೆನಿಗೂ ಬರುತ್ತಿಲ್ಲ. ಪ್ರಕರಣದ ತನಿಖೆ ಮುಂದುವರಿದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 23 year old woman, who was working in private company in Bangalore, has been allegedly raped in front of her son by her boss during a field trip to Kodagu.
Please Wait while comments are loading...