ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮಳೆ, ಬಿಡಿಎಯಿಂದ ಸಹಾಯವಾಣಿ

|
Google Oneindia Kannada News

ಬೆಂಗಳೂರು, ಅ.11 : ಬೆಂಗಳೂರು ನಗರದಲ್ಲಿ ಪ್ರತಿದಿನ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರ ಸಹಾಯಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಹಾಯವಾಣಿಯನ್ನು ಆರಂಭಿಸಿದೆ. ದಿನದ 24 ಗಂಟೆಯೂ ಇದು ಕಾರ್ಯನಿರ್ವಹಿಸಲಿದ್ದು, ಜನರ ಸಮಸ್ಯೆಗೆ ಸ್ಪಂದಿಸಲಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಸಂಭವಿಸಬಹುದಾದಂತಹ ಅನಾಹುತ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ಸಹಾಯಕವಾಗಲಿ ಎಂದು ಬಿಡಿಎ ಈ ಕಂಟ್ರೋಲ್‌ ರೂಂ ಅನ್ನು ಆರಂಭಿಸಿದೆ. 24 ಗಂಟೆ ಕಾರ್ಯನಿರ್ವಹಿಸುವ ಈ ಕಂಟ್ರೋಲ್‌ ರೂಂನಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜನರ ಸಮಸ್ಯೆಗೆ ಸ್ಪಂದಿಸಲಿದ್ದಾರೆ.

rain

ತುರ್ತುಪರಿಸ್ಥಿತಿಯಲ್ಲಿ ಅಗತ್ಯ ಪರಿಹಾರ ಕಾರ್ಯ ಕೈಗೊಳ್ಳಲು ಅನುಕೂಲವಾಗುವಂತೆ ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ವಿಭಾಗೀಯ ಕಚೇರಿಗಳಲ್ಲೂ ಅಗತ್ಯ ಸಾಧನ ಸಲಕರಣೆಗಳೊಂದಿಗೆ ಸಿಬ್ಬಂದಿಯ ಕಾರ್ಯ ಪಡೆಯನ್ನು ರಚಿಸಲಾಗಿದೆ. [ಮಳೆ ನೀರಲ್ಲಿ ಕೊಚ್ಚಿ ಹೋದ ಗೀತಾಲಕ್ಷ್ಮೀ]

ನಗರದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಚರಂಡಿ ರಿಪೇರಿ, ಹೂಳೆತ್ತುವುದು, ಮೋರಿಗಳ ದುರಸ್ತಿ, ಮುರಿದು ಬೀಳಬಹುದಾದ ಮರದ ರೆಂಬೆಗಳನ್ನು ತೆರವುಗೊಳಿಸುವ ಕಾರ್ಯಗಳನ್ನು ಈ ಕಾರ್ಯಪಡೆ ಕೈಗೊಳ್ಳಲಿದೆ. ಅಲ್ಲದೆ ಬಿಡಿಎ ನಿರ್ಮಿಸಿರುವ ಗ್ರೇಡ್ ಸೆಪರೇಟರ್‌ಗಳನ್ನು ನಿಯಮಿತವಾಗಿ ತಪಾಸಣೆ ಮಾಡಿ ಅಗತ್ಯ ತಾಂತ್ರಿಕ ದುರಸ್ತಿಗಳನ್ನು ಕೈಗೊಳ್ಳಲಾಗುತ್ತದೆ.

ಅಂದಹಾಗೆ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು 23460899, ಉತ್ತರ ವಲಯ-2333479, ಪೂರ್ವ ವಲಯ-25720264, ದಕ್ಷಿಣ ವಲಯ-26712969 ಹಾಗೂ ಪಶ್ಚಿಮ ವಲಯ-23381479 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.

English summary
The Bangalore Development Authority (BDA) has set up a control room at its head office for those affected by rain in areas under its jurisdiction. The control room will be manned under the supervision of an Assistant Executive Engineer during 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X