ದೇಶದ ಬೃಹತ್ ಅಡುಗೆ ಸ್ಪರ್ಧೆಗೆ ಸಾಕ್ಷಿಯಾದ ಬೆಂಗಳೂರು

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ಹೋಟೆಲ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಹೆಸರು ಮಾಡಿರುವ 'ಯಂಗ್ ಶೆಫ್ ಇಂಡಿಯಾ ಸ್ಕೂಲ್' ಏರ್ಪಡಿಸಿರುವ ಭಾರತದ ಬೃಹತ್ ಅಡುಗೆ ಸ್ಪರ್ಧೆ ದಕ್ಷಿಣ ವಲಯದ ಸೆಮಿ ಫೈನಲ್ಸ್ ಬೆಂಗಳೂರಿನಲ್ಲಿ ನಡೆಯಿತು.

ಮತ ಹಾಕಿರಿ, ಹೋಟೆಲ್‌ನಲ್ಲಿ ತಿಂಡಿ, ಮಾಲ್ ನಲ್ಲಿ ಡಿಸ್ಕೌಂಟ್ ಪಡೆಯಿರಿ!

8 ನೇ ಆವೃತ್ತಿಯ ಯಂಗ್ ಶೆಫ್ ಇಂಡಿಯಾ ಸ್ಕೂಲ್ ಸ್ಪರ್ಧೆಯಲ್ಲಿ ಎರಡೂವರೆ ಸಾವಿರ ಶಾಲೆಗಳ 30ಸಾವಿರಕ್ಕೂ ಹೆಚ್ಚು ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೇಶಾದ್ಯಂತ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 5 ಲಕ್ಷ ರೂ.ಗಳ ನಗದು ಬಹುಮಾನ ಹಾಗೂ ಹೋಟೆಲ್ ಇಂಡಸ್ಟ್ರಿ ಮ್ಯಾನೇಜ್‌ಮೆಂಟ್‌ನಲ್ಲಿ ದಿ. ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಸ್ಕಾಲರ್‌ಶಿಪ್‌ ಮೇರೆಗೆ ಅಧ್ಯಯನ ನಡೆಸುವ ಅವಕಾಶ ದೊರೆಯಲಿದೆ.

ಇಡ್ಲಿ ಎಂಬ ಎರಡಕ್ಷರದಲ್ಲಿ ಎಷ್ಟೊಂದು ನೆನಪುಂಟು!

ಬೆಂಗಳೂರಿನಲ್ಲಿ ಮಂಗಳವಾರ ನಡೆದ ದಕ್ಷಿಣ ವಲಯ ಸೆಮಿ ಫೈನಲ್ಸ್ ಸ್ಪರ್ಧೆಯ ಅಂತಿಮ ಹಣಾಹಣಿ ಏ.13ರಂದು ದೆಹಲಿಯಲ್ಲಿ ನಡೆಯಲಿದೆ. ದಿ ಯಂಗ್ ಶೆಫ್ ಇಂಡಿಯಾ ಸ್ಕೂಲ್ ಸತತ ಎಂಟನೇ ವರ್ಷ ಈ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದು, ಅಡುಗೆ ಸಿದ್ಧಪಡಿಸುವಲ್ಲಿ ವಿದ್ಯಾರ್ಥಿಗಳಿಗೆ ಇರುವ ಕೌಶಲ್ಯವನ್ನು ಹೊರಹಾಕುವುದು ಹಾಗೂ ಪ್ರೋತ್ಸಾಹಿಸುವುದು ಹಾಗೂ ಆತಿಥ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಕೌಶಲ್ಯ ವೃದ್ಧಿ ಪಡಿಸುವುದು ಸ್ಪರ್ಧೆಯ ಉದ್ದೇಶವಾಗಿದೆ.

