7 ಗಂಡಂದಿರ ಮುದ್ದಿನ ಹೆಂಡತಿ ಮಾಡಿದ್ದೇನು ಗೊತ್ತಾ?

Written By: Ramesh
Subscribe to Oneindia Kannada

ಬೆಂಗಳೂರು, ಸೆ. 20 : ಮಹಿಳೆಯೊಬ್ಬಳು ಹಣಕ್ಕಾಗಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಜನರನ್ನು ಮದುವೆಯಾಗಿ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಾಸ್ಮೀನ್ ಬಾನು ಎನ್ನುವ ಯುವತಿ 7 ಮಂದಿಯನ್ನು ಮದುವೆಯಾಗಿದ್ದಾಳೆ. ಈಕೆ ಮದುವೆಯಾದ ಎಲ್ಲರಿಂದ ಹಣ ಪೀಕಿ ಕೈಕೊಟ್ಟಿದ್ದಾಳೆ.

ಶ್ರೀಮಂತ ಯುವಕರಿಗೆ ಗಾಳ ಹಾಕಿ ಮದುವೆಯಾಗುತ್ತಿದ್ದ ಈಕೆ ನಂತರ ಅವರಿಂದ ಹಣ ಪಡೆದು ಪಂಗನಾಮ ಹಾಕಿದ್ದಾಳೆ. ಇಮ್ರಾನ್, ಜೈದ್ ಸೇಟ್ ಅಫ್ಜಲ್ ಪಾಷಾ, ಶೋಯಬ್, ಸಿರಾಜ್, ಅಫ್ಜಲ್, ಆಸೀಫ್ ಯುವತಿಯಿಂದ ವಂಚನೆಗೊಳಗಾದ ಗಂಡಂದಿರು.

Bangaluru

ಮೊದಲ ಗಂಡ ಇಮ್ರಾನ್ ದೂರು ಕೊಡಲು ಮುಂದಾದಾಗ ಆತನ ಮೇಲೆ ಹಲ್ಲೆ ಮಾಡಿಸಿದ್ದಾಳೆ. ಈಕೆ ನನಗೆ ಮೋಸ ಮಾಡಿ ಹಣ ವಂಚಿಸಿದ್ದಾಳೆ ಎಂದು ನಾಲ್ಕನೇ ಗಂಡ ಅಪ್ಜಲ್ ಕೆಜಿ ಹಳ್ಳಿ ಠಾಣೆಗೆ ದೂರು ದಾಖಲಿಸಿದ್ದಾನೆ. ಈ ಪ್ರಕರಣ ದಾಖಲಿಸಿಕೊಂಡ ಕೆಜಿ ಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
KG Halli police are investigating an allegation of cheating made by a man against his wife. He claims she has seven other husbands and has also accused her of assaulting him.
Please Wait while comments are loading...