ಬೆಂಗಳೂರು ವಿ.ವಿ: ಪರೀಕ್ಷಾ ಶುಲ್ಕ ಪಾವತಿ ಅವಧಿ ವಿಸ್ತರಣೆ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 01: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪೂರ್ವ ಪರೀಕ್ಷೆಗಳ ಶುಲ್ಕ ಪಾವತಿ ದಿನಾಂಕ ಬದಲಾಗಿದೆ. ಎಲ್ಲಾ ಸೆಮಿಸ್ಟರ್, ಕೋರ್ಸ್ ಗಳ ಶುಲ್ಕ ಪಾವತಿ ದಿನಾಂಕವನ್ನು ಅಕ್ಟೋಬರ್ 28ರ ತನಕ ವಿಸ್ತರಿಸಲಾಗಿದೆ.

ಬಿಎ, ಬಿ.ಕಾಂ, ಬಿ.ಎಸ್ಸಿ, ಎಂಬಿಎ, ಬಿಬಿಎಂ, ಬಿಸಿಎ, ಬಿಬಿಎ, ಬಿಎಸ್‌ಡಬ್ಲೂ, ಬಿಎಸ್ಸಿ 1,3 ಮತ್ತು 5 ನೇ ಸೆಮಿಸ್ಟರ್‌, ಬಿಎಚ್ಎಂ ಮತ್ತಿತರ ಕೋರ್ಸ್‌ಗಳ 1,3, 5 ಮತ್ತು 7 ನೇ ಸೆಮಿಸ್ಟರ್‌ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗೆ ಕಾಲಾವಕಾಶ ವಿಸ್ತರಿಸಿದೆ.

Bangalore University extended Last Date for payment of Exam Fees

ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಪರೀಕ್ಷಾ ಶುಲ್ಕ ಮತ್ತು ಅರ್ಜಿ ಸಲ್ಲಿಸಲು ದಂಡ ರಹಿತ ಅಕ್ಟೋಬರ್ 5 ಕೊನೆಯ ದಿನವಾಗಿದೆ. 200 ರು ದಂಡದೊಂದಿಗೆ ಶುಲ್ಕ ಪಾವತಿಸಲು ಅಕ್ಟೋಬರ್ 14 ಕೊನೆಯ ದಿನ. 1,000 ರು ದಂಡದೊಂದಿಗೆ ಶುಲ್ಕ ಪಾವತಿಸಲು ಅಕ್ಟೋಬರ್ 28 ಕೊನೆಯ ದಿನವಾಗಿದೆ ಎಂದು ವಿಶ್ವವಿದ್ಯಾಲಯ ಪ್ರಕಟಿಸಿದೆ.

ಈ ಪ್ರಕಟಣೆ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The last date for payment of examination fees for undergraduate courses of Bangalore University extended. This announcement applies to Bengaluru Rural, Ramanagara, Kolar and Chickaballapur districts.
Please Wait while comments are loading...