ವಿದ್ಯಾರ್ಥಿಗಳಿಗಾಗಿ ಅಡುಗೆ ಸ್ಪರ್ಧೆ

ವಿದ್ಯಾರ್ಥಿಗಳಿಗಾಗಿ ಅಡುಗೆ ಸ್ಪರ್ಧೆ

8 ನೇ ಆವೃತ್ತಿಯ ಯಂಗ್ ಶೆಫ್ ಇಂಡಿಯಾ ಸ್ಕೂಲ್ ಸ್ಪರ್ಧೆಯಲ್ಲಿ ಎರಡೂವರೆ ಸಾವಿರ ಶಾಲೆಗಳ 30ಸಾವಿರಕ್ಕೂ ಹೆಚ್ಚು ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೇಶಾದ್ಯಂತ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 5 ಲಕ್ಷ ರೂ.ಗಳ ನಗದು ಬಹುಮಾನ ಹಾಗೂ ಹೋಟೆಲ್ ಇಂಡಸ್ಟ್ರಿ ಮ್ಯಾನೇಜ್‌ಮೆಂಟ್‌ನಲ್ಲಿ ದಿ. ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಸ್ಕಾಲರ್‌ಶಿಪ್‌ ಮೇರೆಗೆ ಅಧ್ಯಯನ ನಡೆಸುವ ಅವಕಾಶ ದೊರೆಯಲಿದೆ.

ಅಡುಗೆ ಸ್ಪರ್ಧೆಯಲ್ಲಿ 30 ಸಾವಿರ ವಿದ್ಯಾರ್ಥಿಗಳು ಭಾಗಿ

ಅಡುಗೆ ಸ್ಪರ್ಧೆಯಲ್ಲಿ 30 ಸಾವಿರ ವಿದ್ಯಾರ್ಥಿಗಳು ಭಾಗಿ

ಪ್ರಸಕ್ತ ವರ್ಷ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆದ ವಲಯ ಮಟ್ಟದ ಸ್ಪರ್ಧೆಗಳಲ್ಲಿ ಡೆಊವರೆ ಸಾವಿರಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಈಗಾಗಲೇ ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಪ್ರತಿ ವಲಯದಿಂದ 10ವಿದ್ಯಾರ್ಥಿಗಳಂತೆ ನಾಲ್ಕು ವಲಯಗಳಿಂದ ಮೆಗಾ ಫೈನಲ್‌ನಲ್ಲಿ ವಿದ್ಯಾರ್ಥಿ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು, ಪ್ರತಿ ವರ್ಷದ ಈ ಸ್ಪರ್ಧೆಗಳನ್ನು ಎನ್‌.ಡಿ ಟಿವಿ ಫುಡ್ , ಚಾಲನೆಲ್ ದೇಶದ ಪ್ರಖ್ಯಾತ ಚಾನೆಲ್‌ಗಳು ಸ್ಪರ್ಧೆಯನ್ನು ನೇರ ಪ್ರಸಾರ ಮಾಡುತ್ತಿವೆ.

ಅಡುಗೆ ಸ್ಪರ್ಧೆಯ ನಿರ್ಣಾಯಕರು

ಅಡುಗೆ ಸ್ಪರ್ಧೆಯ ನಿರ್ಣಾಯಕರು

ಏ.13ರಂದು ದೆಹಲಿಯಲ್ಲಿ ಅಂತಿಮ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯ ನಿರ್ಣಾಯಕರಾಗಿ ದೇಶದ ಪ್ರಖ್ಯಾತ ಶೆಫ್ ಗಳು ಭಾಗವಹಿಸಲಿದ್ದಾರೆ.ಎಂ.ಎಸ್. ಆರ್ ಹೋಟೆಲ್‌ನ ಶೆಫ್ ರೈಮಂಡ್, ಬೆಂಗಳೂರು ತಾಜ್ ಹೋಟೆಲ್‌ನ ಶೆಫ್ ಆಶಿಶ್ ಉಗಲ್, ಹಾಲಿಡೇ ಇನ್ ಹೋಟೆಲ್‌ನ ಶೆಫ್ ಡ್ಯಾನಿಯಲ್ ಕುಮಾರ್, ಬೆಂಗಳೂರಿನ ಲಲಿತ್ ಹೋಟೆಲ್‌ನ ಮುಖ್ಯ ಶೆಫ್ ಆಶಿಶ್ ಡೇನಿಯಲ್ ನಂತಹ ಪ್ರಸಿದ್ಧ ಶೆಫ್ ಗಳು ಈ ಸ್ಪರ್ಧೆಯ ನಿರ್ಣಾಯಕರಾಗಿ ಪಾಲ್ಗೊಳ್ಳಲಿದ್ದಾರೆ.

