ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿ ಪ್ರಾಧ್ಯಾಪಕಿಯರಿಗೆ ಲೈಂಗಿಕ ಕಿರುಕುಳ?

By Mahesh
|
Google Oneindia Kannada News

ಬೆಂಗಳೂರು, ನ.12: ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರಿಂದ ಆರು ಮಂದಿ ಪ್ರಾಧ್ಯಾಪಕಿಯರಿಗೆ ಲೈಂಗಿಕ ಕಿರುಕುಳ ನಡೆದಿದೆ ಎಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಬಂದಿದೆ. ನಿವೃತ್ತ ಪ್ರಾಧ್ಯಾಪಕಿ ಸೇರಿ ಆರು ಜನರಿಂದ ದೂರು ಸ್ವೀಕರಿಸಲಾಗಿದೆ ಎಂದು ಮಹಿಳಾ ಆಯೋಗದ ಮುಖ್ಯಸ್ಥೆ ಮಂಜುಳಾ ಮಾನಸ ಹೇಳಿದ್ದಾರೆ.

ಬೆಂವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರಿಂದಲೇ ಲೈಂಗಿಕ ಕಿರುಕುಳ ನಡೆದಿದೆ ಎಂದು ಬೆಂವಿವಿ ಕುಲ ಸಚಿವರು ಹಾಗೂ ಕುಲಪತಿಗಳಿಗೆ ದೂರು ಸಲ್ಲಿಸಲಾಗಿತ್ತು. ಅದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹೀಗಾಗಿ ನೆರವು ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದೇವೆ ಎಂದು ನೊಂದ ಪ್ರಾಧ್ಯಾಪಕಿಯರು ಹೇಳಿಕೊಂಡಿದ್ದಾರೆ.

ಪಿಎಚ್.ಡಿ ವಿದ್ಯಾರ್ಥಿನಿಯೊಬ್ಬರ ಮೇಲೆ ಬೆಂವಿವಿಯ ಪ್ರಾಧ್ಯಾಪಕರೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನುವ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ನಿವೃತ್ತ ಪ್ರಾಧ್ಯಾಪಕಿ ಸೇರಿ ಆರು ಜನ ಬೆಂವಿವಿಯ ಪ್ರಾಧ್ಯಾಪಕಿಯರು ಬೆಂವಿವಿಯ ಮುಖ್ಯಸ್ಥರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊರೆಸಿರುವುದು ಆತಂಕಕಾರಿಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ತನಿಖೆ ಕೈಗೊಳ್ಳಲಾಗುವುದು ಎಂದು ಮಹಿಳಾ ಆಯೋಗ ಹೇಳಿದೆ.

Manjula Manasa

ಒಟ್ಟಾರೆ ಬೆಂಗಳೂರು ವಿವಿಯಲ್ಲಿ ಪ್ರಾಧ್ಯಾಪಕಿಯರು ದೈಹಿಕ ಹಾಗೂ ಮಾನಸಿಕ ಹಿಂಸೆಗೊಳಗಾಗುತ್ತಿದ್ದಾರೆ. ಪ್ರಾಧ್ಯಾಪಕಿಯೊಬ್ಬರ ಸಂಬಳ ತಡೆ ಹಿಡಿಯುವುದು, ಕಚೇರಿಗೆ ಹಾಜರಿದ್ದ ದಿನವನ್ನು ಗೈರು ಹಾಜರಿ ಎಂದು ಉಲ್ಲೇಖಿಸುವುದು, ಅಸಭ್ಯ ಭಾಷೆ ಬಳಕೆ, ವರ್ತನೆ, ವಿಭಾಗದಿಂದ ನಡೆಸುವ ಕಾರ್ಯಕ್ರಮ ಆಯೋಜನೆಯಲ್ಲಿ ಕಿರುಕುಳ ಹೀಗೆ ಅನೇಕ ರೀತಿ ಹಿಂಸೆಯನ್ನು ಅನುಭವಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ ಎಂದು ಮಾನಸ ವಿವರಿಸಿದ್ದಾರೆ.

ಉಪ ಕುಲಪತಿ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ವಿವಿ ಉಪಕುಲಪತಿ ಬಿ. ತಿಮ್ಮೇಗೌಡ ಅವರು, ಕಳೆದ ಒಂದು ವರ್ಷದಿಂದ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಬಂದಿರುವ ದೂರನ್ನು ವಿಶ್ವವಿದ್ಯಾಲಯದ ಮಹಿಳಾ ಲೈಂಗಿಕ ಕಿರುಕುಳ ನಿಗ್ರಹ ಸೆಲ್ ಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಪ್ರಾಧ್ಯಾಪಕಿಯರ ದೂರಿನ ವಿರುದ್ಧ ಕನ್ನಡ ವಿಭಾಗದ ನಿರ್ದೇಶಕರು ಪ್ರತಿ ದೂರನ್ನು ನೀಡಿ ಪ್ರಾಧ್ಯಾಪಕಿಯರು ಕೆಲಸಕ್ಕೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಶಿಸ್ತಿನಿಂದ ವರ್ತಿಸುತ್ತಿಲ್ಲ, ವಿಭಾಗದ ಮುಖ್ಯಸ್ಥರ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದಿದ್ದಾರೆ.

English summary
Bangalore University (BU) finds itself in the grip of another controversy with five women professors filing a complaint of harassment at the workplace with the Karnataka State Commission for Women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X