ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶ ಕೂರಿಸಿದ ಮೇಲೆ ಇವನ್ನು ಮರೆಯಬೇಡಿ

|
Google Oneindia Kannada News

ಬೆಂಗಳೂರು, ಆ, 20 : ಮಹಾನಗರದಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ನಗರದ ಲಕ್ಷಾಂತರ ಮನೆಗಳಲ್ಲಿ, ಬೀದಿ ಬೀದಿಗಳಲ್ಲಿ ಗಣಪತಿ ಪ್ರತಿಷ್ಠಾಪನೆಯಾಗಿದೆ.
ಹಬ್ಬ ಆಚರಣೆಗೆ ಸಂಬಂಧಿಸಿ ಪೊಲೀಸ್‌ ಇಲಾಖೆ ಸಾರ್ವಜನಿಕರಿಗೆ ಅನೇಕ ಸೂಚನೆ ನೀಡಿದ್ದು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಿದೆ.

ganesha

ಪಾಲಿಸಬೇಕಾದ ಆದೇಶಗಳು ಇಂತಿವೆ:
* ಗಣೇಶ ಸ್ಥಾಪನೆ ಮಾಡಿದ ಜಾಗದಲ್ಲಿ ಕನಿಷ್ಠ ಇಬ್ಬರು ಕಾರ್ಯಕರ್ತರು ಯಾವಾಗಲೂ ಹಾಜರಿರಬೇಕು.
* ಮೂರ್ತಿ ಪ್ರತಿಷ್ಠಾಪಿಸುವ ಜಾಗದಲ್ಲಿ ಬೆಂಕಿ ನಂದಿಸುವ ಸಾಮಗ್ರಿ ಅಳವಡಿಸಿರಬೇಕು.
* ಸುತ್ತಮುತ್ತಲ ಜಾಗದಲ್ಲಿ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಇಡುವುದು ನಿಷಿದ್ಧ.
* ವಿದ್ಯುತ್‌ ಸಂಪರ್ಕ ಪಡೆಯಲು ಬೆಸ್ಕಾಂ ಅನುಮತಿ ಪಡೆದಿರಬೇಕು.
* ದಿನದ 24 ಗಂಟೆಯೂ ಮೂರ್ತಿ ಸ್ಥಾಪನೆ ಜಾಗದಲ್ಲಿ ಬೆಳಕಿರಬೇಕು.
* ಜನಸಂದಣಿ ನಿಯಂತ್ರಿಸಲು ಸಮರ್ಪಕ ರೀತಿಯಲ್ಲಿ ಬ್ಯಾರಿಕೇಡ್‌ ಅಳವಡಿಸುವುದು ಆಯೋಜಕರ ಜವಾಬ್ದಾರಿ.
* ಮಹಿಳಾ ಸುರಕ್ಷತೆಗೆ ಭಂಗ ತರದಂತೆ ನಡೆದುಕೊಳ್ಳುವುದು.
* ಧ್ವನಿವರ್ಧಕಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಬಳಸಬೇಕು.
* ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇಳೆ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು.
* ಸಮಿತಿಯವರು ಕಡ್ಡಾಯವಾಗಿ ಸಮವಸ್ತ್ರ ಬಳಸಬೇಕು.
English summary
The State Government has appealed to the people to celebrate Ganesh Chaturthi in an eco-friendly way by opting for unpainted idols. Also the Bangalore police have issued a list of guidelines for people to observe during the festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X