ಹೋಟೆಲ್ ಮ್ಯಾನೇಜ್‌ಮೆಂಟ್ ಒಂದು ಉದ್ಯಮವಾಗಿ ಬೆಳಳೆದುನಿಂತಿದ್ದು, ಉದ್ಯಮದಲ್ಲಿ ಆಸಕ್ತಿ ಇರುವ ಹೊಸ ಮುಖಗಳನ್ನು ಕೌಶಲ್ಯಯುತವಾಗಿ ಶಾಲೆಗಳಿಂದ ಹೊರಕ್ಕೆ ಕಳುಹಿಸುವುದು ಶಾಲೆಯ ಉದ್ದೇಶವಾಗಿದೆ. ಅಡುಗೆ ತಯಾರಿಕೆ ಸ್ಪರ್ಧೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿರುವ ಹಾಲಿ ಡೇ ಇನ್ ಸ್ಯೂಟ್ಸ್ ಹೋಟೆಲ್‌ನ ಶೆಫ್ ಡ್ಯಾನಿಯಲ್ ಕುಮಾರ್, ಇಂತಹ ಸ್ಪರ್ಧೆಯಿಂದ ಹೋಟೆಲ್ ಉದ್ಯಮದ ಬಗೆಗೆ ಜನರಲ್ಲಿ ಆಸಕ್ತಿ ಉಂಟಾಗುತ್ತದೆ. ಹಾಗೂ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಈ ಉದ್ಯಮದಲ್ಲಿ ಭಾಗಿಯಾಗಲು.ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದ್ದಾರೆ.

ಚಾಕಚಕ್ಯತೆ ಇರುವ ವಿದ್ಯಾರ್ಥಿಗಳ ಆಯ್ಕೆ

ಚಾಕಚಕ್ಯತೆ ಇರುವ ವಿದ್ಯಾರ್ಥಿಗಳ ಆಯ್ಕೆ

ಹೋಟೆಲ್‌ ಮ್ಯಾನೇಜ್‌ ಮೆಂಟ್‌ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿರುವ ಅಡುಗೆ ತಯಾರಿಸುವ ಕಲೆ, ಕೌಶಲ್ಯ ಅವರಲ್ಲಿರುವ ತಾಂತ್ರಿಕತೆ ಕಡಿಮೆ ತ್ಯಾಜ್ಯಗಳು ಉತ್ಪಾದನೆಯಾಗುವಂತೆ ವಸ್ತಿಉಗಳನ್ನು ಬಳಸುವುದು ಹಾಗೂ ಅತಿ ಕಡಿಮೆ ವಸ್ತುಗಳನ್ನು ಬಳಸಿ ರುಚಿಕರವಾದ ಅಡುಗೆ ತಯಾರಿಸುವ ಚಾಕಚಕ್ಯತೆಯುಳ್ಳ ವಿದ್ಯಾರ್ಥಿಗಳನ್ನು ವಿಜೇತರನ್ನಾಗಿ ಘೋಷಿಸಲಾಗುತ್ತದೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌ ನ ನಿರ್ದೇಶಕಿ ಶಾಲಿನಿ ಖನ್ನಾ ಯಂಗ್ ಇಂಡಿಯಾ ಸ್ಕೂಲ್ ಪ್ರತಿವರ್ಷ ಏರ್ಪಡಿಸುತ್ತಿರುವ ಅಡುಗೆ ತಯಾರಿಕೆ ಸ್ಪರ್ಧೆ ಕುರಿತಂತೆ ಮಾತನಾಡಿ, ಅಡುಗೆ ತಯಾರಿಸುವುದು ಮನುಷ್ಯನ ಜೀವನ ಕೌಶಲ್ಯಗಳನಲ್ಲಿ ಒಂದು ಭಾಗ ಈಕೌಶಲ್ಯವನ್ನು ಗುರುತಿಸಬೇಕು.ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಇನ್ನಷ್ಟು ನಿಖರ ಸೇವೆ ಒದಗಿಸುವುದು ಅದಕ್ಕೆ ಬೇಕಾದ ಮಾನವ ಸಂಪನ್ಮೂಲಗಳನ್ನು ಒದಗಿಸುವುದು ಸ್ಪರ್ಧೆಯ ಉದ್ದೇಶವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Young Chef India Schools 8th edition of India's largest Culinary Competition was held in Bangalore in association with International Institute of Hotel Management. Over 30000 students from more than 2500 schools across India participating for the title, a cash prize of Rs. 5,00,000 and a scholarship to study at The International Institute of Hotel Management. Mega final will be held in Delhi on April 13.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